ಪುತ್ತೂರು ಬಿಲ್ಲವ ಮಹಿಳಾ ವೇದಿಕೆಯ ಸಾರಥ್ಯದಲ್ಲಿ ಮೇಳೈಸಿದ ‘ಆಟಿ ಕೂಟೊ’

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಮತ್ತು ಮಹಿಳಾ ವೇದಿಕೆಯ ಸಾರಥ್ಯದಲ್ಲಿ ಬಪ್ಪಳಿಗೆಯಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಸಭಾಭನದಲ್ಲಿ ಆ.14ರಂದು ಆಟಿಡೊಂಜಿ ಕೂಟೊ ಕಾರ್ಯಕ್ರಮ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.  ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಮುಕ್ವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡಂಜಿ ಹಲವಾರು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿದ್ರು. ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿರುವ ನ್ಯಾಯವಾದಿ ಶೈಲಜಾ ರಾಜೇಶ್ ಆಟಿ ಕೂಟದ ಮಹತ್ವ ತಿಳಿಸಿದರು. ದ.ಕ ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಮತ್ತು ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. 

ಮಧ್ಯಾಹ್ನ 1.30ರಿಂದ ವಿವಿಧ ಗ್ರಾಮ ಸಮಿತಿಯ ಸದಸ್ಯರುಗಳಿಂದ ಜಾನಪದ ನೃತ್ಯ ಮತ್ತು ವೈವಿಧ್ಯಮಯ ಕಾರ್ಯಕ್ರಮ ಜರಗಿತು.

ಘಮ ಘಮಿಸಿದ ಆಟಿದ ಅಟಿಲ್:
ಆಟಿದ ಕೂಟದ ಔತಣ ಕೂಟದಲ್ಲಿ ಮುಡಿ ಕುಕ್ಕುದ ಉಪ್ಪಡ್, ಮರಚೇವುದ ಪತ್ರೊಡೆ, ಪೆಲಕಾಯಿದಡ್ಡೆ, ಮುಡಿ ಅರಿತ ನುಪ್ಪು ಬೊಕ್ಕ ಊರುದ ಕೋರಿದ ಸಾರ್, ಕಣಿಲೆ ಪದೆಂಜಿ ಆಜಯಿನ, ತೇಟ್ಲ, ಅಂಬಟೆ, ಪೆಲತ್ತರಿ ಪುಳಿಮುಂಚಿ ಗಸಿ, ಕುಡು ಬಾರೆದಂಡ್ ಆಜಯಿನ, ಉಪ್ಪಡಚ್ಚಿಲ್, ಪೆಲತ್ತರಿ ಗಸಿ, ತೊಪ್ಪು ತಜಂಕ್ ಉಪ್ಪುಕರಿ, ಕೋರಿ ಸುಕ್ಕ, ಸೋನೆತಪ್ಪು, ಸೇರೆಕೊಡಿ ಚಟ್ನಿ, ಕಡಲೆ ಬಲ್ಯಾರ್ ಆಜಯಿನ, ಪದೆಂಜಿದ ಚಿಯಾನ ಖಾದ್ಯಗಳು ಘಮಘಮಿಸಿತು.

LEAVE A REPLY

Please enter your comment!
Please enter your name here