ಬಡಗನ್ನೂರುಃ ಗ್ರಾ.ಪಂ ಸಾಮಾನ್ಯ ಸಭೆ

0

ಬಡಗನ್ನೂರುಃ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ನೀಡಿದ ಅದೇಶವನ್ನು ಅಧಿಕಾರಿಗಳು ಉಲ್ಲಂಘನೆ ಮಾಡಿದ್ದ ಬಗ್ಗೆ ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.

ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ಜೂ. 23 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಈಶ್ವರಮಂಗಲ- ಸುಳ್ಯಪದವು ಲೋಕೋಪಯೋಗಿ ರಸ್ತೆಯ ಸಜಂಕಾಡಿ ಎಂಬಲ್ಲಿ ರಸ್ತೆ ಬದಿಯಲ್ಲಿ ಪಾತಲದಷ್ಟು ಗುಡ್ಡದ ಜರಿ ಇದ್ದು ಮುಂದೆ ಸಂಭವಿಸುವ ಅಪಘಾತ ತಪ್ಪಿಸುವ ದೃಷ್ಟಿಯಿಂದ   ಜಿಲ್ಲಾಧಿಕಾರಿ  ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಡಿ.ಸಿ ರವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಕರೆದು ತಕ್ಷಣ ತಡೆಗೋಡೆ ನಿರ್ಮಾಣ ಮಾಡುವಂತೆ ಅದೇಶ ನೀಡಿದ್ದರು.  ಆದರೆ ಈ ವರೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಅದೇಶ ಉಲ್ಲಂಘನೆ ಮಾಡಿದ್ದಾರೆ  ಮುಂದೆ ಯಾವುದೇ ಅವಘಡಗಳು ಸಂಭವಿಸಿದಲ್ಲಿ ಲೋಕೋಪಯೋಗಿ ಇಲಾಖಾಧಿಕಾರಿಗಲೇ ನೇರ ಹೊಣೆಗಾರರಾಗುತ್ತಾರೆ  ಎಂದು ಸದಸ್ಯ ರವಿರಾಜ ರೈ ಸಜಂಕಾಡಿ ಹೇಳಿದ ಅವರು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಬಂದಿದ್ದಾರೆ ಹೋಗಿದ್ದಾರೆ. ಅವರು ಅಧಿಕಾರಿಗಳಿಗೆ  ಅದೇಶಿಸಿದ ಯಾವುದೇ ಕೆಲಸ ಅಗಿಲ್ಲ ಎಂದು ಸದಸ್ಯ ರವಿರಾಜ ರೈ ಹೇಳಿದರು ಈ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯ ವೆಂಕಟೇಶ್ ಕನ್ನಡ್ಕ  ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕೆಲವೊಂದು ಕೆಲಸ ಆಗಿದೆ ಎಂದರು. ಈ ಬಗ್ಗೆ ಪಿಡಿಒ ವಸೀಮ ಗಂಧದ ಮಧ್ಯೆ  ಪ್ರವೇಶಿಸಿ ಗ್ರಾ.ಪಂ ಮಟ್ಟಕ್ಕೆ ಒಳಪಟ್ಟ  ಡಿ.ಸಿ ಯವರು ಅದೇಶ ಮಾಡಿದ ಕೆಲಸ ಆಗಿದೆ ಎಂದು ಹೇಳಿದರು.

