ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪದ ಪ್ರದಾನ

0

ಸ್ನೇಹ-ಸೇವೆ, ಮಿತೃತ್ವ-ಒಡನಾಟ ರೋಟರಿಯಿಂದ ಸಾಧ್ಯ-ಡಿ.ಎಸ್ ರವಿ

ಪುತ್ತೂರು: ಸ್ನೇಹ ಮತ್ತು ಸೇವೆ ಇವೆರಡು ಜೊತೆ ಜೊತೆಯಲ್ಲಿ ಕೆಲಸ ಮಾಡಿದ್ದರಿಂದಲೇ ಇಂದು ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ನೂರು ವರ್ಷ ದಾಟಿ ಮುಂದುವರೆಯುತ್ತಿದೆ. ರೋಟರಿಯಿಂದ ಕೊಂಡುಕೊಳ್ಳುವ ವ್ಯವಹಾರವಿಲ್ಲ. ಅದೇನಿದ್ದರೂ ಮಿತೃತ್ವ ಮತ್ತು ಒಡನಾಟ ಮಾತ್ರ ಎಂದು ರೋಟರಿ ಜಿಲ್ಲೆ 3182 ಇದರ ಪಿಡಿಜಿ ಡಿ.ಎಸ್ ರವಿರವರು ಹೇಳಿದರು.

ಜು.2 ರಂದು ಬಪ್ಪಳಿಗೆ-ಬೈಪಾಸ್‌ನಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಜರಗಿದ ಕ್ಲಬ್‌ನ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಿ ಮಾತನಾಡಿದರು. ರೋಟರಿ ಸದಸ್ಯರು ಜಾಗತಿಕ ತಾಪಮಾನ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡಬೇಕಾಗಿದ್ದು ದೇಶದಲ್ಲಿ ಶಾಂತಿ, ಸಮೃದ್ಧಿ ನೆಲೆಸುವಂತೆ ಮಾಡಬೇಕಿದೆ ಎಂದು ಅವರು ಹೇಳಿದರು.

ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಎ.ಜಗಜೀವನ್‌ದಾಸ್ ರೈಯವರು ಕ್ಲಬ್‌ನ ಬುಲೆಟಿನ್ ‘ರೋಟ ವಾಹಿನಿ’ ಅನಾವರಣಗೊಳಿಸಿ ಮಾತನಾಡಿ, ನಿರ್ಗಮಿತ ಅಧ್ಯಕ್ಷ ಪುರಂದರ ರೈಯವರ ಅವಽಯಲ್ಲಿ ಮಾಡಿದಂತಹ ಸಮಾಜಮುಖಿ ಕಾರ್ಯಗಳ ಪೈಕಿ ನೀರಿನ ಸಂರಕ್ಷಣೆ ಕಾರ್ಯವು ಶ್ಲಾಘನೀಯವಾದದ್ದು. ಇಮ್ಯಾಜಿನ್ ರೋಟರಿ ಎಂಬ ಧ್ಯೇಯವಾಕ್ಯ ಪ್ರಸ್ತುತ ವರ್ಷ ರೋಟರಿಯು ಹೊಂದಿದೆ. ಒಣಸಿರಿ, ಜಲಸಿರಿ, ವಿದ್ಯಾಸಿರಿ ಮತ್ತು ಆರೋಗ್ಯ ಸಿರಿ ಈ ನಾಲ್ಕು ಅಂಶಗಳು ಜಿಲ್ಲಾ ಪ್ರಾಜೆಕ್ಟ್‌ಗಳನ್ನೊಳಗೊಂಡಿದ್ದು ಸರ್ವ ರೋಟರಿ ಸದಸ್ಯರು ಇದರಲ್ಲಿ ತೊಡಗಿಸಿಕೊಂಡು ಉತ್ತಮ ವರ್ಷವಾಗಿ ಹೊರ ಹೊಮ್ಮಲಿ ಎಂದು ಹೇಳಿ ಶುಭ ಹಾರೈಸಿದರು.

