ವಿಟ್ಲದಲ್ಲಿ ಪಿಎಫ್‌ಐ ಪ್ರತಿಭಟನೆ

0

ವಿಟ್ಲ: ಸಂಘಟನೆಯ ಬ್ಯಾಂಕ್ ಖಾತೆಗಳ ಮುಟ್ಟುಗೋಲು ಹಾಕಿರುವ ಇಡಿಯ ವಿರುದ್ಧ ಜೂ.೩ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ವಲಯ ವತಿಯಿಂದ ವಿಟ್ಲದಲ್ಲಿ ಪ್ರತಿಭಟನೆ ನಡೆಯಿತು. ಪಿ ಎಫ್ ಐ ರಾಜ್ಯ ಸಮಿತಿ ಸದಸ್ಯ ತುಪೈಲ್ ಮಾತನಾಡಿ ಪಿ ಎಫ್ ಐ ನಡೆಸುತ್ತಿರುವ ಹೋರಾಟ ಹತ್ತಿಕ್ಕಲು ಐಟಿ ಮತ್ತು ಇಡಿ ಈ ರೀತಿಯಾಗಿ ಮಾಡುತ್ತಿದೆ. ಆದರೆ ಪಿ ಎಫ್ ಐ ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ. ಪಿ ಎಫ್ ಐ ಎಂಬುದು ಒಂದು ಜನಾಂದೋಲನವಾಗಿದೆ. ಇದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದರು.


ಈ ಸಂದರ್ಭ ಪಿ ಎಫ್ ಐ ವಿಟ್ಲ ವಲಯ ಅಧ್ಯಕ್ಷ ರಹೀಂ ಹಾಲಾಡಿ, ಕಾರ್ಯದರ್ಶಿ ಹನೀಫ್, ವಿಟ್ಲ ಡಿವಿಜನ್ ಅಧ್ಯಕ್ಷ ಶಾಫಿ ಮಾಳಿಗೆ, ಕಲ್ಲಡ್ಕ ಡಿವಿಜನ್ ಅಧ್ಯಕ್ಷ ಸಿದ್ದಿಕ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here