ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ದಸರಾ ಮಾದರಿಯಲ್ಲಿ ಆಚರಣೆಗೆ ಚಿಂತನೆ-ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾಪ್ರಸಾದ್

0

  • ಸಮುದಾಯಕ್ಕೆ ಚಿರಾಸ್ಥಾಯಿಯಾಗಿರಬೇಕು -ಲೀಲಾವತಿ
  • ನಮ್ಮಲ್ಲಿ ಶ್ರೀಮಂತ ಮನಸ್ಸು ಮಾತ್ರ ಇದೆ – ಚಿದಾನಂದ ಬೈಲಾಡಿ

 

ಪುತ್ತೂರು: ನಾಡಪ್ರಭು ಕೆಂಪೇಗೌಡ ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು. ಅವರ ಅಭಿವೃದ್ಧಿ ಕಾರ್ಯ, ದೂರದೃಷ್ಟಿತ್ವದ ಚಿಂತನೆ ಸದಾ ಪ್ರೇರಣಾದಾಯಿ ಈ ನಿಟ್ಟಿನಲ್ಲಿ ಅವರ ಜಯಂತೋತ್ಸವವನ್ನು ದಸರಾ ಮಾದರಿಯಲ್ಲಿ ಆಚರಣೆ ಮಾಡಬೇಕೆಂಬ ಚಿಂತನೆ ಇದೆ ಎಂದು ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾಪ್ರಸಾದ್ ಅವರು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ಪ್ರಾಯೋಜಕತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ತೆಂಕಿಲ ಒಕ್ಕಲಿ ಗೌಡ ಸಮುದಾಯ ಭವನದಲ್ಲಿ ಜು. ೧೭ರಂದು ಡೆದ ನಾಡಪ್ರಭು ಕೆಂಪೇಗೌಡ ೫೧೩ನೇ ಜಯಂತೋತ್ಸವದಲ್ಲಿ ಅವರು ಸಂಸ್ಮರಣಾ ಜ್ಯೋತಿ ಬೆಳಗಿಸಿ ಮಾತನಾಡಿದರು. ನಮ್ಮ ಪರಂಪರೆ, ಸಂಸ್ಕಾರ, ಸಂಸ್ಕೃತಿಯನ್ನು ಮರೆಯಬಾರದು. ಇದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ಕೆಂಪೇಗೌಡರ ಕುರಿತು ಮುಂದಿನ ಪೀಳಿಗೆ ಅರಿಯುವ ಕೆಲಸ ಆಗಬೇಕೆಂಬ ಆದೇಶವಿದೆ. ಇದರೆ ಜೊತೆಗೆ ಕೆಂಪೇಗೌಡರ ಜಯಂತೋತ್ಸವವನ್ನು ದಸರಾ ಮಾದರಿಯಲ್ಲಿ ಆಚರಿಸುವ ನಿರ್ಧಾರವಿದೆ. ನಮ್ಮ ಒಕ್ಕಲಿಗರಲ್ಲಿ ಯಾರೆಲ್ಲ ಹೆಸರು ಕೀರ್ತಿ ತಂದಿದ್ದಾರೋ ಅವರನ್ನೆಲ್ಲ ನೆನಪಿಸಿಕೊಳ್ಳಬೇಕು ಅದಕ್ಕಾಗಿ ಮಹಾಸಂಗಮ ಕಾರ್ಯಕ್ರಮ ರಾಜ್ಯ ಒಕ್ಕಲಿಗ ಸಂಘದ ನೇತೃತ್ವದಲ್ಲಿ ನಡೆಯಬೇಕೆಂಬ ಸೂಚನೆ ಇದೆ ಹಾಗಾಗಿ ಎಲ್ಲರ ಸಹಕಾರಕ್ಕೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಡಾ.ಕೆ.ವಿ.ರೇಣುಕಾಪ್ರಸಾದ್ ಅವರನ್ನು ಪುತ್ತೂರು ಸಂಘದಿಂದ ಸನ್ಮಾನಿಸಲಾಯಿತು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಮಾಜಿ ಅಧ್ಯಕ್ಷ ಹೆಚ್.ಡಿ.ಶಿವರಾಮ ಗೌಡ, ನಾಗಪ್ಪ ಗೌಡ ಬೊಮ್ಮೆಟ್ಟಿ ಡಾ.ಕೆ.ವಿ.ರೇಣುಕಾಪ್ರಸಾದ್ ಅವರಿಗೆ ಶಾಲು, ಪೇಟ, ಹಾರ ತೊಡಿಸಿ ಸನ್ಮಾನಿಸಿದರು.