ವಲಯ ಸೇನಾನಿ ಹಾಗೂ ರೋಟರಿ ಈಸ್ಟ್‌ನ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಪುರಂದರ ರೈ ಮಿತ್ರಂಪಾಡಿ ಮಾತನಾಡಿ, ನಾವು ನಮಗೋಸ್ಕರ ಬೆಳೆಯುವುದರ ಜೊತೆಗೆ ಸಮಾಜ ಬೆಳೆಯುವುದಕ್ಕೋಸ್ಕರನೂ ನಾವು ದುಡಿಯಬೇಕಾಗಿದೆ. ತಮ್ಮಲ್ಲಿನ ಕಷ್ಟ-ಸುಖಗಳನ್ನು ಪರಸ್ಪರ ಹಂಚಿಕೊಂಡರೆ ಮಾತ್ರ ಜೀವನದಲ್ಲಿ ಮುಂದೆ ಸಂತೋಷದ ಕ್ಷಣಗಳು ಪ್ರಾಪ್ತಿಯಾಗಬಲ್ಲುದು. ಕಳೆದ ವರ್ಷ ತಾನು ಅಧ್ಯಕ್ಷನಾಗಿದ್ದಾಗ ಹಮ್ಮಿಕೊಂಡ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ಸರ್ವ ಸದಸ್ಯರ ಪಾಲು ಇದೆ ಎಂದು ಹೇಳಿ ತನಗೆ ಸಹಕರಿಸಿದ ಎಲ್ಲಾ ರೋಟರಿ ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದರು.

ಮೂವರಿಗೆ ಸನ್ಮಾನ:

ವೊಕೇಶನಲ್ ಸರ್ವಿಸ್‌ನಡಿಯಲ್ಲಿ ಧರ್ಮಸ್ಥಳ ಉಜಿರೆ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ, ಧಾರ್ಮಿಕ ಉಪನ್ಯಾಸ, ತುಳು, ಕನ್ನಡ, ಇಂಗ್ಲೀಷ್‌ನಲ್ಲಿ ಕಾರ್ಯಕ್ರಮ ನಿರೂಪಣೆ, ಬರಹಗಾರ, ದೈವ ನರ್ತಕರಾಗಿರುವ ಡಾ|ರವೀಶ್ ಪರವ ಪಡುಮಲೆರವರನ್ನು, ಯೂತ್ ಸರ್ವಿಸ್‌ನಡಿಯಲ್ಲಿ ಭರತನಾಟ್ಯ ಕಲಾವಿದ, 2012ರಲ್ಲಿ ಅನಿರೀಕ್ಷಿತವಾಗಿ ಅಪಘಾತಕ್ಕೊಳಗಾಗಿ ತನ್ನ ಬೆನ್ನುಮೂಳೆ ಮುರಿತಕ್ಕೊಳಗಾದರೂ ತನ್ನ ಸಾಧನೆಯನ್ನು ಮುಂದುವರೆಸಿ ೩೫ ಸಾ-ವೇರ್ ಇಂಜಿನಿಯರ್‌ಗಳನ್ನು ಒಳಗೊಂಡ ದಿ ವೆಬ್ ಪೀಪಲ್ ಸಂಸ್ಥೆಯನ್ನು ಮುನ್ನೆಡೆಸುತ್ತಿರುವ ಎಲೆಕ್ಟ್ರೋನಿಕ್ಸ್ ಆಂಡ್ ಕಮ್ಯೂನಿಕೇಶನ್‌ನಲ್ಲಿ ಬಿ.ಇ ಪದವೀಧರ ಆದಿತ್ಯ ಕಲ್ಲೂರಾಯರವರನ್ನು ಮತ್ತು ಯೋಗದಲ್ಲಿ ಫೈವ್ ಸ್ಟಾರ್ ವರ್ಲ್ಡ್ ರೆಕಾರ್ಡ್, ಗಿಝಾ ವರ್ಲ್ಡ್ ರೆಕಾರ್ಡ್, ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್, ಜೀಜಾಬಾಯಿ ಆವಾರ್ಡ್, ವಿವೇಕಾನಂದ ಯೂತ್ ಅವಾರ್ಡ್, ಕಲಾ ಪ್ರತಿಭಾ ಅವಾರ್ಡ್ ಸರದಾರೆಯಾಗಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಓದುತ್ತಿರುವ ಪ್ರಣಮ್ಯ ಸಿ.ಅಗಳಿರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಸಮಿತಿ ಸದಸ್ಯರಿಗೆ ಅಭಿನಂದನೆ: ಕ್ಲಬ್ ವತಿಯಿಂದ ಜಿಲ್ಲಾ ಸಮಿತಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾದ ಡಾ.ಸೂರ‍್ಯನಾರಾಯಣ(ಡಿಆರ್‌ಎ-ಸಿ), ವಿಶ್ವಾಸ್ ಶೆಣೈ(ಜಿಲ್ಲಾ ಕಾರ್ಯದರ್ಶಿ ಇವೆಂಟ್ಸ್), ಅಬ್ಬಾಸ್ ಕೆ.ಮುರ(ಕನ್ವಿನರ್ ಫಾರ್ ಡಿಸ್ಟ್ರಿಕ್ಟ್ ಪ್ರಾಜೆಕ್ಟ್ಸ್), ಪುರಂದರ ರೈ ಮಿತ್ರಂಪಾಡಿ(ವಲಯ ಸೇನಾನಿ), ಕೆ.ಆರ್ ಶೆಣೈ(ಕ್ಲಬ್ ಲೀಡರ್‌ಶಿಪ್ ಪ್ಲ್ಯಾನ್ ಚೇರ್‌ಮ್ಯಾನ್), ದಿವಾಕರ್ ನಿಡ್ವಣ್ಣಾಯ(ನ್ಯೂ ಮೆಂಬರ್ ಓರಿಯೆಂಟೇಶನ್ ಚೇರ್‌ಮ್ಯಾನ್), ಸೂರ್ಯನಾಥ ಆಳ್ವ(ಸ್ಕಿಲ್ ಡೆವಲಪ್ ಮೆಂಟ್ ಚೇರ್‌ಮ್ಯಾನ್), ಡಾ.ಪ್ರಸನ್ನ ಹೆಬ್ಬಾರ್(ಆನಿಮಲ್ ಕೇರ್ ಚೇರ್‌ಮ್ಯಾನ್), ಮುರಳೀಶ್ಯಾಂ ಎಂ(ರೈಲಾ ಚೇರ್‌ಮ್ಯಾನ್), ಜಯಂತ್ ನಡುಬೈಲು(ಎಂಪ್ಲಾಯರ್-ಎಂಪ್ಲಾಯಿ ರಿಲೇಷನ್ ಚೇರ್‌ಮ್ಯಾನ್, ಡಾ.ಶ್ಯಾಮ್ ಪ್ರಸಾದ್(ವಿನ್ಸ್ ಚೇರ್‌ಮ್ಯಾನ್), ಕೃಷ್ಣನಾರಾಯಣ ಮುಳಿಯ(ಆರ್4ಆರ್-6 ಚೇರ್‌ಮ್ಯಾನ್), ಸಚ್ಚಿದಾನಂದ ಡಿ(ಯೂತ್ ಪ್ರೊಟೆಕ್ಷನ್ ವೈಸ್ ಚೇರ್‌ಮ್ಯಾನ್), ಪ್ರಮೀಳಾ ರಾವ್(ವುಮೆನ್ ಇನ್ ರೋಟರಿ ವೈಸ್ ಚೇರ್‌ಮ್ಯಾನ್), ರವಿಕುಮಾರ್ ರೈ(ರಿನಿವೇಬಲ್ ಎನರ್ಜಿ ಕೋ-ಆರ್ಡಿನೇಟರ್), ವಸಂತ್ ಜಾಲಾಡಿ(ಬ್ಲಡ್ ಡೊನೇಶನ್ ಕ್ಯಾಂಪೇನ್ ಕೋ-ಆರ್ಡಿನೇಟರ್)ರವರನ್ನು ಪದಪ್ರದಾನ ಅಽಕಾರಿ ಪಿಡಿಜಿ ಡಿ.ಎಸ್ ರವಿರವರು ಹೂ ನೀಡಿ ಅಭಿನಂದಿಸಿದರು.‌

13 ಸದಸ್ಯರ ಸೇರ್ಪಡೆ:

ಕ್ಲಬ್ ಸರ್ವಿಸ್ ವತಿಯಿಂದ 13 ಮಂದಿ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದ್ದು, ವಿಜಯಾ ಬ್ಯಾಂಕಿನ ನಿವೃತ್ತ ಸೀನಿಯರ್ ಪ್ರಬಂಧಕ ರಾಧಾಕೃಷ್ಣ ನಾಯ್ಕ್ ಕೊಳಕೆಮಾರ್, ದರ್ಬೆ ವಿಘ್ನೇಶ್ ಮಾರುತಿ ಸ್ಪೇರ್ಸ್‌ನ ದಿನೇಶ್ ಪಿ, ನಂದನ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಎಸ್.ದಾಮೋದರ್ ಪಾಟಾಳಿ, ದರ್ಬೆ ತರಕಾರಿ ವ್ಯಾಪಾರಸ್ಥ ಹಾಗೂ ಸ್ಪೋರ್ಟ್ಸ್ ವರ್ಲ್ಡ್ ಮಾಲಕ ಬಿ.ಅಬ್ದುಲ್ ರಝಾಕ್, ಹಿಮಾ ಕಾರ್ ಎಸಿ ಇದರ ಮಾಲಕ ಪ್ರಕಾಶ್ ರೈ ಮನವಳಿಕೆ, ನ್ಯಾಯವಾದಿ ಹಾಗೂ ನೋಟರಿ ಜಗನ್ನಾಥ್ ರೈ, ಪ್ರಗತಿಪರ ಕೃಷಿಕ ಹಾಗೂ ಯುಎಇನಲ್ಲಿ ರುಚಿ ಕ್ಯಾಟರಿಂಗ್ ಉದ್ಯಮ ನಡೆಸುತ್ತಿರುವ ಸುಜಿತ್ ಕುಮಾರ್ ಶೆಟ್ಟಿ ದರ್ಬೆ, ಗಗನ್ ಟ್ರೇಡಿಂಗ್ ಕಂಪೆನಿಯ ಮಾಲಕ ಪ್ರವೀಣ್ ಶೆಟ್ಟಿ ಅಳಕೆಮಜಲು, ಮೇದಿನಿ ಜನಸೇವಾ ಕೇಂದ್ರದ ಮಾಲಕ ನವೀನ್ ಭಂಡಾರಿ, ದರ್ಬೆ ಅಜಯ್ ಮಾರ್ಬಲ್ಸ್ ಮಾಲಕ ಅರವಿಂದ್ ಸಿಂಗ್, ರತ್ನಗಿರಿ ಜೀಲಾನಿ ಮೆರೈನ್ ಪ್ರಾಡಕ್ಟ್ಸ್‌ನ ಪ್ರೊಡಕ್ಷನ್ ಮ್ಯಾನೇಜರ್ ಭಾಸ್ಕರ್ ರೈ, ಮುಕ್ರಂಪಾಡಿ, ನ್ಯೂ ಅಭಿನಂದನ್ ಹೊಟೇಲ್ ಮಾಲಕ ಸತೀಶ್, ಗಂಗಾಧರ್ ಶೆಟ್ಟಿ ಕೈಕಾರರವನ್ನು ಈ ಸಂದರ್ಭದಲ್ಲಿ ಪದಪ್ರದಾನ ಅಽಕಾರಿ ಪಿಡಿಜಿ ಡಿ.ಎಸ್ ರವಿರವರು ರೋಟರಿ ಪಿನ್ ತೊಡಸಿ ಕ್ಲಬ್‌ಗೆ ಬರಮಾಡಿಕೊಂಡರು.‌

ಸ್ಕಾಲರ್‌ಶಿಪ್ ವಿತರಣೆ:

ಕೊಂಬೆಟ್ಟು ಸರಕಾರಿ ಜ್ಯೂನಿಯರ್ ಕಾಲೇಜ್‌ನ ಹಿರಿಯ ವಿದ್ಯಾರ್ಥಿಯಾಗಿರುವ ಕುಡ್ಗಿ ಸುಧಾಕರ್ ಶೆಣೈ ಸ್ಕಾಲರ್‌ಶಿಪ್‌ನಿಂದ ಆರ್ಥಿಕವಾಗಿ ಹಿಂದುಳಿದ ಫಲಾನುಭವಿ ವಿದ್ಯಾರ್ಥಿಗಳಾದ ಕೊಂಬೆಟ್ಟು ಜ್ಯೂನಿಯರ್ ಕಾಲೇಜ್‌ನ ಒಂಭತ್ತನೇ ತರಗತಿಯ ತನ್ಮಯ್ ಸುವರ್ಣ, ಯಶ್ವಿತ್, ಪ್ರಜ್ವಲ್, ಯಶ್ಮಿತ್, ಹನ್ನೆರಡನೇ ತರಗತಿಯ ಸಂಪ್ರೀತಾರವರಿಗೆ ತಲಾ ರೂ.4 ಸಾವಿರ , ತೋನ್ಸೆ ಅನಂತ್ ಪೈ ಸ್ಕಾಲರ್‌ಶಿಪ್‌ನಿಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅನುಷ್ಕಾ ಪ್ರಭುರವರ ಸಂಪೂರ್ಣ ಶಿಕ್ಷಣಕ್ಕೆ ರೂ.26 ಸಾವಿರ, ಬಂಟ್ವಾಳ್ ವಿನಾಯಕ ಕುಡ್ವ ಸ್ಕಾಲರ್‌ಶಿಪ್‌ನಿಂದ ವಿವೇಕಾನಂದ ಕಾಲೇಜ್ ಆಪ್ ಇಂಜಿನಿಯರಿಂಗ್ ಆಂಡ್ ಟೆಕ್ನೋಲಜಿಯ ವಿದ್ಯಾರ್ಥಿನಿ ಶ್ವೇತಾ ರೈರವರ ಮೂರು ವರ್ಷದ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ರೂ,1,08,872, ದಿ.ಪಿ.ಮಾರಪ್ಪ ಶೆಟ್ಟಿ ಧತ್ತಿನಿಽಯಿಂದ ಪಿ.ಚತ್ತರಂಜನ್ ಶೆಟ್ಟಿ ಮೈಸೂರು ಪ್ರಾಯೋಜಿತವಾಗಿ ಆರ್ಥಿಕವಾಗಿ ಹಿಂದುಳಿದ ಕೊಂಬೆಟ್ಟು ಜ್ಯೂನಿಯರ್ ಕಾಲೇಜ್‌ನ ವಿದ್ಯಾರ್ಥಿಗಳಾದ ಎಂಟನೇ ತರಗತಿಯ ಸಾರ್ಥಕ್, ರಜತ್, ಆಯುಷ್, ಆವಂತಿ, ಸೃಜನ್‌ರವರಿಗೆ ತಲಾ ರೂ.4 ಸಾವಿರ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕಿಶನ್‌ರವರಿಗೆ ರೂ.5 ಸಾವಿರ ಮೊತ್ತದ ಚೆಕ್‌ನ್ನು ಪಿಡಿಜಿ ಡಿ.ಎಸ್ ರವಿರವರು ಹಸ್ತಾಂತರಿಸಿದರು.‌

ಹೊಲಿಗೆ ಯಂತ್ರ ಕೊಡುಗೆ:

ಕಮ್ಯೂನಿಟಿ ಸರ್ವಿಸ್ ವತಿಯಿಂದ ದೇವಾ ಟ್ರೇಡರ‍್ಸ್ ಮಾಲಕ ಟಿ.ವಿ ರವೀಂದ್ರನ್‌ರವರ ಪ್ರಾಯೋಜಕತ್ವದಲ್ಲಿ ಕುರಿಯ ರತಿ ಶಿವರಾಂ ಹಾಗೂ ಶ್ರೀಮತಿ ಮೋಹಿನಿ ಪುಣ್ಚಪ್ಪಾಡಿ ಇವರುಗಳಿಗೆ ಎರಡು ಹೊಲಿಗೆ ಯಂತ್ರವನ್ನು, ಕೆದಂಬಾಡಿ ವಿಷ್ಣುಪ್ರಿಯಾ ಎಂಬವರಿಗೆ ಕೃತಕ ಕಾಲನ್ನು ಜೋಡಿಸಲು ಕ್ಲಬ್ ಸದಸ್ಯರ ದೇಣಿಗೆಯಿಂದ ರೂ.26 ಸಾವಿರ, ರೊ|ಸೂರ್ಯನಾಥ್ ಆಳ್ವರವರು ಲಿಂಪೋಮ ಹಾಗೂ ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುತ್ತಿರುವ ಪ್ರಜ್ವಲ್ ಮುಡಿಪುರವರಿಗೆ ರೂ.10 ಸಾವಿರ ಮೊತ್ತವನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

ಎಸೆಸ್ಸೆಲ್ಸಿ/ಪಿಯುಸಿ ರ‍್ಯಾಂಕ್ ವಿಜೇತರಿಗೆ ಅಭಿನಂದನೆ:

ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಭಿಜ್ಞಾ ಆರ್, ಆಭಯ್ ಶರ್ಮ, ಆತ್ಮೀಯ ಕಶ್ಯಪ್, ದ್ವಿತೀಯ ರ‍್ಯಾಂಕ್ ಗಳಿಸಿದ ಕೊಂಬೆಟ್ಟು ಜ್ಯೂನಿಯರ್ ಕಾಲೇಜ್‌ನ ಅಭಿಲಾಷ ಮತ್ತು ಅನುಷಾ, ಸುದಾನ ಶಾಲೆಯ ಅರ್ಪಿತ್ ಶೇಟ್, ತೆಂಕಿಲ ವಿವೇಕಾನಂದ ಶಾಲೆಯ ಪ್ರಜ್ನೇಶ್ ಆಚಾರ್ಯ, ಅದಿತಿ ಕೆ, ಮೇಘ ನಾಯಕ್, ಪೂರ್ವಿ ರಾವ್, ಶ್ರಾವ್ಯ ಲಕ್ಷ್ಮೀ, ವೃದ್ಧಿ ಕೆಮ್ಮಿಂಜೆ, ಮಯೂರ್ ಡಿ.ಆರ್, ಪಾರ್ಥ ತೋಳ್ಪಾಡಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 4ನೇ ರ‍್ಯಾಂಕ್ ಗಳಿಸಿದ ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನ ಮನ್ವಿತ್ ಎಸ್, 5ನೇ ರ‍್ಯಾಂಕ್ ಗಳಿಸಿದ ಅಂಬಿಕಾ ಪಿಯು ಕಾಲೇಜಿನ ಖುಶಿ ರೈ ಹಾಗೂ ಕ್ಲಬ್ ಸದಸ್ಯ ಜಯಂತ್ ನಡುಬೈಲುರವರ ಪುತ್ರ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಅಂಚಿತ್ ನಡುಬೈಲುರವರನ್ನು ಅಭಿನಂದಿಸಲಾಯಿತು.

ಕ್ರೀಡಾ ಸಾಧಕರಿಗೆ ಅಭಿನಂದನೆ:

ಅಂತರ್-ಕಾಲೇಜ್ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾದ ವಿವೇಕಾನಂದ ಕಾಲೇಜ್‌ನ ವಿದ್ಯಾರ್ಥಿಗಳಾದ ಕೀರ್ತಿರಾಜ್ ಕೆ.ಎಸ್(ಜಾವೆಲಿನ್,ಹ್ಯಾಮರ್ ತ್ರೋ), ಜಯಶ್ರೀ ಬಿ(ಪೋಲ್‌ವಾಲ್ಟ್,ರಿಲೇ,ತ್ರಿಪಲ್ ಜಂಪ್), ರಕ್ಷಿತಾ(ನಡಿಗೆ,ರಿಲೇ,ಮಿಕ್ಸ್‌ಡ್ ರಿಲೇ), ಪವಿತ್ರಾ ಜಿ(ಬೆಸ್ಟ್ ಅಥ್ಲೆಟಿಕ್ ಅವಾರ್ಡ್), ಲೋಹಿತ್(ಬೆಸ್ಟ್ ಅಥ್ಲೀಟ್ ಅವಾರ್ಡ್), ಪ್ರತೀಕ್(ಹೈಜಂಪ್), ಪ್ರೇರಣಾ ಕೆಮ್ಮಿಂಜೆ(ಹ್ಯಾಮರ್,ಡಿಸ್ಕಸ್ ತ್ರೋ), ಅಭಿರಂಜನ್, ಭರತ್ ರಾಜ್ ಕೆ, ಜಗದೀಶ್ ಕೆ, ಮೇಘನಾ ಪಿ.ಇ(ರಿಲೇ), ಶರತ್ ಕೆ.ಎಸ್(ಮಿಕ್ಸ್‌ಡ್ ರಿಲೇ), ಸನತ್ ಶೆಟ್ಟಿ ಪಿ(ಹರ್ಡಲ್ಸ್), ಅನ್ವಿತ್ ಬಿ.ಎನ್(ನಡಿಗೆ), ರಂಜಿತ್ ಪಿ.ವಿ(ಜಾವೆಲಿನ್ ತ್ರೋ)ರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಟಿಆರ್‌ಎಫ್ ದೇಣಿಗೆ:

ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿ ಪಿಎಚ್‌ಎಫ್ ಪದವಿ ಗಳಿಸಿರುವ ರೋಟರಿ ಭೀಷ್ಮ ಕೆ.ಆರ್ ಶೆಣೈಯವರ ಗ್ರೇಟ್ ಗ್ರ್ಯಾಂಡ್‌ಸನ್(ಮರಿ ಪುಳ್ಳಿ) ಶಿವಾಂನ್ಸ್‌ರವರ ಪರವಾಗಿ ಕೆ.ಆರ್ ಶೆಣೈ ಹಾಗೂ ಕ್ಲಬ್ ಸದಸ್ಯ ಕೃಷ್ಣಪ್ಪ ಕೆ.ರವರಿಗೆ ಪಿಡಿಜಿ ಡಿ.ಎಸ್ ರವಿರವರು ಹೂ ನೀಡಿ ಗೌರವಿಸಿದರು.