ತೆರಿಗೆ ಪರೀಕ್ಷರಣೆ
ತೆರಿಗೆ ಪರೀಕ್ಷರಣೆ ಪ್ರತಿ ಎರಡು ವರ್ಷಕೊಮ್ಮೆ ಆಗಬೇಕು. ನಮ್ಮಲ್ಲಿ 4 ವರ್ಷಗಳಿಂದ ತೆರಿಗೆ ಪರೀಕ್ಷರಣೆ ಆಗಿಲ್ಲ, ಗುತ್ತಿಗೆ ಆಧಾರದಲ್ಲಿ ಮನೆಗಳನ್ನು ಅಳತೆ ಮಾಡಿ 2023 ಕ್ಕೆ ಚಾಲ್ತಿಗೆ ಬರುವ ಹಾಗೆ ಮಾಡಲಾಗುದು ಎಂದು ಅಭಿವೃದ್ಧಿ ಅಧಿಕಾರಿ ಸಭೆಯ ಗಮನಕ್ಕೆ ಇಟ್ಡರು. ಈ ಬಗ್ಗೆ ಸದಸ್ಯರು ಒಮ್ಮತ ಸೂಚಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯವರು ಮುಡಿಪಿನಡ್ಕ ಪಂಚಾಯತ್ ಆಸ್ತಿಯಲ್ಲಿದ್ದ ಮರಗಳನ್ನು ಕಡಿದು ಸಮಾರು 10 ವರ್ಷಗಳಾದರೂ ಗ್ರಾ.ಪಂ  ನೀಡಬೇಕಾದ  ಹಣವನ್ನು ನೀಡಿಲ್ಲ ಯಾಕೆ? ಈ ಬಗ್ಗೆ ತನಿಖೆ ಆಗಬೆಕು ಎಂದು ಉಪಾಧ್ಯಕ್ಷ ಸಂತೋಷ್ ಅಳ್ವ ಗಿರಿಮನೆ ಒತ್ತಾಯಿಸಿದರು.
ಈ ಬಗ್ಗೆ ಸದಸ್ಯ ರವಿರಾಜ ರೈ ಸಜಂಕಾಡಿ ಪ್ರತಿಕ್ರಿಯಿಸಿ ಸಾಮಾಜಿಕ ಅರಣ್ಯ ಇಲಾಖೆಯವರು ಗ್ರಾ.ಪಂ ನಲ್ಲಿ ಒಪ್ಪಂದ ಮಾಡಿ ಮರ ಕಟ್ಟಾವು ಮಾಡಿದ್ದಾರೆ ಅದರೆ ಅವರು ನೀಡಬೆಕಾದ ಮೊತ್ತ  6 ಲಕ್ಷ ರೂಪಾಯಿ  ಅವರು ನೀಡಿದ ದಾಖಲೆಯಲ್ಲಿ ನಮೂದಿಸಿದೆ. ಅದರ ಒಂದು ಪ್ರತಿ ನನ್ನಲ್ಲೂ ಇದೆ ಹೇಳಿದರು. ಈ ಬಗ್ಗೆ ದಾಖಲೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವ ಎಂದು ಅಭಿವೃದ್ಧಿ ಅಧಿಕಾರಿ ಸಭೆಯ ಗಮನಕ್ಕೆ ತಂದರು.
ಕುಕ್ಕಾಜೆ- ಅಡಿಲು ಸಂಪರ್ಕ ರಸ್ತೆಯನ್ನು ಪಂಚಾಯತ್ ರಸ್ತೆ ಮಾಡುವ ಬಗ್ಗೆ ಸಾರ್ವಜನಿಕ ಅರ್ಜಿ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಕ್ರಮಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.
ಕನ್ನಡ್ಕ ಪ್ರದೇಶದಕ್ಕೆ ಹೋಗುವ ಕಾಲು ದಾರಿ ಅಗಲಕಿರಿದಾಗುತ್ತಿದೆ. ಇದರಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯ ವೆಂಕಟೇಶ್ ಕನ್ನಡ್ಕ ಹೇಳಿದರು ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.  
