ಪುತ್ತೂರು ಕಸಬಾ, ಉಪ್ಪಿನಂಗಡಿ, ಕಡಬ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬಿತ್ತನೆ ಬೀಜ ಲಭ್ಯ

0

ಪುತ್ತೂರು : ಪುತ್ತೂರು ತಾಲೂಕಿನ ಪುತ್ತೂರು ಕಸಬಾ, ಉಪ್ಪಿನಂಗಡಿ ಹಾಗೂ ಕಡಬ ರೈತ ಸಂಪರ್ಕ ಕೇಂದ್ರಗಳಲ್ಲಿ M.O.4 (ಭದ್ರ) ಹಾಗೂ ಜ್ಯೋತಿ ತಳಿಯ ಬಿತ್ತನೆ ಬೀಜ ದಾಸ್ತಾನು ಇರಿಸಲಾಗಿದ್ದು ರೈತರು ಆರ್‌ಟಿಸಿ, ಆಧಾರ್ ಹಾಗೂ ಬ್ಯಾಂಕ್ ಖಾತೆಯ ಜೆರಾಕ್ಸ್ ಪ್ರತಿ ಸಲ್ಲಿಸಿ ಬಿತ್ತನೆ ಬೀಜ ಪಡೆದುಕೊಳ್ಳಬಹುದು. ಎಕರೆಗೆ 25 ಕೆ.ಜಿಯಂತೆ ಗರಿಷ್ಟ 5 ಎಕರೆಯವರೆಗೆ ಬಿತ್ತನೆ ಬೀಜನ್ನು ನೀಡಲಾಗುವುದು. ಸಾಮಾನ್ಯ ರೈತರಿಗೆ ಕೆ.ಜಿ.ಗೆ ರೂ.8, ಪ.ಜಾತಿ/ಪಂಗಡದ ರೈತರಿಗೆ ಕೆ.ಜಿ.ಗೆ ರೂ.12 ಸಹಾಯಧನ ನಿಡಲಾಗುವುದು.M.O.4(ಭದ್ರ) ತಳಿ ಕೆ.ಜಿ.ಗೆ ರೂ.41.50 ಹಾಗೂ ಜ್ಯೋತಿ ತಳಿಗೆ ಕೆ.ಜಿಗೆ ರೂ.43 ದರ ನಿಗದಿಪಡಿಸಲಾಗಿದೆ. ಆಸಕ್ತ ರೈತರು ಮೇಲಿನ ದಾಕಲೆಗಳೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಿತ್ತನೆ ಬೀಜ ಪಡೆದುಕೊಳ್ಳಬಹುದು ಎಂದು ಪುತ್ತೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here