ಜೂ.5: ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 3ನೇ ಹಂತದ ಉಚಿತ ವೈದ್ಯಕೀಯ ಶಿಬಿರ

0

ಪುತ್ತೂರು: ಭಕ್ತಾದಿಗಳಿಗಾಗಿ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಶ್ರಯದಲ್ಲಿ ಆರೋಗ್ಯ ರಕ್ಷಾ ಸಮಿತಿಯ ವತಿಯಿಂದ ಪ್ರತಿ ತಿಂಗಳು ನಡೆಯುವ ಉಚಿತ ಆರೋಗ್ಯ ಶಿಬಿರದ ಮೂರನೇ ಹಂತದ ಶಿಬಿರವು ಜೂ.5ರಂದು ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಮೇ.28ರಂದು ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.


ಈ ಬಾರಿಯ ಶಿಬಿರದಲ್ಲಿ ವೈದ್ಯಕೀಯ ತಜ್ಞ ಡಾ ಸುರೇಶ್ ಪುತ್ತೂರಾಯ, ಇಎನ್‌ಟಿ ವೈದ್ಯರಾದ ಡಾ.ರಾಮಮೋಹನ್, ಆಯುರ್ವೇದ ತಜ್ಞರಾದ ಡಾ.ವೇಣುಗೋಪಾಲ್ ಹಾಗೂ ಡಾ.ದೀಕ್ಷಾ ಶಿಬಿರದಲ್ಲಿ ತಜ್ಞ ವೈದ್ಯರುಗಳಾಗಿ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಇಎನ್‌ಟಿ ಪರೀಕ್ಷೆ, ಮೂಳೆಸಾಂದ್ರತೆ, ರಕ್ತ ಪರೀಕ್ಷೆ ಹಾಗೂ ರಕ್ತ ವರ್ಗೀಕರಣ, ಇತರ ಸಾಮಾನ್ಯ ಪರೀಕ್ಷೆಗಳನ್ನು ನಡೆಸಿ, ಅವುಗಳಿಗೆ ಸಂಬಂಧಿಸಿ ಔಷಧಿಗಳನ್ನು ಸ್ಥಳದಲ್ಲಿಯೇ ಉಚಿತವಾಗಿ ವಿತರಿಸಲಾಗುವುದು. ಜೊತೆಗೆ ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ ಹಾಗೂ ಬೂಸ್ಟರ್ ಡೋಸ್‌ಗಳ ವಿತರಣೆಯು ನಡೆಯಲಿದೆ. ರಕ್ತ ಪರೀಕ್ಷೆ ಹಾಗೂ ವರ್ಗೀಕರಣಗಳು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಚೇತನ್‌ಪ್ರಕಾಶ್‌ರವರ ನೇತೃತ್ವದಲ್ಲಿ ನಡೆಯಲಿದೆ. ಶಿಬಿರವು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿದೆ.
ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಶಿಬಿರ ನಡೆಯುವ ಕುರಿತು ಮಾಹಿತಿ ನೀಡಿದರು. ಆರೋಗ್ಯ ರಕ್ಷಾ ಸಮಿತಿ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ, ಅರುಣ್ ಕುಮಾರ್ ಪುತ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಚಿತ ರಕ್ತ ಪರೀಕ್ಷೆ, ಇಸಿಜಿ ಹಗೂ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು. ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ, ಮಹಾವೀರ ಆಸ್ಪತ್ರೆ, ಸುಶ್ರುತ ಆಯುರ್ವೇದ ಆಸ್ಪತ್ರೆಗಳು ಹಾಗೂ ಹಲವು ಔಷಧಿ ಕಂಪನಿಗಳು ಶಿಬಿರದಲ್ಲಿ ಸಹಕರಿಸಲಿದ್ದಾರೆ. ರಕ್ತಪರೀಕ್ಷೆ ನಡೆಸುವ ಮಧುಮೇಹದ ರೋಗಿಗಳು ಖಾಲಿ ಹೊಟ್ಟೆಯಲ್ಲಿ ಭಾಗವಹಿಸಬೇಕು. ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಡಾ.ಸುರೇಶ್ ಪುತ್ತೂರಾಯ ಮಾಹಿತಿ ನೀಡಿದರು.
ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್‌ರವರ ತಾಯಿ ದಿ.ಸುಶೀಲ ಬೈಲಾಡಿಯವರ ಸ್ಮರಣಾರ್ಥ ಶಿಬಿರದಲ್ಲಿ ಊಟ, ಉಪಹಾರಗಳು ನಡೆಯಲಿದೆ.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಕುಮಾರ್ ನಾಯರ್, ಜಗದೀಶ್, ವಿನ್ಯಾಸ್, ಶಶಿಕಲಾ ನಿರಂಜನ ಶೆಟ್ಟಿ, ಪ್ರೇಮಾ, ಉತ್ಸವ ಸಮಿತಿ ಉಪಾಧ್ಯಕ್ಷ ಭೀಮಯ್ಯ ಭಟ್, ನಗರ ಸಭಾ ಸದಸ್ಯ ಶೀನಪ್ಪ ನಾಯ್ಕ, ಹರಿಣಿ ಪುತ್ತೂರಾಯ, ರಮೇಶ್ ರೈ ಮೊಟ್ಟೆತ್ತಡ್ಕ, ಸಂತೋಷ್ ಮುಕ್ರಂಪಾಡಿ., ರಾಜೇಶ್ ರೈ, ರವೀಂದ್ರ ಬೈಲಾಡಿ, ವಸಂತ ಗೌಡ, ನವೀನ್ ಕುಕ್ಕಾಡಿ, ಉಮೇಶ್ ಕುಕ್ಕಾಡಿ, ರವೀಂದ್ರ ಪೂಜಾರಿ ಸಂಪ್ಯ, ಸುರೇಶ್, ಜಯರಾಮ ಪಂಜಳ, ಉಮೇಶ್ ಎಸ್.ಕೆ. ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here