ಕರೋನ ಮಹಾಮಾರಿಯಿಂದ ಪಡುವನ್ನೂರು ಗ್ರಾಮದಲ್ಲಿ ಇಬ್ಬರು ವ್ಯಕ್ತಿ ನಿಧನ ಹೊಂದಿದ್ದು  4 ವರ್ಷ ಕಳೆದರೂ  ಸರ್ಕಾರದಿಂದ ನೀಡುವ ಧನಸಹಾಯ ಬಂದಿಲ್ಲ , ಹೀಗಿರುವಾಗ ಸರ್ಕಾರ ಘೋಷಣೆ ಮಾಡುದೇಕೆ ಎಂದು  ಸದಸ್ಯ ರವಿರಾಜ ರೈ ಸಜಂಕಾಡಿ ಪ್ರಶ್ನಿಸಿದರು. ಈ ಬಗ್ಗೆ ಉಪಾಧ್ಯಕ್ಷ ಸಂತೋಷ್ ಅಳ್ವ ಪ್ರತಿಕ್ರಿಯಿಸಿ, ಸರ್ಕಾರ ಪಟ್ಟಿಯಲ್ಲಿ ಇರಬೇಕು ಇದ್ದವರಿಗೆ ಹಣ ಪಾವತಿಯಾಗಿದೆ ಎಂದರು. ಇ‌ ಬಗ್ಗೆ ಪಿಡಿಒ ಮಧ್ಯೆ ಪ್ರವೇಶಿಸಿ  ತಾಲೂಕು ಮಟ್ಟದಲ್ಲಿ ಶಾಸಕರ ಮುಖಾಂತರ 20 ಕುಟುಂಬಕ್ಕೆ ಸಹಾಯ ಧನ ನೀಡಲಾಗಿದೆ ಎಂದು ಹೇಳಿದರು.
ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ಕ್ನಿಷನ್ ಹುದ್ದೆ ಖಾಲಿದ್ದು ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ. ರಕ್ತ ಪರೀಕ್ಷೆ ಮಾಡಬೇಕಾದ ಸಂದರ್ಭದಲ್ಲಿ 25 ಕಿಮೀ ದೂರದ ಪುತ್ತೂರಿಗೆ ಅಲೆದಾಡುವ ಪ್ರಸಂಗ ಬರುತ್ತಿದೆ ಈ ನಿಟ್ಟಿನಲ್ಲಿ ಸಾರ್ವಜನಿಕ ಹಿತ ದೃಷ್ಟಿಯಿಂದ  ಈಶ್ವರಮಂಗಲ ಆರೋಗ್ಯ ಕೇಂದ್ರಕ್ಕೆ ಖಾಯಂ ಲ್ಯಾಬ್ ಟೆಕ್ಕ್ನಿಷನ್ ಭಡ್ತಿ ಗೊಳಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ  ಸದಸ್ಯರಾದ ವೆಂಕಟೇಶ್ ಕನ್ನಡ್ಕ, ರವಿಚಂದ್ರ ಸಾರೆಪ್ಪಾಡಿ, ಪದ್ಮನಾಭ ಕನ್ನಡ್ಕ, ಕುಮಾರ್ ಅಂಬಟೆಮೂಲೆ, ರವಿರಾಜ ರೈ ಸಜಂಕಾಡಿ, ಲಿಂಗಪ್ಪ ಗೌಡ ಮೋಡಿಕೆ, ಹೇಮಾವತಿ ಮೋಡಿಕೆ, ಸವಿತಾ ನೆರೋತ್ತಡ್ಕ, ಸುಶೀಲ ಪಕ್ಯೊಡ್, ಸುಜಾತ ಎಂ, ಪುಷ್ಪಾವತಿ ದೇವಕಜೆ, ದಮಯಂತಿ ನೆಕ್ಕರೆ ಉಪಸ್ಥಿತರಿದ್ದರು. ಗ್ರಾ.ಪಂ ಗುಮಾಸ್ತ ಜಯಾಪ್ರಸಾದ ರೈ ಸ್ವಾಗತಿಸಿ, ವಂದಿಸಿದರು, ಪಿಡಿಒ ವಸೀಮ ಗಂಧದ ಸರ್ಕಾರಿ ಸುತೋಲೆ ಹಾಗೂ ಸಾರ್ವಜನಿಕ ಅರ್ಜಿ ಓದಿದರು. ಪಂ ಸಿಬ್ಬಂದಿಗಳು ಸಹಕರಿಸಿದರು.
ಅರೋಗ್ಯ ಸಮಿತಿ ಸಭ
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ  ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡುವ ಬಗ್ಗೆ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮದ ಆಶಾ ಕಾರ್ಯಕರ್ತರಾದ  ಪುಷ್ಪಾವತಿ, ಸುಗಂಧಿ, ಸುಶೀಲ, ವಿಜಯಲಕ್ಷ್ಮಿ, ಸುಜಾತ, ಜಾನಕಿ,ಇಂದಿರಾ, ಹಾಗೂ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.  

LEAVE A REPLY

Please enter your comment!
Please enter your name here