ವಿಕ್ಟರ್ ಪ್ರೌಢಶಾಲೆಯಲ್ಲಿ ಎಸೆಸ್ಸೆಲ್ಸಿ ಡಿಸ್ಟಿಂಕ್ಷನ್ ವಿದ್ಯಾರ್ಥಿನಿಯರಿಗೆ ಅಭಿನಂದನೆ

0

  • ನಿರಂತರ ಶ್ರಮವೊಂದೇ ಸಾಧನೆಗೆ ಮಂತ್ರದಂಡ-ವಂ|ಅಶೋಕ್ ರಾಯನ್

ಪುತ್ತೂರು: ವಿದ್ಯಾರ್ಥಿಗಳಲ್ಲಿ ಭವಿಷ್ಯವನ್ನು ಉಜ್ವಲಗೊಳಿಸುವ ಸಾಧನೆಯ ಕನಸಿರಬೇಕು. ಕನಸು ಯಶಸ್ವಿಗೊಳಿಸಬೇಕಾದರೆ ನಿರಂತರ ಪರಿಶ್ರಮ ಬೇಕು. ಸಾಧನೆಗೆ ನಿರಂತರ ಶ್ರಮವೊಂದೇ ಸಾಧನೆಯ ಮಂತ್ರದಂಡವಾಗಿದೆ ಮಾತ್ರವಲ್ಲದೆ ಜೀವನವು ಉತ್ತುಂಗತೆಯನ್ನು ಪಡೆಯಬಲ್ಲುದು ಎಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಹೇಳಿದರು.

 

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿನ ೨೦೨೧-೨೨ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿನಿಯರಿಗೆ ಜೂ.೧ ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ವಿದ್ಯಾರ್ಥಿಗಳು ಎಲ್ಲಿ ಹೋದರೂ ಉತ್ತಮ ವ್ಯಕ್ತಿಗಳಾಗಿ ಗುರುತಿಸಬೇಕು. ಎಲ್ಲರನ್ನು ಪ್ರೀತಿಯಿಂದ, ಗೌರವದಿಂದ, ನಿಸ್ವಾರ್ಥ ಮನೋಭಾವನೆಯಿಂದ ಕಾಣುವ ಮೂಲಕ ವಿಧೇಯತೆ, ವಿನಯತೆ, ಸೇವಾ ಮನೋಭಾವನೆ, ದೇವರ ಮೇಲಿನ ಭಯ-ಭಕ್ತಿ, ಹಿರಿಯರಿಗೆ ಗೌರವ, ಹೆಚ್ಚೆಚ್ಚು ಕಲಿಯುವ ಉತ್ಸಾಹ ಹಾಗೂ ಛಲಗಾರಿಕೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಪ್ರಾಥಮಿಕ ಶಿಕ್ಷಣ ಭವಿಷ್ಯದ ಅಡಿಗಲ್ಲಾದರೆ, ಪ್ರೌಢಶಿಕ್ಷಣ ಭವಿಷ್ಯದ ಪ್ರಥಮ ಮೆಟ್ಟಿಲು ಆಗಿರುತ್ತದೆ. ಶಾಲಾ ಪಠ್ಯಪುಸ್ತಕದ ಬಗ್ಗೆ ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಶಿಕ್ಷಣದಲ್ಲಿ ರಾಜಕೀಯ ಬೆರೆಸುವಂತಹ ಪ್ರಯತ್ನ ನಡೀತಿದೆ. ದೇಶದ ಸ್ವಾತಂತ್ರ್ಯ ಹೋರಾಟಗಾರರ, ಚಿಂತಕರ, ಸ್ಥಾಪಕರ ಬಗ್ಗೆ ಅವಹೇಳನಗೊಳಿಸುವ, ಶಿಕ್ಷಣ ಕ್ಷೇತ್ರವನ್ನು ಕಲುಶಿತಗೊಳಿಸುವ ಬಗ್ಗೆ ಹುನ್ನಾರ ನಡೀತಿದೆ. ಶಿಕ್ಷಣದಲ್ಲಿ ಒಳ್ಳೆಯ ಸುಸಂಸ್ಕೃತ, ದೇಶಪ್ರೇಮ ಕಲಿಸಬೇಕೇ ವಿನಹ ಮಕ್ಕಳ ಮನಸ್ಸಿನಲ್ಲಿ ವಿಷಭೀಜ ಭಿತ್ತುವ ಪ್ರವೃತ್ತಿ ಕೈಬಿಡಬೇಕು ಎಂದರು.

ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶ್ರೀಮತಿ ಲೀನಾ ರೇಗೋರವರು ಮಾತನಾಡಿ,ದೀಪ ಎಂದಿಗೂ ಮಾತನಾಡುವುದಿಲ್ಲ. ತನ್ನ ಪ್ರಖರತೆಯಿಂದ ಅದು ತನ್ನನ್ನು ತಾನೇ ಗುರುತಿಸಿಕೊಳ್ಳುತ್ತಿದೆ. ಸಾಧಕರು ತಮ್ಮನ್ನು ತಾವೇ ಗುರುತಿಸಿಕೊಳ್ಳುವುದಿಲ್ಲ. ಅವರ ಸಾಧನೆಗಳೇ ಅವರನ್ನು ಪರಿಚಯಿಸುತ್ತದೆ. ದಶಕಗಳಿಂದ ವಿದ್ಯಾರ್ಜನೆಗೈಯ್ದು ದೇಶ ವಿದೇಶಗಳಲ್ಲಿ ಶಾಲೆಯು ತನ್ನ ಹಿರಿಮೆಯನ್ನು ಹೆಚ್ಚಿಸಿದಕ್ಕೆ ವಿದ್ಯಾರ್ಥಿನಿಯರೇ ಸಾಕ್ಷಿಯಾಗಿದೆ. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿನಿಯರು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಆಗಮಿಸಬೇಕು ಎಂದರು.

ಸ್ಮರಣಿಕೆ ನೀಡಿ ಗೌರವ:
ಶಾಲೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಾದ ಮಾನ್ವಿ ವಿ.ರೈ, ವೈಷ್ಣವಿ ಜೋಗಿ, ಪೂಜಾ ಬಿ.ಕೆ, ಅಫ್ರೀನಾ, ಅಕ್ಷತಾ ಕೆ,, ದಿಶಾ ಜಿ, ಹಿತಾಶ್ರೀ ಡಿ, ರೋಶಲ್ ಪ್ರಿನ್ಸೆಟ ಡಿ’ಸೋಜ, ಚಸ್ಮಿತಾ ಬಿ, ಸುವೀಕ್ಷಾ ರೈ ಬಿ, ಪ್ರಜ್ಞಾ ಕೆ, ಸಫಾ ರಯಾನಾ, ಆಯಿಶತುಲ್ ವಫಾ, ಅವ್ವ ಕೆ.ಎನ್, ರುಚಿತಾ ಪಿ.ಆರ್, ಖುಶಿ ಎ, ನಿಹಾಲಿ ನಾಕ್, ರೋಶಲ್ ಡಿ’ಸಿಲ್ವ, ಮಾನ್ವಿ ರೈ ಕೆ, ತನ್ಮಯಿ ಡಿ, ಅನುಷ್ಕಾ, ಸೋನಲ್ ರೆನ್ನಿ ಡಿ’ಸೋಜ, ಅಪರ್ಣ ಎನ್.ಎ, ಅಮೃತಾ ಎಂ.ಪಿ, ಎಸ್.ಶ್ರೀಲಕ್ಷ್ಮೀ, ಮೌಲ್ಯ ಎಂ, ಪ್ರತೀಕ್ಷಾ, ಶರಣ್ಯ, ಅಪೇಕ್ಷಾ ಕೆ.ಜೆ ಶೆಟ್ಟಿ, ಫಾತಿಮತ್ ಫೌಝಿರಾ, ಮಾನ್ವಿತಾ ಬಿ, ಹೆಝೆಲ್ ಪಾಸ್, ಸಮೃದ್ಧಿ ಶೆಟ್ಟಿ, ಚಮೀಶ ಯು, ವರ್ಷಿಣಿ ಕೆ.ಪಿ, ಸುಶ್ರುತಾ ಸಿ.ಎಂ, ದೀಕ್ಷಿತಾ, ಅಯೆಶಾ ಮುಫೀದಾ, ಬೆನಿಟ ಡಿ’ಸೋಜ, ಖದೀಜತುಲ್ ಹಾಶಿಮಾ, ಆಯೆಶತ್ ಫರ್ವಿನಾ, ರಕ್ಷಾ ಕೆ.ಆರ್, ತನ್ವಿತಾ, ಅಫಿಯತುಲ್ ಸಫ್ನಾಝ್, ಆಯೆಶತುಲ್ ಮುನೀರಾ, ಪಿ.ಮೇಘನಾ, ಪ್ರಣಮ್ಯ ಎಂ, ಪ್ರಜ್ಞಾ, ಪ್ರಜ್ಞಾ, ವೆನಿಶ ಗ್ಲೆನ್ನಿ ಡಿ’ಸೋಜ, ಖತಿಜತ್ ಸಫಾನಾ, ಸಾನಿಧ್ಯ, ಪ್ರಿನ್ಸಿಟ ಡಿ’ಸೋಜ, ಕನ್ನಿಕಾ ಎಲ್.ಎಂ, ಪಾಯಲ್ ಶೈನಾ ಡಿ’ಕೋಸ್ಟ, ಸಾತ್ವಿಕಾ, ಬಿ.ಎಂ ಗಾನವಿ, ಆಯಿಶತ್ ಆಝ್ಮಿಯ, ಮೋಕ್ಷಾ, ಶ್ರಾವ್ಯ ಪಿ, ಆಯೆಶತ್ ಸುಹಾನಾ, ಅಫ್ರಿದಾ, ಫಾತಿಮತ್ ಸಮ್ನಾಝ್, ಅನ್ಸಿಲ್ಲ ಅನೀಶ ಮೊಂತೇರೋ, ಮಧುರಾ ರೈ ಎಸ್, ಸೌಜನ್ಯ, ಸ್ನೇಹ, ಪ್ರಿನ್ಸಿ ಡಿ’ಸೋಜ, ಎ.ಜೆ ಆಯೆಶತ್ ಜಬಿನಾ, ತುಷಾರಾ ಎನ್, ಆಯಿಷಾ ನಹೀಮಾ, ಸೌಪರ್ಣಿಕ ವಿ.ಎಸ್, ಸಾನ್ವಿ ಡಿ.ಎಸ್, ಹಿತೈಷಿ ಎಲ್.ಎಸ್, ಫಾಮಿಝಾ, ಫಾತಿಮತ್ ರಫಾ, ಸುಕನ್ಯ, ಲೆನಿಟ ಪ್ರೀಮಾ ಡಿ’ಸೋಜ, ಎಂ.ಎಸ್ ಫಾತಿಮತ್ ಸಮ್ನಾ, ಆಯೆಶತ್ ತನ್ಸೀಫಾ, ಈಶ, ರಕ್ಷಾ, ಗ್ರೀಶ್ಮಾ ಎಂರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಾಲೆಯ ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷೆ ಚಿತ್ರಕಲಾ ರಾಜೇಶೇಖರ್, ಶಾಲಾ ನಾಯಕಿ ಧನ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ  ಶೈಲಾ ಮಸ್ಕರೇನ್ಹಸ್ ಡಿಸ್ಟಿಂಕ್ಷನ್ ವಿದ್ಯಾರ್ಥಿನಿಯರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದರು. ಶಿಕ್ಷಕಿ ಲೆನಿಟ ಮೊರಾಸ್ ಡಿಸ್ಟಿಂಕ್ಷನ್ ವಿದ್ಯಾರ್ಥಿನಿಯರ ಹೆಸರನ್ನು ಓದಿದರು. ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೊ ಸ್ವಾಗತಿಸಿ, ಶಿಕ್ಷಕ ರೊನಾಲ್ಡ್ ಮೋನಿಸ್ ವಂದಿಸಿದರು. ಶಿಕ್ಷಕಿ ಶ್ರೀರೀನಾ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು.

