ಸವಣೂರಿನಲ್ಲಿ ನಿವೃತ್ತ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣರವರಿಗೆ ಶಿಕ್ಷಣ ಪ್ರೇಮಿಗಳಿಂದ ಅಭಿನಂದನಾ ಕಾರ್ಯಕ್ರಮ-ಸೂರ್ಯ ತೇಜ

0

ಸವಣೂರಿನ ಮಣ್ಣಿನ ಪ್ರೀತಿಯನ್ನು ಸದಾಕಾಲ ನೆನಪಿನಲ್ಲಿಡುತ್ತೇನೆ-ಬಿ.ವಿ.ಸೂರ್ಯನಾರಾಯಣ

ಸವಣೂರು : ಸವಣೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳ ಮೂಲಕ ಶೈಕ್ಷಣಿಕ ಕ್ಷೇತ್ರದ ಅಪ್ರತಿಮ ಸಾಧಕರಾಗಿ ಮೂಡಿಬಂದ ನಿವೃತ್ತ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ ಅವರಿಗೆ ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿಯ ಶಿಕ್ಷಣ ಪ್ರೇಮಿಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮ -‘ಸೂರ್ಯತೇಜ’ ಜೂ.27ರಂದು ಸಂಜೆ ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ನಡೆಯಿತು.

ಶಿಕ್ಷಣ ಪ್ರೇಮಿಗಳಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ, ಬಿ.ವಿ.ಸೂರ್ಯ ನಾರಾಯಣ ಅವರು, ಸವಣೂರಿನ ಸರಕಾರಿ ಶಾಲೆಗೆ ನಾನೇನಾದರೂ ಮಾಡಿದ್ದರೆ ಆದು ಶ್ರೀರಾಮ ಸೇತು ನಿರ್ಮಾಣದಲ್ಲಿ ಮಾಡಿದ ಅಳಿಲ ಸೇವೆಯಂತೆ, ಪ್ರೀತಿ, ಗೌರವ ತೋರಿದರೆ ಸ್ನೇಹವನ್ನು ಸಂಪಾದಿಸಲು ಸಾಧ್ಯ. ಸಾವಿರಾರು ಸಂಖ್ಯೆಯಲ್ಲಿರುವ ವಿದ್ಯಾರ್ಥಿ ಸಮುದಾಯವೇ ನನ್ನ ಸಂಪತ್ತು.೩೯ ವರ್ಷಗಳ ಸೇವಾವಽಯಲ್ಲಿ ನಾನು ಯಾವುದೇ ವಿದ್ಯಾರ್ಥಿಗಳನ್ನು ಪ್ರಾಚಾರ್ಯರ ಬಳಿ, ತರಗತಿ ಅಧ್ಯಾಪಕರ ಬಳಿ ಕಲಿಸಿದ್ದಿಲ್ಲ. ಕಾರಣ ನಾನು ದೊಡ್ಡವ ಎಂದಲ್ಲ. ನಮ್ಮ ವಿದ್ಯಾರ್ಥಿಗಳು ಅಂತಹ ಯಾವುದೇ ತಪ್ಪು ಮಾಡಿಲ್ಲ. ನನ್ನ ಸೇವಾವಽಯಲ್ಲಿ ಯಾವುದೇ ಕಳಂಕವಿಲ್ಲದೆ ಪೂರೈಸಿದ್ದೇನೆ ಎಂದರು.