ನಿರ್ಗಮಿತ ಅಧ್ಯಕ್ಷ/ಕಾರ್ಯದರ್ಶಿಗೆ ಸನ್ಮಾನ: ‌

ಕಳೆದ ವರ್ಷ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಿ ಕ್ಲಬ್‌ನ ಬೆಳವಣಿಗೆಯಲ್ಲಿ ಸಹಕರಿಸಿದ ನಿರ್ಗಮಿತ ಅಧ್ಯಕ್ಷ ಪುರಂದರ ರೈ ಮಿತ್ರಂಪಾಡಿ ಹಾಗೂ ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲುರವರಿಗೆ ನೂತನ ಅಧ್ಯಕ್ಷರಾದ ಶರತ್ ಕುಮಾರ್ ರೈ ಹಾಗೂ ಅವರ ತಂಡ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿರವರು ಮಾತನಾಡಿ ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ, ನಿಯೋಜಿತ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ನೂತನ ಅಧ್ಯಕ್ಷ ಶರತ್ ಕುಮಾರ್ ರೈಯವರ ಪತ್ನಿ ವಂದನಾ, ನಿರ್ಗಮಿತ ಅಧ್ಯಕ್ಷ ಪುರಂದರ ರೈಯವರ ಪತ್ನಿ ಸವಿತಾ ರೈರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಡಾ.ರವಿಪ್ರಕಾಶ್ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ಪುರಂದರ ರೈ ಮಿತ್ರಂಪಾಡಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಶಶಿಕಿರಣ್ ರೈ ನೂಜಿಬೈಲು ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲು ವರದಿ ಮಂಡಿಸಿದರು. ಮನೋಜ್ ಡಿ’ಸೋಜ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಎಕೆಎಸ್ ಸದಸ್ಯ ಕೆ.ವಿಶ್ವಾಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಹೆತ್ತವರ ಆಶೀರ್ವಾದ ಪಡೆದ ಅಧ್ಯಕ್ಷ:

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶರತ್ ಕುಮಾರ್ ರೈಯವರು ಪದ ಪ್ರದಾನ ಸಂದರ್ಭದಲ್ಲಿ ವೇದಿಕೆಗೆ ಆಗಮಿಸುತ್ತಿದ್ದಾಗ ಸಭಾಸದನದಲ್ಲಿ ಆಸೀನರಾಗಿದ್ದ ತನ್ನ ಹೆತ್ತವರಾದ ಪುತ್ತೂರು ತಾಲೂಕಿನ ಸವಣೂರು ಗ್ರಾಮದ ಪುಣ್ಚಪ್ಪಾಡಿ ದೇವಸ್ಯ ನಿವಾಸಿ ತಂದೆ ಗಂಗಾಧರ ರೈ ಹಾಗೂ ತಾಯಿ ಸುವಾಸಿನಿ ರೈಯವರ ಪಾದವನ್ನು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದು ಮುನ್ನೆಡೆದರು.

