ತಲೆಮರೆಸಿಕೊಂಡಿದ್ದ ಕಾರು ಕಳವು ಪ್ರಕರಣದ ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿದ ಪುತ್ತೂರು ಪೊಲೀಸರು

0

ಪುತ್ತೂರು: ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ತಲೆಮರೆಸಿಕೊಂಡ ಆರೋಪಿಯೊಬ್ಬರನ್ನು ಆ.16 ರಂದು ಪುತ್ತೂರು ಪೊಲೀಸರು ಮಂಗಳೂರು ಬರ್ಕೆಯಲ್ಲಿ ಬಂಧಿಸಿದ್ದಾರೆ.
ಮಂಗಳೂರು ಕದ್ರಿ ನಿವಾಸಿ ಸುಧೀರ್ ಪ್ರಭು ಬಂಧಿತ ಆರೋಪಿ. 2001 ರ ಮಾ.8 ರಂದು ಮಂಗಳೂರು ಹಂಪನಕಟ್ಟೆಯಿಂದ ಜಯಂತ ಎಂಬವರ ಬಾಡಿಗೆಗೆ  ಟಾಟಾ ಸುಮೋ ಕಾರನ್ನು ಆರೋಪಿಗಳಾದ ಸುಧೀರ್ ಪ್ರಭು ,ಮತ್ತು ಬಿ.ಎಂ ಹನೀಫ್ ರವರುಗಳು ಬಾಡಿಗೆಗೆ ಪಡೆದು ಸಕಲೇಶ್ ಪುರ, ಹಾಸನ ಇತ್ಯಾದಿ ಕಡೆಗಳಲ್ಲಿ ಟಿಂಬರ್ ವ್ಯಾಪಾರದ ವಿಚಾರವಾಗಿ ಸುತ್ತಾಡಿ 2001 ರಲ್ಲಿ ಮಾ.13 ಕ್ಕೆ ಪುತ್ತೂರಿಗೆ ಬಂದು ಪುತ್ತೂರಿನ ಆರಾಧನಾ ಟೂರಿಸ್ಟ್ ಹೋಂ ನಲ್ಲಿ ತಂಗಿ ಬಾಡಿಗೆ ಕಾರನ್ನು ಅಲ್ಲಿಯೇ ಪಾರ್ಕ್ ಮಾಡಿಸಿ ಚಾಲಕನಿಗೆ ಬಾಡಿಗೆ ಕೊಡದೇ ಚಾಲಕನಿಗೆ ಅಲ್ಲಿಯೇ ತಂಗಲು ಹೇಳಿ ಅದೇ ದಿನ ಸಂಜೆ 4.00 ಗಂಟೆಗೆ ಚಾಲಕ ಇಲ್ಲದ ಸಮಯದಲ್ಲಿ ಕಾರನ್ನು ಕಳ್ಳತನ ಮಾಡಿದ್ದರು.ಈ ಕುರಿತು ಕಾರು ಚಾಲಕ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದರು.ನ್ಯಾಯಾಲಯದಿಂದ ಜಾಮೀನು ಪಡೆದ ಆರೋಪಿಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ತಲೆ ಮರೆಸಿಕೊಂಡಿದ್ದರು. ಹಾಗಾಗಿ ನ್ಯಾಯಯ ಆರೋಪಿಗಳಿಗೆ ವಾರಂಟ್ ಜಾರಿ ಮಾಡಿತ್ಯು. ಆರೋಪಿಗಳ ಪೈಕಿ ಹನೀಫ್ ಅವರನ್ನು 2018 ರಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದೀಗ ಇನ್ನೋರ್ವ ಆರೋಪಿ ಸುಧೀರ್ ಪ್ರಭು ಅವರನ್ನು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರು , ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ ಮಂಗಳೂರು ಮತ್ತು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಂತೆ ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುನೀಲ್ ಕುಮಾರ್ ಮತ್ತು ಪೊಲೀಸ್ ಉಪನಿರೀಕ್ಷಕರಾದ ಶ್ರೀಕಾಂತ್ ರಾಥೋಡ್ ರವರ ಆದೇಶದಂತೆ  ಎಎಸ್ಐ ಚಂದ್ರ ಮತ್ತು ಹೆಚ್.ಸಿ ಪರಮೇಶ್ವರರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here