ಸವಣೂರು ಸ.ಪ.ಪೂ.ಕಾಲೇಜಿನ ಅಭಿವೃದ್ದಿಯ ಹಿಂದೆ ರೋಟರಿ ಬಂಧುಗಳ ಸಹಕಾರ ಬಹಳ ದೊಡ್ಡದು.ತಂದೆಯ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡಿದ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಪಿ.ಡಿ. ಕೃಷ್ಣ ಕುಮಾರ್ ರೈ, ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ,ರಾಕೇಶ್ ರೈ ಕೆಡೆಂಜಿ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಜೈನ್, ರೊ| ವಿನಾಯಕ ಕುಡ್ವ, ಕೆಆರ್‌ಡಿಎಲ್ ,ಎಂಆರ್‌ಪಿಎಲ್,ಸಮುದಾಯದ,ಜನಪ್ರತಿನಿಽಗಳ ಸಹಕಾರ ಅನನ್ಯವಾದದ್ದು ಎಂದರು.ಕಾಲೇಜಿನ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರವೂ ಮಹತ್ವದ್ದು,ಎಲ್ಲಾ ಸಮಸ್ಯೆ,ಅಭಿವೃದ್ದಿ ಕಾರ್ಯಗಳನ್ನೂ ಉತ್ತಮವಾಗಿ ಫೋಕಸ್ ಮಾಡಿದ್ದಾರೆ.ನಾನೊಬ್ಬನಿಂದ ಕಾಲೇಜಿನ ಅಭಿವೃದ್ಧಿಯಾಗಿಲ್ಲ.ನಮ್ಮೆಲ್ಲರಿಂದ ಆಗಿದೆ. ನಾನು ನಿಮಿತ್ತ ಮಾತ್ರ.ನಾನು ಎನ್ನುವುದು ಶೂನ್ಯವಾಗಬೇಕು.ನಾವೆಲ್ಲ ಮಾಡಿದ್ದು ಎಂಬುವುದು ಮಾನ್ಯವಾಗಬೇಕು.ಕಾಲೇಜಿನ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸವಣೂರು ಯುವಕ ಮಂಡಲದ ಸಹಕಾರ,ಜೇಸಿಐ ನ ಒಡನಾಟ,ಸವಣೂರಿನ ಸರ್ವಧರ್ಮೀಯರ ಸಹಕಾರವೂ ಮರೆಯಲಾರದ್ದು,ನಮ್ಮ ಕೈಯಿಂದ ವಿದ್ಯಾಮಾತೆ ಶಾರದೆ ,ಸವಣೂರಿನ ಪದ್ಮಾವತಿ ಮಾತೆ ಯಾವ ಸೇವೆ ಮಾಡಿಸಬೇಕೆಂದಿದ್ದಾರೋ ಅದನ್ನು ಮಾಡಲಾಗಿದೆ ಎಂದ ಅವರು ಸಹಕರಿಸಿದ ಎಲ್ಲರನ್ನೂ ನೆನಪಿಸಿ ಕೃತಜ್ಞತೆ ಸಲ್ಲಿಸಿದರು.

ಮಾಡಿದ ಸೇವೆಗೆ ಅರ್ಹವಾಗಿಯೇ ಜನರ ಪ್ರೀತ್ಯಾಧರ:

ಬಿ.ವಿ. ಸೂರ್ಯನಾರಾಯಣ ಅವರನ್ನು ಸನ್ಮಾನಿಸಿ ಮಾತನಾಡಿದ ಕಾಣಿಯೂರು ಸ.ಪ.ಪೂ.ಕಾಲೇಜಿನ ನಿವೃತ ಪ್ರಾಂಶುಪಾಲ ಕೃಷ್ಣ ಭಟ್ ಮಾತನಾಡಿ,ಬಿ.ವಿ.ಸೂರ್ಯನಾರಾಯಣ ಅವರು ಮಾಡಿದ ಸೇವೆಗೆ ಅರ್ಹವಾಗಿಯೇ ಸವಣೂರಿನ ಜನತೆಯ ಪ್ರೀತಿ ಆದರ ದೊರಕಿದೆ.ಪ್ರೀತಿಯಿಂದ ನಿರ್ಮಿಸಿದ ಕಟ್ಟಡಗಳು ಮುಂದಿನ ಪೀಳಿಗೆಗೆ ಕೊಡುಗೆಯಾಗಿದೆ.ವಿದ್ಯಾರ್ಥಿಗಳು ಉತ್ತಮ ವಿದ್ಯಾರ್ಜನೆ ಮಾಡಿ ಸಾಧನೆ ಮಾಡಿ ಅವರು ನಿರ್ಮಿಸಿದ ಕಟ್ಟಡಗಳಿಗೆ ಕಿರೀಟಪ್ರಾಯವಾಗಬೇಕು ಎಂದರು. ನಿವೃತ್ತಿ ಜೀವನದಲ್ಲಿ ಅವರ ಲೇಖನಿಯಿಂದ ಚಿಂತನೆಗಳು ಹೊರಹೊಮ್ಮಲಿ.ಸೂರ್ಯನಾರಾಯಣ ಅವರಂತಹ ಮೇರು ವ್ಯಕ್ತಿತ್ವದವರನ್ನು ಸಮ್ಮಾನಿಸುವ ಅವಕಾಶ ದೊರಕಿದ್ದು ನನ್ನ ಪುಣ್ಯ ಎಂದರು.