ಮೌಲ್ಯಯುತ ಶಿಕ್ಷಣ ಶಾಲೆಯು ಕಲಿಸಿದೆ…
ಕಳೆದ ಮೂರು ವರ್ಷ ವಿಕ್ಟರ್ ಶಾಲಾ ಕ್ಯಾಂಪಸ್‌ನಲ್ಲಿ ಉತ್ತಮವಾಗಿ ಕಳೆದಿದ್ದೇವೆ. ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ವಿದ್ಯಾರ್ಥಿನಿಯರ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡಿದ್ದಾರೆ. ಎಲ್ಲವನ್ನು ಸುಲಭವಾಗಿ ಪರಿಗಣಿಸಿದರೆ ಎಲ್ಲವೂ ಸುಲಭ ಎನಿಸುವುದು. ಶಾಲೆಯು ನಮ್ಮಲ್ಲಿ ಮೌಲ್ಯಯುತ ಶಿಕ್ಷಣ ನೀಡುವುದರ ಜೊತೆಗೆ ಆಂತರಿಕ ಕೌಶಲ್ಯವನ್ನು ಹೆಚ್ಚಿಸಿದೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಹೆತ್ತವರು ಹಾಗೂ ಶಿಕ್ಷಕರು ತುಂಬಾ ಸಹಕಾರ ನೀಡಿದ್ದಾರೆ. ಉನ್ನತ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು.

ಶಾಲೆಯಲ್ಲಿನ ಶಿಕ್ಷಕರ ಮಾರ್ಗದರ್ಶನದಿಂದ ಶಾಲೆಯ ಶೈಕ್ಷಣಿಕ ಫಲಿತಾಂಶದಲ್ಲಿ ಹೆಚ್ಚಳ ಕಂಡಿದೆ ಮಾತ್ರವಲ್ಲದೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಖ್ಯೆಯಲ್ಲೂ ಹೆಚ್ಚಳ ಕಂಡಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಆರಿಸುವ ವಿಷಯವು ಉತ್ತಮ ಜೀವನ ರೂಪಿಸುವಂತಾಗಲಿ. ಮುಂದಿನ ಬಾರಿ ಶಾಲೆಯು ಶೇ.ನೂರು ಫಲಿತಾಂಶ ಗಳಿಸುವಂತಾಗಲಿ ಎಂದು ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಪ್ರವೀಣ್ ಡಿ.ರವರು ಹೇಳಿದರು.

LEAVE A REPLY

Please enter your comment!
Please enter your name here