ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿ ಬಸ್ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ: ನಗರಸಭೆಗೆ ಹೊರೆಯಿಲ್ಲದ ಬಸ್ ತಂಗುದಾಣಗಳು – ಸಂಜೀವ ಮಠಂದೂರು

0

ಪುತ್ತೂರು: ಪುತ್ತೂರು ನಗರದಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಅನಿವಾರ್ಯವಾಗಿ ಬಸ್ ಪ್ರಯಾಣಿಕರ ತಂಗುದಾಣ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನೊಳಗೊಂಡ ಬಸ್‌ತಂಗುದಾಣಗಳನ್ನು ಪುತ್ತೂರು ನಗರಸಭೆಗೆ ಯಾವುದೆ ಹೊರೆಯಿಲ್ಲದೆ ನಾಲ್ಕು ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಮಂಜಲ್ಪಡ್ಪುವಿನ ಸುದಾನ ವಸತಿಯುತ ಶಾಲೆಯ ಬಳಿ ತಿರುಮಲ ಹೋಂಡಾ ಮತ್ತು ಪುತ್ತೂರು ಪ್ರಧಾನ ಅಂಚೆ ಕಚೇರಿಯ ಮುಂಭಾಗ ಜಿ.ಎಲ್.ಆಚಾರ್ಯ ಜ್ಯುವೆಲ್ಸ್‌ನ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ಬಸ್ ಪ್ರಯಾಣಿಕರ ತಂಗುದಾಣವನ್ನು ಜೂ.4ರಂದು ಮುಸ್ಸಂಜೆ ಉದ್ಘಾಟಿಸಿ ಮಾತನಾಡಿದರು. ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಜಾಹಿರಾತು ಮಾಡಿ ಖರ್ಚು ಭರಿಸಲಾಗಿದ್ದು, ನಗರದ ಅಂದವನ್ನು ನಗರಕ್ಕೆ ಆದಾಯವನ್ನು ತರುವಂತಹ ಕೆಲಸ ಮಾಡುವ ಮೂಲಕ ಪುತ್ತೂರಿನ ಬೇಡಿಕೆ ಈಡೇರಿದೆ.

 

ಆಧುನಿಕತೆಯನ್ನು ಮೈಗೂಡಿಸಿಕೊಂಡ ಪುತ್ತೂರಿನಲ್ಲಿ ಆಧುನಿಕ ತರದ ಬಸ್‌ತಂಗುದಾಣವು ನಿರ್ಮಾಣ ಆಗಿದೆ. ಪ್ರತಿ ಪೀಳಿಗೆಗೂ ಇಂತಹ ಸ್ಮಾರ್ಟ್ ಬಸ್ ನಿಲ್ದಾಣ ಬೇಕು ಎಂದರು. ಈ ಸಂದರ್ಭದಲ್ಲಿ ಪುತೂರು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಗೌರಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭಾ ಸದ್ಯಸ್ಯರಾದ ಸುಂದರ ಪೂಜಾರಿ ಬಡಾವು, ಪದ್ಮನಾಭ ನಾಯ್ಕ್, ದೀಕ್ಷಾ ಪೈ, ನವೀನ್ ಪೆರಿಯತ್ತೋಡಿ, ಶಿವರಾಮ ಸಪಲ್ಯ, ಸಂತೋಷ್ ಬೊಳುವಾರು, ವಸಂತ ಕಾರೆಕ್ಕಾಡು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್, ವಿಶ್ವನಾಥ್ ಕುಲಾಲ್, ಕೌಶಲ್ ಮೀಡಿಯಾದ ಮಾದವ ಮಾವೆ, ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ಕಲ್ಲೇಗ, ವಿನೋದ್ ಕಲ್ಲೇಗ, ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here