ವಿದ್ಯಾರ್ಥಿಗಳ, ಶಿಕ್ಷಕರ, ಪೋಷಕರ ಪರಿಶ್ರಮದಿಂದ ಶ್ರೀ ರಾಮಕೃಷ್ಣ ಪ್ರೌಢಶಾಲೆ ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿದೆ ಮುಖ್ಯೋಪಾಧ್ಯಾಯನಿ, ದ್ವಿತೀಯ ದರ್ಜೆ ಸಹಾಯಕಿ ವಿದಾಯ, ಎಸ್‌ಎಸ್‌ಎಲ್‌ಸಿ ಟಾಪರ್‍ಸ್‌ಗೆ ಗೌರವ ಸಮಾರಂಭದಲ್ಲಿ ಕಾವು ಹೇಮನಾಥ ಶೆಟ್ಟಿ

0

  • ಪ್ರೌಢಶಾಲೆಯೇ ಪೌಂಡೇಶನ್ ಕೋರ್ಸ್ – ಝೇವಿಯರ್ ಡಿ’ಸೋಜ
  • ಹೆತ್ತವರ, ಅಧ್ಯಾಪಕರ ಶ್ರಮಕ್ಕೆ ಅಭಿನಂದನೆ – ದಯಾನಂದ ರೈ ಮನವಳಿಕೆಗುತ್ತು
  • ಬದುಕು ಹುಟ್ಟಿನಿಂದ ಸಾವಿನಿಂದ ಕಲಿಕೆಯಾಗಿರುತ್ತದೆ – ಡಾ.ಶ್ರೀಪ್ರಕಾಶ್

ಪುತ್ತೂರು: ವರ್ಷದಿಂದ ವರ್ಷಕ್ಕೆ ಅತೀ ಹೆಚ್ಚು ಸಾಧನೆ ಮಾಡುತ್ತಿರುವ ನಮ್ಮ ಸಂಸ್ಥೆ ಅಂತರಾಷ್ಟ್ರೀಯ    ಮಟ್ಟದಲ್ಲೂ ನಮ್ಮ ಸಂಸ್ಥೆ ಉಲ್ಲೇಖ ಮಾಡಬಹುದು. ಯಾಕೆಂದರೆ ಪ್ರೌಢಶಾಲಾ ವಿಭಾಗದಲ್ಲಿ ಒಂದೇ ಸಂಸ್ಥೆಯಿಂದ 22 ಮಂದಿ ವಿದ್ಯಾರ್ಥಿಗಳು ವಿದೇಶದಲ್ಲಿ ಜಗತ್ತಿನ ಬೇರೆ ಬೇರೆ ದೇಶಗಳಿಗೆ ನಮ್ಮ ದೇಶದ ರಾಯಭಾರಿಯಾಗಿ ಬೇರೆ ಬೇರೆ ಯೋಜನೆ ರೂಪಿಸುವ ಸಾಧನೆ ಮಾಡಿದ್ದಾರೆ. ಇದು ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಪೋಷಕರ ಪರಿಶ್ರಮದ ಪ್ರತಿಫಲ ಎಂದು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಹೇಳಿದರು.

ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಜೂ.2ರಂದು ನಡೆದ ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ದ್ವಿತೀಯ ದರ್ಜೆ ಸಹಾಯಕರ ವಿದಾಯ ಸಮಾರಂಭ ಹಾಗೂ 2021-2022ನೇ ಸಾಲಿನ ಪ್ರತಿಭಾನ್ವಿತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ಯಾವುದೇ ಒಂದು ಶಿಕ್ಷಣ ಸಂಸ್ಥೆಯಿAದ 22 ಮಂದಿ ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಿಲ್ಲ. ಅದೇ ರೀತಿ ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂದರ್ಭದಲ್ಲಿ ಯಾವುದೇ ಒಬ್ಬ ವಿದ್ಯಾರ್ಥಿಯನ್ನು ಅಂಕ ಕಡಿಮೆ ಇದೆ ಎಂದು ಹಿಂದಕ್ಕೆ ಕಳುಹಿಸಿಲ್ಲ. ಎಲ್ಲರನ್ನು ದಾಖಲಾತಿ ಮಾಡಿಕೊಂಡು ಪ್ರತಿ ವರ್ಷ ಸಾಧನೆ ಮಾಡಿಕೊಂಡು ಬಂದಿದ್ದೇವೆ. ಕೋವಿಡ್ ಬಳಿಕದ ವ್ಯವಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಆಂಗ್ಲ ಮಾದ್ಯಮದಲ್ಲಿ ಓರ್ವ ಅನುರ್ತೀಣರಾದ್ದರಿಂದ ಶೇ. 99 ಆಗಿದೆ. ಆದರೂ ಕನ್ನಡ ಮತ್ತು ಆಂಗ್ಲ ಮಾಧ್ಯಮ ಸೇರಿ ಒಟ್ಟು 40 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ವಿಶೇಷ ಸಾಧನೆ ಮಾಡಿರುವುದು ಸಂತೋಷ ತಂದಿದೆ. ಇದರಲ್ಲೋ ಓರ್ವ ವಿದ್ಯಾರ್ಥಿನಿ 623 ಅಂಕ ಪಡೆದಿರುವುದು ಸಂಸ್ಥೆಯ ಗೌರವ ಹೆಚ್ಚಿಸಿದೆ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಉತ್ತರ ಪತ್ರಿಕೆಯನ್ನೇ ಇಟ್ಟು ಕಳುಹಿಸುವ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಯಾರು 600 ರಿಂದ ಮೇಲೆ ಅಂಕ ಪಡೆದಿದ್ದಾರೋ ಅದು ಪ್ರಾಮಾಣಿಕ ಅಂಕ. ನಮ್ಮ ಜಿಲ್ಲೆಯಲ್ಲಿ ಸಿಗುವ ಶಿಕ್ಷಣ ಗುಣಮಟ್ಟ ರಾಜ್ಯದಲ್ಲಿ ಬೇರೆ ಎಲ್ಲೂ ಇಲ್ಲ. ಆದರೆ ಇವತ್ತು ಫಲಿತಾಂಶ ಮಾತ್ರ ನೋಡುವುದು ದುರದೃಷ್ಟಕರ. ಒಂದು ವೇಳೆ ಇತರ ಜಿಲ್ಲೆಯಲ್ಲಿ ರ‍್ಯಾಂಕ್ ಪಡೆದವರು ಮತ್ತು ನಮ್ಮ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಪುನಃ ಪರೀಕ್ಷೆ ನಡೆಸಿದರೆ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ನಂಬರ್ ವನ್ ಪಡೆಯುವುದು ಗ್ಯಾರೆಂಟಿ ಎಂದರು.

ಪ್ರಾಮಾಣಿಕ ಗುರುಗಳು:
ನಿವೃತ್ತ ಮುಖ್ಯೋಪಾಧ್ಯಾನಿ ರೂಪಕಲಾ ಅವರು ಒಂದು ವರ್ಷ ಹಿಂದೆಯೇ ನಿವೃತ್ತಿಯಾದರೂ ಕೋವಿಡ್‌ನ ನಿಯಮಾವಳಿಯಿಂದ ಅವರ ಬೀಳ್ಕೊಡುಗೆ ಮಾಡಲು ಅಸಾಧ್ಯವಾಗಿತ್ತು. ಕನ್ನಡ ಪಾಂಡಿತ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ಕಲಾ ಪ್ರಕಾರಗಳನ್ನು ತಿಳಿಸಿಕೊಡುತ್ತಿದ್ದ ಅವರು ವಿದ್ಯಾರ್ಥಿಗಳಿಗೆ ದೈರ್ಯ ತುಂಬುತ್ತಿದ್ದರು. ಅದೆ ರೀತಿ ತೆರೆಯ ಮೆರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕಿ ಸುವಮ್ಮ ಅವರು ಸಮಯವನ್ನು ವ್ಯರ್ಥ ಮಾಡದೆ ಕೆಲಸ ಮಾಡುತ್ತಿದ್ದರು ಎಂದು ಹೇಮನಾಥ ಶೆಟ್ಟಿ ಕಾವು ಅವರು ಅವರನ್ನು ಅಭಿನಂದಿಸಿದರು.