ಕೆಂಪೇಗೌಡ ಆಚರಣೆಗಾಗಿ ತಾಲೂಕು ಸಂಘಗಳಿಗೆ ಅನುದಾನ:
ನಾಡಪ್ರಭು ಕೆಂಪೇಗೌಡ ಆಚರಣೆ ಮಾಡುವ ನಿಟ್ಟಿನಲ್ಲಿ ತಾಲೂಕು ಸಂಘಗಳಿಗೆ ರೂ. ೨೫ಸಾವಿರ, ಜಿಲ್ಲೆಗೆ ರೂ. ೫೦ಸಾವಿರವನ್ನು ರಾಜ್ಯ ಒಕ್ಕಲಿಗರ ಸಂಘ ನೀಡುತ್ತಿದೆ. ಈ ನಿಟ್ಟಿನಲ್ಲಿ ಪ್ರಥಮವಾಗಿ ಕಾರ್ಯಕ್ರಮ ಹಮ್ಮಿಕೊಂಡ ಪುತ್ತೂರು ಸಂಘವನ್ನು ಡಾ.ಕೆ.ವಿ.ರೇಣುಕಾಪ್ರಸಾದ್ ಅಭಿನಂದಿಸಿದ ಅವರು ಕೆಂಗಲ್ ಹನುಮಂತಯ್ಯ ವಿಧಾನ ಸೌಧ ಕಟ್ಟಿಸಿದರು. ಕುಮಾರಸ್ವಾಮಿ ಸುವರ್ಣ ಸೌಧ ನಿರ್ಮಾಣ ಮಾಡಿದ್ದರು. ಎಸ್.ಎಸ್.ಕೃಷ್ಣ ವಿಶಾಲ ಸೌಧವನ್ನು ಕಟ್ಟಿಸಿದರು. ಇನ್ನೋರ್ವ ಕೃಷ್ಣ ಉದ್ಯೋಗ ಸೌಧವನ್ನು ಕಟ್ಟಿದರು. ಅದೇ ರೀತಿ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಸಂಪಾದಕ ಡಾ.ಯು.ಪಿ.ಶಿವಾನಂದ ಅವರಿಗೆ ಸೌತ್ ಇಂಡಿಯಾ ಪಬ್ಲಿಕ್ ರಿಲೇಶನ್ ಶಿಫ್ ಅವಾರ್ಡ್ ಸಿಕ್ಕಿದೆ. ಸುದ್ದಿ ಬಳಗಕ್ಕೆ ನನ್ನ ಅಭಿನಂದನೆಗಳು ಸಲ್ಲಿಸುತ್ತೇನೆ. ಯಾಕೆಂದರೆ ಇದು ನಾವು ಒಕ್ಕಲಿಗರಾಗಿ ಹೆಮ್ಮೆ ಪಡುವ ಸಂಗತಿ ಎಂದರು.


ಸಮರಕ್ಕೂ ಸಿದ್ದ, ಸೌಹಾರ್ದಕ್ಕೂ ಬದ್ಧ:
ಒಕ್ಕಲಿಗ ಸಂಘದ ಮೂಲಕ ಎಲ್ಲಾ ಜಿಲ್ಲೆಗೆ ಸಮಾಜದ ವಸತಿ ನಿಲಯ ನೀಡಲಾಗುತ್ತದೆ. ಈ ಭಾರಿ ಸುಳ್ಯಕ್ಕೆ ಅದು ಮಂಜೂರಾಗಿದೆ. ಮಂದೆ ಪುತ್ತೂರಿಗೂ ನೀಡಲಿದ್ದೇವೆ. ಒಕ್ಕಲಿಗರ ಪ್ರಾಧಿಕಾರದ ಮೂಲಕ ಅನೇಕ ಯೋಜನೆ ಇದೆ. ಅದನ್ನು ಉಪಯೋಗಿಸಿಕೊಳ್ಳಿ. ಕಟ್ಟಡಕ್ಕೂ ರೂ. ೨೫ಲಕ್ಷ ಕೊಡಲು ನಿರ್ಧಾರ ಕೈಗೊಂಡಿದೆ. ೫೦೦ ಮಂದಿಯ ವಸತಿ ನಿಲಯ ಕಟ್ಟಿದರೆ ರೂ. ೧ ಕೋಟಿ ಅನುದಾನ ನೀಡಲಾಗುತ್ತದೆ. ಇದೆಲ್ಲ ನಮ್ಮ ದೊರೆ ನಾಡಪ್ರಭು ಕೆಂಪೇಗೌಡರ ಕೊಡುಗೆ. ಹಾಗಾಗಿ ನಮ್ಮ ಸಂಘಟನೆ ಇನ್ನಷ್ಟು ಭದ್ರ ಪಡಿಬೇಕು. ನಾವು ಸಮರಕ್ಕೂ ಸಿದ್ಧ. ಸೌಹಾರ್ದತೆಗೂ ಬದ್ಧ ಎಂಬ ಸಂದೇಶ ನೀಡಬೇಕೆಂದು ಡಾ. ರೇಣುಕಾಪ್ರಸಾದ್ ಹೇಳಿದರು.

