ಕೋಡಿಂಬಾಡಿಯಲ್ಲಿ ಸುಗಮ ಸಂಗೀತ ತರಗತಿ ಉದ್ಘಾಟನೆ

0

ಪುತ್ತೂರು: ಕೋಡಿಂಬಾಡಿಯಲ್ಲಿ ಕಾರ್ಯ ನಿರ್ವಹಿಸಲಿರುವ ದೇವಿ ಸುಗಮ ಸಂಗೀತ ತರಗತಿಯ ಉದ್ಘಾಟನೆ ಕೋಡಿಂಬಾಡಿ ಚತುರ್ಥಿ ರಂಗ ಮಂದಿರದಲ್ಲಿ ನಡೆಯಿತು. ಕೋಡಿಂಬಾಡಿ ಹಿ.ಪ್ರಾ. ಶಾಲಾ ಪ್ರಭಾರ ಮುಖ್ಯಗುರು ಲಕ್ಷ್ಮಿ, ಸಂಗೀತ ಗುರು ಕವಿತಾ ದಿನಕರ್ ಮತ್ತು ತಾಲೂಕು ಮಹಿಳಾ ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ ಎಸ್.ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕೋಡಿಂಬಾಡಿ ವನಿತಾ ಸಮಾಜದ ಕೋಶಾಧಿಕಾರಿ ವೇದಾವತಿ ಸದಾಶಿವ ರೈ, ನಾಟಿ ವೈದ್ಯೆ ದಮಯಂತಿ ಕಾಪು, ಶೀಲಾ, ಪವಿತ್ರಾ ಸುರೇಶ್, ಪ್ರೇಮಲತಾ ಡೆಕ್ಕಾಜೆ, ವಿಜಯ ಉಪಸ್ಥಿತರಿದ್ದರು. ಪ್ರತೀ ಶನಿವಾರ ಅಪರಾಹ್ನ 1.30ರಿಂದ ವಿದ್ಯಾರ್ಥಿಗಳಿಗೆ ಮತ್ತು 3ರಿಂದ ಮಹಿಳೆಯರಿಗೆ ಸಂಗೀತ ತರಗತಿ ನಡೆಯಲಿದೆ. ಸುಗಮ ಸಂಗೀತ ಹಾಗೂ ಭಜನಾ ತರಗತಿ ಕೂಡ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here