ಅಸಾಮಾನ್ಯ ಪ್ರಾಂಶುಪಾಲರು:

ಮುಖ್ಯ ಅತಿಥಿ ಸವಣೂರು ಸ.ಪ.ಪೂ.ಕಾಲೇಜಿನ ಪ್ರಾಚಾರ್ಯೆ ಪದ್ಮಾವತಿ ಎನ್.ಪಿ. ಮಾತನಾಡಿ,ಬಿ.ವಿ.ಸೂರ್ಯನಾರಾಯಣ ಅವರು ಅಸಾಮಾನ್ಯ ಪ್ರಾಂಶುಪಾಲರು,ಅವರ ಶಿಕ್ಷಣ ಸಂಸ್ಥೆಯ ಪ್ರೀತಿ ಕಾಲೇಜಿನಲ್ಲಿ ರಾರಾಜಿಸುತ್ತಿದೆ.ಕಾಲೇಜಿಗೆ ಭೇಟಿ ನೀಡಿ ಎಲ್ಲರೂ ಅದನ್ನು ಕಾಣಬಹುದು.ಸರಳತೆಯ ಸಾಕಾರ ಮೂರ್ತಿ ಸೂರ್ಯನಾರಾಯಣ ಅವರು.ಸೂರ್ಯ ನಾರಾಯಣ ಅವರು ಸೂರ್ಯನಂತೆ ಪ್ರತಿದಿನ ಕಾಲೇಜಿನ ಏಳಿಗೆಗೆ ದುಡಿದವರು.ಎಲ್ಲರನ್ನೂ ಗೌರವಿಸುವ ಅವರ ಸರಳತೆ,ಸಮಯ ಪ್ರಜ್ಞೆ.ಉತ್ತಮ ಭಾಷಣಗಾರರಾದರೂ ಒಂದೇ ಒಂದು ದಿನ ಕಾಲೇಜಿನ ಅವಽಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಹೋದವರಲ್ಲ.ಬಿಡುವಿನ ವೇಳೆಯಲ್ಲಿ ಅವರು ಅಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.ಅವರ ಸಾಧನೆ ಅಸಾಮಾನ್ಯ ವ್ಯಕ್ತಿತ್ವದ ಅಸಾಮಾನ್ಯ ಸಾಧನೆಯಾಗಿದೆ ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸವಣೂರು ಗ್ರಾ.ಪಂ.ಅಧ್ಯಕ್ಷೆ ಕೆ.ರಾಜೀವಿ ವಿ.ಶೆಟ್ಟಿ ಆವರು ಬಿ.ವಿ.ಸೂರ್ಯನಾರಾಯಣ ಅವರ ಶಿಕ್ಷಣ ಪ್ರೀತಿ ಕಾಳಜಿಗೆ ಕಾಲೇಜಿನಲ್ಲಿ ನಡೆಸಿದ ಅಭಿವೃದ್ದಿ ಕಾರ್ಯಗಳೇ ಸಾಕ್ಷಿ ಎಂದು ನಿವೃತ ಜೀವನಕ್ಕೆ ಶುಭಹಾರೈಸಿದರು.