ಸಮುದಾಯಕ್ಕೆ ಚಿರಾಸ್ಥಾಯಿಯಾಗಿರಬೇಕು:
ಪ್ರತಿಭಾ ಪುರಸ್ಕಾರ ಪ್ರಾಯೋಜಕರಾಗಿರುವ ನಿವೃತ್ತ ಪ್ರಾಧ್ಯಾಪಕಿ ಲೀಲಾವತಿ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡರಂತೆ ಕುರುಂಜಿ ವೆಂಕಟರಮಣ ಗೌಡ ಅವರು ಕೂಡಾ ಸಮಾಜಕ್ಕೆ ಉತ್ತಮ ಮಾರ್ಗದರ್ಶಕರು. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿರಬೇಕು. ಹಾಗಾಗಿ ನಮ್ಮ ಗುರಿಯ ಕನಸು ಕಂಡು ಅದನ್ನು ನನಸು ಮಾಡಬೇಕು. ನಾವು ಸಮುದಾಯಕ್ಕೆ ಚಿರಸ್ಥಾಯಿಯಾಗಿರಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಲೀಲಾವತಿ ಎಂ ಮತ್ತು ಅವರ ಪತಿ ಬಾಲಕೃಷ್ಣ ಅವರನ್ನು ಗೌರವಿಸಲಾಯಿತು.

ನಮ್ಮಲ್ಲಿ ಶ್ರೀಮಂತ ಮನಸ್ಸು ಮಾತ್ರ ಇದೆ:
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ರಾಜ್ಯ ಒಕ್ಕಲಿಗರ ಸಂಘದಲ್ಲ ಸಾಕಷ್ಟು ವ್ಯವಸ್ಥೆಗಳಿವೆ. ಅದನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕು. ನಮ್ಮಲ್ಲೂ ಶ್ರೀಮಂತ ಗೌಡ ಸಮಾಜ ಇದೆ. ಆದರೆ ಶ್ರೀಮಂತ ಆರ್ಥಿಕತೆಯಲ್ಲಿ ಅಲ್ಲ. ಮನಸ್ಸಿನಲ್ಲಿ ಮಾತ್ರ. ಈ ನಿಟ್ಟಿನಲ್ಲಿ ರಾಜ್ಯ ಸಂಘದ ಸಹಕಾರಕ್ಕೆ ಮನವಿ ಮಾಡಿದರು.

ಪ್ರತಿಭಾಪುರಸ್ಕಾರ:
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದಿಂದ ಪ್ರತಿ ವರ್ಷದಂತೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸುಮಾರು ೯೧ ಮಂದಿ ವಿದ್ಯಾರ್ಥಿಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ದಾಮೋದರ್ ಗೌಡ ನಂದಿಲ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿರ್ವಹಿಸಿದರು. ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ ಸ್ವಾಗತಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ವಂದಿಸಿದರು. ವಸಂತ ವೀರಮಂಗಲ ಮತ್ತು ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು.

ಆನ್‌ಲೈನ್‌ಲ್ಲೇ ಸದಸ್ಯತನ ಪಡೆಯಬಹುದು:
ರಾಜ್ಯ ಸಂಘದ ಸದಸ್ಯತನಕ್ಕೆ ರೂ.೧,೬೦೦ ಫೀಸ್ ಇದೆ. ಯಾರೆ ಆಗಾಗಲಿ ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ ಅಪ್‌ಲೋಡ್ ಮಾಡಿ ಆನ್‌ಲೈನ್ ಮೂಲಕ ಸದಸ್ಯತನ ಪಡೆಯಬಹುದು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಲಿದ್ದೇವೆ. ಅದೇ ರೀತಿ ಸಮಾಜ ಬಾಂಧವರ ಗುರುತುಚೀಟಿ ಇದ್ದವರಿಗೆ ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರಿಯಾಯಿತಿ ಇತ್ತು. ಇದೀಗ ಒಕ್ಕಲಿಗ ಸಂಘದ ಮೂಲಕ ಶಿಫಾರಸು ಮಾಡಿದರೆ ಗುರುತುಚೀಟಿ ಇಲ್ಲದಿದ್ದರೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಡಾ.ರೇಣುಕಪ್ರಸಾದ್ , ಉಪಾಧ್ಯಕ್ಷರು ರಾಜ್ಯ ಒಕ್ಕಲಿಗರ ಸಂಘದ

LEAVE A REPLY

Please enter your comment!
Please enter your name here