ರಾಮಕುಂಜ ಕ.ಮಾ.ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳಾದ ವಿಜ್ಞಾನ ಸಂಘ, ಗಣಿತ ಸಂಘ, ಸಾಹಿತ್ಯ ಸಂಘ, ಇಕೊ ಕ್ಲಬ್, ಮೀನಾ ಸಂಘ ಮುಂತಾದ 14 ಸಂಘಗಳ ಉದ್ಘಾಟನೆ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಗುಡ್ಡಪ್ಪ ಬಲ್ಯರವರು, ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯ ಮತ್ತು ಸಂಘಗಳಿಂದಾಗುವ ಪ್ರಯೋಜನಗಳನ್ನು ವಿವರಿಸಿದರು. ಶಾಲಾ ಮುಖ್ಯ ಗುರು ಸತೀಶ್ ಭಟ್‌ರವರು ಅತಿಥಿಯನ್ನು ಪರಿಚಯಿಸಿದರು. ಇಂಗ್ಲೀಷ್ ಅಧ್ಯಾಪಕ ಪ್ರವೀಣ್ ಕೆ., ರವರು ವಿವಿಧ ಸಂಘಗಳ ಕಾರ್ಯಗಳನ್ನು ತಿಳಿಸಿದರು. ಸಂಘಗಳ ನಾಯಕರಿಗೆ ಶಾಲೆಯ ಸಮಾಜ ವಿಜ್ಞಾನ ಪ್ರಾಧ್ಯಾಪಕ ದಿನೇಶ್ ಬಿ. ರವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಶಾಲಾ ವಿದ್ಯಾರ್ಥಿನಿ ಮಧುಶ್ರೀ ನಿರೂಪಿಸಿದರು.

LEAVE A REPLY

Please enter your comment!
Please enter your name here