ಹಲಸನ್ನು ತಿನ್ನುವ, ಬೆಳೆಸುವ ಮೂಲಕ ಪರಂಪರೆ ಉಳಿಸುವ – ಹಲಸು ಮೇಳ ಉದ್ಘಾಟನೆಯಲ್ಲಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ನವತೇಜ ಪುತ್ತೂರು ಮತ್ತು ಜೇಸಿ ಪುತ್ತೂರು ಜಂಟಿ ಆಯೋಜನೆಯಲ್ಲಿ 2 ದಿನಗಳ ಕಾಲ ನಡೆಯಲಿರುವ ‘ಹಲಸು ಮೇಳ’ ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾ ಮಂದಿರದ ವಠಾರದಲ್ಲಿ ಜೂ.25 ರಂದು ಉದ್ಘಾಟನೆಗೊಂಡಿದೆ.

ಬೆಳಿಗ್ಗೆ ಶಾಸಕ ಸಂಜೀವ ಮಠಂದೂರು ಅವರು ಹಲಸು ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ಹಲಸನ್ನು ತಿನ್ನುವ, ಬೆಳೆಸುವ ಮೂಲಕ ಪರಂಪರೆ ಉಳಿಸುವ ಕೆಲಸ ಆಗಬೇಕು.‌ 2 ದಿನ ಮೇಳ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಕರ್ತಿ ಬೈಲು ವೆಂಕಟೇಶ ಶರ್ಮ ಅವರು ಮಳಿಗೆಗಳನ್ನು ಉದ್ಘಾಟಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಸಭಾ ಕಾರ್ಯಕ್ರಮದಲ್ಲಿ ತಿಪಟೂರಿನ ಕೆಂಪು ಹಲಸಿನ ಹಣ್ಣನ್ನು ತುಂಡು ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಿಯಪದವು ಡಾ.ಚಂದ್ರಶೇಖರ ಚೌಟ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜೇಸಿ ಪ್ರಾದೇಶಿಕ ಅಧ್ಯಕ್ಷ ಸೆನಡರ್ ಉದಯ ಕ್ರಾಸ್ತ, ಕ್ಯಾಂಪ್ಕೊ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ನವತೇಜ ಟ್ರಸ್ಟ್ ನ ಅನಂತಪ್ರಸಾದ್ ನೈತ್ತಡ್ಕ, ಜೇಸಿ ಅಧ್ಯಕ್ಷ ಶಶಿರಾಜ್ ರೈ, ಸುಹಾಸ್ ಮರಿಕೆ, ನಾ ಕಾರಂತ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here