ಗಂಡಿಬಾಗಿಲು ಮಸೀದಿಯಲ್ಲಿ “ಈದುಲ್ ಅಝ್-ಹಾ”-ಬಕ್ರೀದ್ ಆಚರಣೆ

0

 


ಉಪ್ಪಿನಂಗಡಿ: ತ್ಯಾಗ, ಬಲಿದಾನ, ಐಕ್ಯತೆಯ ಸಂಕೇತವನ್ನು ಪ್ರತಿಪಾದಿಸುವ “ಈದುಲ್ ಅಝ್-ಹಾ” ಪವಿತ್ರ ಬಕ್ರೀದ್ ಹಬ್ಬವನ್ನು ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯಲ್ಲಿ ಜುಲೈ 10ರಂದು ಆಚರಿಸಲಾಯಿತು.


ಗಂಡಿಬಾಗಿಲು ಮಸೀದಿಯಲ್ಲಿ ಕುತುಬಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ಶೌಕತ್ ಫೈಝಿ ಹಬ್ಬದ ಸಂದೇಶ ನೀಡಿ ಮಾತನಾಡಿ “ಈದುಲ್ ಅಝ್-ಹಾ”-ಬಕ್ರೀದ್ ಆಚರಣೆ ಇಬ್ರಾಹಿಂ ನೆಬಿಯವರ ತ್ಯಾಗ ಜೀವನದ ಪ್ರತೀಕವಾಗಿದೆ. ಅವರ ತತ್ವ, ಆದರ್ಶಗಳನ್ನು ನಾವುಗಳು ಅನುಸರಿಸುವ ಮೂಲಕ ನಾವುಗಳು ಪರಸ್ಪರ ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸುವುದರ ಜೊತೆಗೆ ಅವರ ಕಷ್ಟಗಳಲ್ಲಿ ಭಾಗಿಯಾಗಲು ನಮ್ಮಿಂದಾಗುವ ಸಹಾಯ ಹಸ್ತ ನೀಡಿ ಸಹಕಾರಿ ಆಗಬೇಕು ಜೊತೆಗೆ ಅನ್ಯ ಧರ್ಮೀಯರನ್ನು ಗೌರವಿಸುವಂತಾಗಬೇಕು ಎಂದರು. ಹಬ್ಬದ ಸಂದೇಶ ಹಂಚಿಕೊಂಡ ಮುಸ್ಲಿಂ ಬಾಂಧವರು ಬಂಧು-ಕುಟುಂಬ ಸಂಬಂಧಗಳನ್ನು ಭೇಟಿ ಮಾಡಿ ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡರು. 

LEAVE A REPLY

Please enter your comment!
Please enter your name here