ಕೊಂಬೆಟ್ಟು ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ದೇಶಕ್ಕಾಗಿ ಬಲಿದಾನಗೈದವರ ವೇಷಭೂಷಣ ಧರಿಸಿ ದೇಶ ಪ್ರೇಮದ ನಡಿಗೆ

0

ಪುತ್ತೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪುತ್ತೂರು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ದೇಶಕ್ಕಾಗಿ ಬಲಿದಾನಗೈದವರ ವೇಷಭೂಷಣ ಧರಿಸಿ, ನಾಮಫಲಕ ಹಿಡಿದು ಭಾರತ್ ಮಾತಾ ಕೀ ಜೈಕಾರದೊಂದಿಗೆ ಆ.13ರಂದು ದೇಶ ಪ್ರೇಮದ ನಡಿಗೆ ಕಾರ್ಯಕ್ರಮ ನಡೆಯಿತು.

ಕೊಂಬೆಟ್ಟು ಶಾಲೆಯಿಂದ ಮುಖ್ಯರಸ್ತೆಯಾಗಿ ಪ್ರಧಾನ ಅಂಚೆ ಕಚೇರಿಯ ಬಳಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯಾಗಿ ಶಾಲೆಯ ಮೈದಾನದಲ್ಲಿ ದೇಶ ಪ್ರೇಮದ ನಡಿಗೆ ಸಮಾಪನಗೊಂಡಿತು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಶಾಲಾ ಉಪಪ್ರಾಂಶುಪಾಲ ವಸಂತ ಮೂಲ್ಯ ಸೇರಿದಂತೆ ಶಾಲೆಯ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು ನಡಿಗೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here