ಪ್ರೌಢಶಾಲೆಯೇ ಪೌಂಡೇಶನ್ ಕೋರ್ಸ್:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿ’ಸೋಜ ಅವರು ಮಾತನಾಡಿ 1 ರಿಂದ 10ನೇ ತರಗತಿಯ ಪಠ್ಯವು ಒಬ್ಬ ಸಾಮಾನ್ಯ ನಾಗರಿಕನಿಗೆ ಬದುಕು ಮತ್ತು ಕೌಶಲ್ಯ ರೂಪಿಸುವ ಜ್ಞಾನ ಕೊಡುತ್ತದೆ. ಪ್ರೌಢ ಹಂತದಲ್ಲಿ 8 ರಿಂದ 10 ರಲ್ಲಿ ಪೌಂಢೇಶನ್ ಕೋರ್ಸ್ ಸಿಗುತ್ತದೆ. ಹಾಗಾಗಿ ಯಾವ ಹಂತದಲ್ಲಿರುವಾಗ ಇರುವ ಪಠ್ಯವನ್ನು ಸರಿಯಾಗಿ ಓದದೇ ಇದ್ದರೆ ಅದು ಕೊರತೆಯಾಗಿ ಹೋಗುತ್ತದೆ. ಬದಲಾದ ಕಾಲದಲ್ಲಿ ಇತರ ವಿಚಾರಗಳಿಗಿಂತ ಹೆಚ್ಚು ತಮ್ಮನ್ನು ತಾವು ಕಲಿಕೆಗೆ ಸೀಮಿತವಾಗೊಳಿಸುವುದು ಬಹಳ ಮುಖ್ಯ ಎಂದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಶಿಕ್ಷಕರ ಸಾಫ್ಟ್ನೆಸ್ ಸಂಸ್ಥೆಯ ಏಳ್ಗೆಗೆ ಕಾರಣ. ಬರೆ ಕಟ್ಟಡಗಳಿಗಿಂತ ಸಂಸ್ಥೆಯ ಕಲಿಯುವಂತಹ ಮಕ್ಕಳ ಆತ್ಮೀಯತೆಯಿಂದ ಕಲಿಕೆ ಸುಲಭವಾಗುತ್ತದೆ. ಅದೇ ರೀತಿ ತೆರೆಯ ಮೆರೆಯ ಕೆಲಸ ಸಂಸ್ಥೆಯ ಬಹಳ ಅಗತ್ಯ. ಈ ಪಾತ್ರವನ್ನೂ ಕೂಡಾ ಈ ಸಂಸ್ಥೆಯಲ್ಲಿ ಕಂಡು ಕೊಂಡಿದ್ದೇನೆ ಎಂದರು.

ಹೆತ್ತವರ, ಅಧ್ಯಾಪಕರ ಶ್ರಮಕ್ಕೆ ಅಭಿನಂದನೆ:
ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಅವರು ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಬೇಕಾದರೆ ಅದರ ಹಿಂದೆ ಹೆತ್ತವರ, ಅಧ್ಯಾಪಕರ ಶ್ರಮ ಇದೆ. ಇದರ ಜೊತೆಗೆ ಸಿಬ್ಬಂದಿಗಳ ಸೈಲೆಂಟ್ ಕೆಲಸವು ಮುಖ್ಯ. ಇವೆಲ್ಲ ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಬೇಕೆಂದರು.

ಬದುಕು ಹುಟ್ಟಿನಿಂದ ಸಾವಿನಿಂದ ಕಲಿಕೆಯಾಗಿರುತ್ತದೆ:
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ. ಶ್ರೀಪ್ರಕಾಶ್ ಅವರು ಮಾತನಾಡಿ ನಿವೃತ್ತಿ ಬದುಕು, ವಿದ್ಯಾರ್ಥಿಗಳ ಅಂಕ ಗಳಿಕೆಯ ಸಮಯ ಕೊನೆಗೆ ಎಲ್ಲರ ಮನಸ್ಸಿನಲ್ಲಿ ಬರುಉದು ಮುಂದೆನು ಎಂಬ ಪ್ರಶ್ನೆ ಕಾಡುತ್ತದೆ ಎಂದ ಅವರು ಬದುಕು ಹುಟ್ಟಿನಿಂದ ಸಾವಿನ ತನಕ ಒಂದು ಕಲಿಕೆಯಾಗಿರುತ್ತದೆ. ಕಲಿಯುವಿಕೆಯನ್ನು ನಿರಂತರವಾಗಿ ಮಾಡುವಂತೆ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಬೇರೆ ಬೇರೆ ಕನುಸಗಳನ್ನು ಕಟ್ಟಿಕೊಂಡು ಈ ಶಾಲೆಗೆ ಬಂದಿರುವ ನೀವು ಪೋಷಕರ ಮತ್ತು ಶಿಕ್ಷಕರ ಪ್ರಯತ್ನದಿಂದ ಚೆನ್ನಾಗಿ ಬಾಲಿ ಎಂದು ಹೇಳಿದರು. ನಿವೃತ್ತ ಶಿಕ್ಷಕರು ಮತ್ತು ನಿವೃತ್ತ ದ್ವಿತೀಯ ದರ್ಜೆ ಸಹಾಯಕಿಯರಿಗೂ ಅಭಿನಂದನೆ ಸಲ್ಲಿಸಿದರು.

