ಒಡಿಯೂರು ಸಂಸ್ಥಾನದಲ್ಲಿ ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

  • ಆದರ್ಶಯುತ ಸಂಘಟನೆ ಇದ್ದಲ್ಲಿ ಸಂಸ್ಕಾರವಿರುತ್ತದೆ‌ – ಒಡಿಯೂರು ಶ್ರೀ

ವಿಟ್ಲ: ಒಗ್ಗಟ್ಟಿನ ಬದುಕು ನಮ್ಮ ಗ್ರಾಮ ವಿಕಾಸವಾಹಿನಿಯ ಮೂಲಕ ಆಗುತ್ತಿದೆ. ಸಂಘಟನೆಗೆ ನಮ್ಮ ವಿಕಾಸವಾಹಿನಿ ಇನ್ನೊಂದು ಹೆಸರಾಗಬೇಕು. ಸರಿಯಾದ ವ್ಯವಸ್ಥಿತವಾದ ಸಂಘಟನೆ ನಮ್ಮದಾಗಬೇಕು. ಆದರ್ಶಯುತ ಸಂಘಟನೆ ಇದ್ದಲ್ಲಿ ಸಂಸ್ಕಾರವಿರುತ್ತದೆ‌. ಯಶಸ್ಸಿನ ಗುಟ್ಟು ಪರಿಶ್ರಮದಲ್ಲಿ ಅಡಗಿದೆ. ಸಂಘಟನೆಗಳು ಆರೋಗ್ಯ ಪೂರ್ಣ ಸಮಾಜಕ್ಕೆ ಅನುಕೂಲಕರವಾಗಿರಬೇಕು. ಆಗ ಸಂಘಟನೆಗಳಿಗೆ ಬೆಲೆಬರುತ್ತದೆ. ಸಂಘಟನೆ ಗಟ್ಟಿಯಾಗಲು ಆತ್ಮವಿಶ್ವಾಶ ಮುಖ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಜು.16ರಂದು ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಆ.8ರಂದು ನಡೆಯಲಿರುವ ಒಡಿಯೂರು ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಸ್ಕೃತಿ ಸಂಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕಲ್ಮಶವಿಲ್ಲದ ಮನಸ್ಸಿನಲ್ಲಿ ಹೊಂದಾಣಿಕೆಯಿಂದ ಸಾಗುವ ಬದುಕು ನಮ್ಮದಾಗಬೇಕು. ತಾಳ್ಮೆ, ಸಹನೆ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ‌. ಸಮಯ ಸಂದರ್ಭಗಳಿಗೆ ತಕ್ಕುದಾಗಿ ನಾವು ನಡೆಯಬೇಕು. ಯಾವುದೂ ಅತೀಯಾದರೂ ಅಪಾಯ ಖಂಡಿತ. ಜ್ಞಾನದ ಕೊರತೆ ನಮ್ಮಲ್ಲಿ ಕಾಡುತ್ತಿದೆ. ಬದುಕು ಹಸನಾಗಲು ತಿಳುವಳಿಕೆ ಅತೀ ಮುಖ್ಯ.ತಿಳಿದು ಬದುಕಿದರೆ ಜೀವನಕ್ಕೆ ಅರ್ಥ ಬರುತ್ತದೆ. ಬದುಕಿನ ಮೂಲ ವಿಚಾರ ಸಂಸ್ಕಾರ, ಸಂಸ್ಕೃತಿ. ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳೆಲ್ಲಾ ಸಮಾಜದ ಒಳಿತಿಗಾಗಿ. ನಮ್ಮನ್ನು ನಾವು ಸುದಾರಣೆ ಮಾಡುವ ಕಾರ್ಯ ಆಗಬೇಕಾಗಿದೆ. ಮಾಧವ ಭಕ್ತಿ ಹಾಗು ಮಾನವ ಪ್ರೀತಿ ಇದ್ದೆಡೆ ಬದುಕು ಸುಂದರವಾಗುತ್ತದೆ ಎಂದರು.

ಸುಳ್ಯ ತಾಲೂಕಿನ ಒಡಿಯೂರು ಶ್ರೀ ವಿಕಾಸ ವಾಹಿನಿ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ ಕಾರ್ಯಕ್ರಮದಲ್ಲಿ ವಿವಿಧ ಸ್ವಸಹಾಯ ಸಂಘಗಳಿಗೆ ಶ್ರೀಗಳು ಲಾಭಾಂಶ ವಿತರಣೆ ಮಾಡಿದರು.

ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್, ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ, ಬಂಟ್ವಾಳ ತಾಲೂಕು ಮೇಲ್ವಿಚಾರಕ ಯಶೋಧರ ಸಾಲ್ಯಾನ್, ದೇವಿಪ್ರಸಾದ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀಗಳ ಜನ್ಮದಿನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here