ಮಂಜುನಾಥನಗರ : ಉಚಿತ ನೇತ್ರ ಚಿಕಿತ್ಸಾ ಶಿಬಿರ

0


ಸವಣೂರು: ಮೋದಿ ನೇತೃತ್ವದ ಕೇಂದ್ರ ಸರಕಾರ ಎಂಟು ವರ್ಷ ಪೂರ್ಣಗೊಳಿಸಿದ ಸುಸಂದರ್ಭದಲ್ಲಿ
ಸೇವೆ ಸುಶಾಸನ ಬಡವರ ಕಲ್ಯಾಣ ಕಾರ್ಯಕ್ರಮದಡಿ  ಭಾರತೀಯ ಜನತಾ ಪಾರ್ಟಿ ಬೂತ್ ಸಮಿತಿ ಪಾಲ್ತಾಡಿ,ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ,ಸಿದ್ಧಿ ವಿನಾಯಕ ಸೇವಾ ಸಂಘ ,ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಇದರ ಆಶ್ರಯದಲ್ಲಿ ಪಾಲ್ತಾಡಿ ಗ್ರಾಮದ ಮಂಜುನಾಥನಗರ ಸಿದ್ದಿವಿನಾಯಕ ಸಭಾಭವನದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಹಿರಿಯರಾದ ಬಿ. ಕೆ.ರಮೇಶ್ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆನಂದಾಶ್ರಮದ ಸೇವಾ ಟ್ರಸ್ಟ್ ‌ನ ಡಾ.ಗೌರಿ ಪೈ,ಸಿದ್ಧಿವಿನಾಯಕ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಬಂಬಿಲದೋಳ, ಬಿಜೆಪಿ ಪಾಲ್ತಾಡಿ ಶಕ್ತಿ ಕೇಂದ್ರದ ಪ್ರಮುಖ್ ಮಹೇಶ್ ಕೆ.ಸವಣೂರು, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಪ್ರಸಾದ್ ರೈ ಬೈಲಾಡಿ, ಅಂಗಾಂಗ ದಾನ ವಿಭಾಗದ ಲವೀನಾ,ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳು,ನೇತ್ರ ಸಂಚಾರಿ ಘಟಕದ ಸಿಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆನಂದಾಶ್ರಮದ ಸೇವಾ ಟ್ರಸ್ಟ್ ‌ನ ಡಾ.ಗೌರಿ ಪೈ ಅವರನ್ನು ಗೌರವಿಸಲಾಯಿತು. ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ಸ್ವಾಗತಿಸಿ,ವಿವೇಕಾನಂದ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಪ್ರಸಾದ್ ಬೈಲಾಡಿ ವಂದಿಸಿದರು.ವಿವೇಕಾನಂದ ಯುವಕ ಮಂಡಲದ ಕಾರ್ಯದರ್ಶಿ ಸತ್ಯಪ್ರಕಾಶ್ ಕಾರ್ಯಕ್ರಮ  ನಿರೂಪಿಸಿದರು.

LEAVE A REPLY

Please enter your comment!
Please enter your name here