ಭಾರೀ ಮಳೆ – ಚೆಲ್ಯಡ್ಕ ಸೇತುವೆ ಮುಳುಗಡೆ

0

ಪುತ್ತೂರು : ಪುತ್ತೂರು ಪರ್ಲಡ್ಕ ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಭಾರೀ ಮಳೆಯಿಂದಾಗಿ ಜೂ.30ರಂದು ಬೆಳಗ್ಗಿನ ಜಾವ ಮುಳುಗಡೆಯಾಗಿದೆ.

ಬೆಳಿಗ್ಗೆಯಿಂದಲೇ ವಿಪರೀತ ಮಳೆ ಸುರಿಯುತ್ತಿದ್ದ ಕಾರಣ ಮುಳುಗು ಸೇತುವೆಯೆಂದು ಹೆಸರಾದ ಈ ಸೇತುವೆ ಮುಳುಗಡೆಯಾಗಿದ್ದು ಆ ರಸ್ತೆಯಲ್ಲಿ ಚಲಿಸ ಬೇಕಾದ ವಾಹನಗಳಿಗೆ ಅಡಚಣೆ ಉಂಟಾಗಿ ಸಮಸ್ಯೆಯಾಯಿತು.ಸುತ್ತುವರಿದು ಚಲಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ದೇವಸ್ಯ ಮೂಲಕ ಸಂಚರಿಸಬೇಕಾದ ಖಾಸಗಿ ಬಸ್‌ಗಳು ಹಾಗೂ ಇತರೇ ವಾಹಗಳಿಗೆ ಅಡಚಣೆ ಉಂಟಾಗಿದ್ದು ಸಂಟ್ಯಾರು ರಸ್ತೆಯ ಮೂಲಕ ಸುತ್ತುವರಿದು ಚಲಿಸುವಂತಾಗಿದೆ.

LEAVE A REPLY

Please enter your comment!
Please enter your name here