ಸನ್ಮಾನ:
2020-21 ನೇ ಸಾಲಿನಲ್ಲಿ ಕನ್ನಡ ಮತ್ತು ಆಂಗ್ಲ ಮದ್ಯಾಮದಲ್ಲಿ ಶಾಲೆಗೆ ಶೇ.99 ಅಂಕ ಪಡೆದ ಹಿನ್ನಲೆಯಲ್ಲಿ 40 ಮಂದಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. 623 ಅಂಕ ಸೇರಿದಂತೆ 7 ಮಂದಿ ವಿಶಿಷ್ಟ ಶ್ರೇಣಿ, 600 ಅಂಕ ಪಡೆದ 8 ಮಂದಿ, 25 ಮಂದಿ ಎ ಪ್ಲಸ್ ಶ್ರೇಣಿ, 14 ಮಂದಿ ಎ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 2021-22 ನೇ ಸಾಲಿನಲ್ಲಿ ಸೈಹಾದ್ರಿ ವಿದ್ಯಾಸಂಸ್ಥೆ ಎರ್ಪಡಿಸಿದ ವೈಜ್ಣಾನಿಕ ಪ್ರದರ್ಶನದಲ್ಲಿ ಭಾಗವಹಿಸಿದ ಸಂಸ್ಥೆಯ 11 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಣೆ ಮಾಡಲಾಯಿತು. ಅಂಚೆ ಇಲಾಖೆ ಏರ್ಪಡಿಸಿದ ಬರವಣಿಕೆಯಲ್ಲಿ ಪ್ರಶಸ್ತಿ ಪಡದ ಕೃಷ್ಣಪ್ರಸಾದ್, ಸೌಮ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಕಿ ಸಂಧ್ಯಾ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.

ನಿವೃತ್ತರಿಗೆ ಸನ್ಮಾನ:
ನಿವೃತ್ತ ಮುಖ್ಯೋಪಾಧ್ಯಾಯಿನಿ ರೂಪಕಲಾ ಮತ್ತು ದ್ವಿತಿಯ ದರ್ಜೆ ಸಹಾಯಕಿ ಸುವಮ್ಮ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತರಿಗೆ ಆರತಿ ಬೆಳಗಿಸಿ, ಕುಂಕುಮ ಹಂಚಿ, ತಲೆಗೆ ಮಲ್ಲಿಗೆ ಮುಡಿಸಿ, ಹಾಲು ಕುಡಿಸಿ, ಶಾಲು, ಹಾರ, ಸನ್ಮಾನ ಪತ್ರ, ಸ್ಮರಣಿಕೆ ಹಾಗೂ ಉಂಗುರ ತೊಡಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗಾಗಿ ವಿದ್ಯಾರ್ಥಿನಿಯರು ರಚಿಸಿದ ಹಾಡನ್ನು ವಿದ್ಯಾರ್ಥಿನಿಯರೇ ಹಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಸುನಿತಾ ಸನ್ಮಾನಿತರ ಕುರಿತು ಅಭಿಪ್ರಾಯ ಮಂಡಿಸಿದರು. ಈ ಸಂದರ್ಭದಲ್ಲಿ ಸುವಮ್ಮ ಅವರ ಮಗಳು ಅನುಪಮ, ಅಳಿಯ, ಮೊಮ್ಮಗ ಉಪಸ್ಥಿತರಿದ್ದರು. ಸನ್ಮಾನಿತ ಸನ್ಮಾನಿತ ರೂಪಕಲಾ ಮತ್ತು ಸುವಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಶ್ತೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ ಮುಖ್ಯಗುರು ಮನೋಹರ್ ರೈ, ನಿವೃತ ವೃತಿಕಲಾ ಶಿಕ್ಷಕಿ ವನಿತಾ ಕುಮಾರಿ, ನಿವೃತ ಶಿಕ್ಷಕಿ ವಸಂತಿ, ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿರುವ ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ  ಸ್ವಾಗತಿಸಿದರು. ಶಿಕ್ಷಕಿ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸ್ಮಿತಾ ವಂದಿಸಿದರು. ನಿವೃತ ಅಧ್ಯಾಪಕ ದಯಾನಂದ ರೈ, ರಘುನಾಥ ರೈ, ರವಿಪ್ರಸಾದ್ ಶೆಟ್ಟಿ, ಪೋಷಕರು ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here