ಪದಾಧಿಕಾರಿಗಳ ಪದ ಪ್ರದಾನ…

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಧ್ಯಕ್ಷ ಶರತ್ ಕುಮಾರ್ ರೈಯವರಿಗೆ ಪಿಡಿಜಿ ಡಿ.ಎಸ್ ರವಿರವರು ರೋಟರಿ ದಂಡ ನೀಡಿ, ರೋಟರಿ ಪಿನ್ ತೊಡಿಸಿ ಪದ ಪ್ರದಾನ ಮಾಡಿದರು. ಉಳಿದಂತೆ ಕಾರ್ಯದರ್ಶಿ ಶಶಿಕಿರಣ್ ರೈ ನೂಜಿಬೈಲು, ಕೋಶಾಧಿಕಾರಿ ವಸಂತ ಜಾಲಾಡಿ, ನಿಕಟಪೂರ್ವ ಅಧ್ಯಕ್ಷ ಪುರಂದರ ರೈ ಮಿತ್ರಂಪಾಡಿ, ಸಾರ್ಜಂಟ್ ಎಟ್ ಆರ್ಮ್ಸ್ ಜಯಂತ್ ಬಾಯಾರು, ಉಪಾಧ್ಯಕ್ಷ ಡಾ.ರವಿಪ್ರಕಾಶ್, ಕ್ಲಬ್ ಸರ್ವಿಸ್ ನಿರ್ದೇಶಕ ಹಾಗೂ ನಿಯೋಜಿತ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಜೊತೆ ಕಾರ್ಯದರ್ಶಿ ರವಿಕುಮಾರ್ ರೈ, ವೊಕೇಶನಲ್ ಸರ್ವಿಸ್ ನಿರ್ದೇಶಕ ವಿಶ್ವಾಸ್ ಶೆಣೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸೂರ್ಯನಾಥ್ ಆಳ್ವ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಮುರಳೀಶ್ಯಾಂ, ಯೂತ್ ಸರ್ವಿಸ್ ನಿರ್ದೇಶಕ ಶಶಿಧರ್ ಕಿನ್ನಿಮಜಲು, ಬುಲೆಟಿನ್ ಎಡಿಟರ್ ಡಾ.ಶ್ಯಾಮ್‌ಪ್ರಸಾದ್ ಹಾಗೂ ವಿವಿಧ ವಿಭಾಗಗಳಲ್ಲಿ ಚೇರ್‌ಮ್ಯಾನ್‌ಗಳಾಗಿ ಆಯ್ಕೆಯಾದವರಿಗೆ ಪಿಡಿಜಿ ಡಿ.ಎಸ್ ರವಿರವರು ಹೂ ನೀಡಿ ಸ್ವಾಗತಿಸಿದರು.

ವಿಶ್ವಾಸದೊಂದಿಗೆ ಕ್ಲಬ್ ಉನ್ನತಿಗೆ ಶ್ರಮ…

ಸೇವೆ ಮತ್ತು ಸ್ನೇಹ ಎಂಬ ತಳಹದಿಯ ಆಧಾರದಲ್ಲಿ ರೋಟರಿ ಬೆಳೆದು ನಿಂತಿದೆ. ಅದೇ ತತ್ವದೊಂದಿಗೆ ನಾನು ಮತ್ತು ನಮ್ಮ ತಂಡ ಮುಂದುವರೆಸಿಕೊಂಡು ಹೋಗಲಿದ್ದೇವೆ. ಕಾರ್ಯಕ್ರಮದಲ್ಲಿ ಯುವ ಸಾಧಕರಾದ ಡಾ|ರವಿ ಪರವ, ಆದಿತ್ಯ ಕಲ್ಲೂರಾಯ ಮತ್ತು ಪ್ರಣಮ್ಯರವರನ್ನು ಯಾಕೆ ಗುರುತಿಸಿ ಸನ್ಮಾನಿಸಿದ್ದೇವೆ ಎಂದರೆ ಅವರ ಸಾಧನೆಯನ್ನು ನೋಡಿ ಯುವಸಮೂಹ ಮುಂದಿನ ದಿನಗಳಲ್ಲಿ ಸಾಧನೆಗೈದು ಉಜ್ವಲ ಭವಿಷ್ಯವನ್ನು ರೂಪಿಸಲಿ ಎಂಬುವುದಾಗಿದೆ. ಸ್ನೇಹಿತರ ಸಹಕಾರದಿಂದ ರೋಟರಿಗೆ ಬಂದಿದ್ದೇನೆ ಮತ್ತು ಈ ವರ್ಷ ಅಽಕಾರವನ್ನು ಸ್ವೀಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ಕ್ಲಬ್ ಸದಸ್ಯರ ವಿಶ್ವಾಸವನ್ನು ಗಳಿಸಿಕೊಂಡು ಕ್ಲಬ್‌ನ ಉನ್ನತಿಗೆ ಶ್ರಮ ವಹಿಸಲಿದ್ದೇನೆ.
-ಶರತ್ ಕುಮಾರ್ ರೈ, ನೂತನ ಅಧ್ಯಕ್ಷರು, ರೋಟರಿ ಈಸ್ಟ್

LEAVE A REPLY

Please enter your comment!
Please enter your name here