ವೇದಿಕೆಯಲ್ಲಿ ಬಿ.ವಿ.ಸೂರ್ಯನಾರಾಯಣ ಅವರ ಪತ್ನಿ ವಂದನಾ ಬಿ.ಎಸ್ ಉಪಸ್ಥಿತರಿದ್ದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಸ್ವಾಗತಿಸಿದರು.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ವಂದಿಸಿದರು.ಸವಣೂರು ಸ.ಪ.ಪೂ.ಕಾಲೇಜಿನ ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ ಆವರು ಕಾರ್ಯಕ್ರಮ ನಿರೂಪಿಸಿದರು.

ಸವಣೂರು ಪ.ಪೂ.ಕಾಲೇಜಿನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಪಿ.ಡಿ.ಕೃಷ್ಣ ಕುಮಾರ್ ರೈ ದೇವಸ್ಯ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಜೈನ್,ಸವಣೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ನ್ಯಾಯವಾದಿ ಮಹೇಶ್ ಕೆ.ಸವಣೂರು,ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ಅತಿಥಿಗಳನ್ನು ಗೌರವಿಸಿದರು.

ಸಭಾ ಕಾರ್ಯಕ್ರಮದ ಬಳಿಕ ರೋಟರಿ ಪುತ್ತೂರು ಇದರ ವಿದ್ಯಾಸಿರಿ ಯೋಜನೆಯಡಿಯಲ್ಲಿ ಸವಣೂರು ಸ.ಪ.ಪೂ.ಕಾಲೇಜಿನಲ್ಲಿ ದ್ವಿತಿಯ ಪಿಯುಸಿಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ವಿಜ್ಞಾನ ವಿಭಾಗದಲ್ಲಿ ಅಪೇಕ್ಷಾ ಬಿ.,ವಾಣಿಜ್ಯ ವಿಭಾಗದ ವಿಜೇತ್, ಕಲಾ ವಿಭಾಗದ ಚೇತನ್ ಕುಮಾರ್ ರೈ ಅವರಿಗೆ ತಲಾ ೧೦,೦೦೦ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಪುತ್ತೂರು ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ,ಜಗಜೀವನ್ ದಾಸ್ ರೈ ,ನಿಯೋಜಿತ ಅಧ್ಯಕ್ಷ ಉಮಾನಾಥ್ ಅವರು ಉಪಸ್ಥಿತರಿದ್ದರು.

ನನ್ನ ಸೇವಾವಧಿಯಲ್ಲಿ ಸವಣೂರಿನ ಜನತೆ ನೀಡಿದ ಪ್ರೀತಿ ಅನನ್ಯ.ಇನ್ನೊಂದು ಜನ್ಮವಿದ್ದರೆ ನಾನು ಸವಣೂರಿನಲ್ಲೇ ಜನಿಸಿ ನಿಮ್ಮ ಪ್ರೀತಿಯ ಋಣ ತೀರಿಸುವೆ ನಿಮ್ಮ ಹೃದಯ ಶ್ರೀಮಂತಿಕೆಯ ಎದುರು ನಾನು ಕಡು ಬಡವ.ಜಗತ್ತಿನಲ್ಲಿ ಬೆಲೆಕಟ್ಟಲಾಗದ ಸಂಪತ್ತು ಇದ್ದರೆ ಪ್ರೀತಿ ಮತ್ತು ಅಭಿಮಾನ.ಆ ಸಂಪತ್ತನ್ನು ಸವಣೂರಿನ ಜನತೆ ನೀಡಿದ್ದಾರೆ ಎಂದು ಬಿ.ವಿ. ಸೂರ‍್ಯನಾರಾಯಣ ಹೇಳಿದರು.

LEAVE A REPLY

Please enter your comment!
Please enter your name here