ವಿಟ್ಲ: ಬೈಕೊಂದು ಕಳೆದ ಮೂರು ದಿನಗಳಿಂದ ವಿಟ್ಲ ಪೇಟೆಯ ಮಾರ್ಗದ ಬದಿಯಲ್ಲಿ ಪಾರ್ಕ್ ಮಾಡಿರುವ ಸ್ಥಿತಿಯಲ್ಲಿದ್ದು ಸ್ಥಳೀಯ ಆತಂಕಗೊಂಡಿದ್ದಾರೆ.
ವಿಟ್ಲದ ಬಿಎಸ್ ಬೇಕರಿಯ ಮುಂಭಾಗದಲ್ಲಿ ಕೇರಳ ನೊಂದಾವಣಿ ಬೈಕೊಂದನ್ನು ಯಾರೋ ಪಾರ್ಕ್ ಮಾಡಿ ತೆರಳಿದ್ದು, ಕಳೆದ ಮೂರು ದಿನಗಳಿಂದ ಅದರ ಮಾಲಕರು ಮರಳಿ ಬಾರದ ಹಿನ್ನೆಲೆಯಲ್ಲಿ ಆ.9ರಂದು ಸಾರ್ವಜನಿಕರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.