ಅಧಿಕಾರಿ, ಜನಪ್ರತಿನಿಧಿಗಳು ಜನಹಿತವನ್ನು ಬಯಸಿದಾಗ ಉತ್ತಮ ನಿರೀಕ್ಷಿತ ಅಭಿವೃದ್ಧಿ ಸಾಧ್ಯ

0

  • ನಗರಸಭೆಯ ವಿವಿಧ ಅನುದಾನದಡಿಯ ಕಾಮಗಾರಿಗಳನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಜೀವಂಧರ್ ಜೈನ್ ಅವರು ಅಧ್ಯಕ್ಷರಾದ ಬಳಿಕ ನಗರಸಭೆಯ ಎಲ್ಲಾ ಸದಸ್ಯರು ಪುತ್ತೂರು ನಗರ ಹೇಗಿರಬೇಕೆಂಬುದನ್ನು ಸ್ವಚ್ಛತೆಯಲ್ಲಿ ೩೬ರಿಂದ ೩ನೇ ಸ್ಥಾನಕ್ಕೆ ಬಂದಿರುವುದು ಕಾರ್ಯಕ್ಷಮತೆಯನ್ನು ತೋರಿಸುತ್ತದೆ. ಈ ನಿಟ್ಟಿನಲ್ಲಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇನ್ನೊಂದು ಕಡೆ ಭ್ರಷ್ಟಾಚಾರ ಮುಕ್ತವಾದ ವ್ಯವಸ್ಥೆಯಲ್ಲಿ ನಗರಸಭೆ ಪೌರಯುಕ್ತ ಮಧು ಎಸ್ ಮನೋಹರ್ ಅವರನ್ನು ಸ್ಥಳೀಯ ಪತ್ರಿಕೆ ಗುರುತಿಸಿ ಪ್ರಾಮಾಣಿಕ ಅಧಿಕಾರಿ ನಗರಸಭೆಯಲ್ಲಿ ಇದ್ದಾರೆ ಅನ್ನುವಂತಹ ವಿಚಾರವನ್ನು ಸಮಾಜಕ್ಕೆ ಸಂದೇಶ ಕೊಡುವ ಸಂಗತಿ ಮಾಡಿರುವುದು ಒಬ್ಬ ಅಧಿಕಾರಿ ಮತ್ತು ಜನಪ್ರತಿನಿಧಿ ಜೊತೆಯಾಗಿ ಜನಹಿತವನ್ನು ಬಯಸುವ ಕೆಲಸ ಮಾಡಿದಾಗ ಉತ್ತಮ ನಿರೀಕ್ಷಿತ ಅಭಿವೃದ್ಧಿಗಳು ಆಗಲು ಸಾಧ್ಯವಿದೆ ಎಂಬುದು ಪುತ್ತೂರು ನಗರಸಭೆ ಮಾದರಿಯಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ನಗರಸಭೆಯ ವತಿಯಿಂದ ಒಟ್ಟು ಸುಮಾರು ರೂ. ೧ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ವಿವಿಧ ಕಾಮಗಾರಿಗಳಲ್ಲಿ ಪೌರ ಕಾರ್ಮಿಕರ ‘ಪೌರಬಂಧು’ ವಿಶ್ರಾಂತಿ ಗ್ರಹ, ಸೆಸ್ ಪೂಲ್ ವಾಹನ ಮತ್ತು ನೂತನ ಸಭಾಂಗಣ, ಅಭಲೇಖಾಲಯ ಮತ್ತು ಸದಸ್ಯರ ಕೊಠಡಿಯನ್ನು ಆ.೨೦ರಂದು ನಗರಭೆಯಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹಿಂದೆ ಪುರಸಭೆಯಾಗಿದ್ದ ಸಂದರ್ಭದಲ್ಲಿ ರಾಮಚಂದ್ರ ಶೆಣೈ, ರಾಮ್ ಭಟ್ ಅವರು ಉಡುಪಿ ಪುರಸಭೆಗೆ ಸರಿಸಾಟಿಯಾಗಿ ಅಂದು ಪುತ್ತೂರು ಪುರಸಭೆ ಒಂದಷ್ಟು ಸಾಧನೆ ಮಾಡಿತ್ತು. ಅದೇ ಹಾದಿಯಲ್ಲಿ ಇವತ್ತು ಪುತ್ತೂರು ನಗರಸಭೆ ಕೂಡಾ ಹೊಸತನವನ್ನು ಪುತ್ತೂರಿನ ಜನತೆಗೆ ಕೊಡುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದ್ದೇವೆ. ಪುತ್ತೂರು ನಗರಸಭೆಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರ ವಾರ್ಡ್‌ನಲ್ಲಿ ೨೫೦ ಮನೆಗೂ ತ್ರಿವರ್ಣ ಧ್ವಜ ನೀಡುವ ಮೂಲಕ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮ ಆಗಿದೆ. ಇವತ್ತು ನಗರಸಭೆಯಲ್ಲಿ ರೂ. ೪೩ ಲಕ್ಷದಲ್ಲಿ ನೂತನ ಸಭಾಂಗಣಮ ಅಭಿಲೇಖಾಲಯ ಮತ್ತು ಸದಸ್ಯರ ಕೊಠಡಿಯನ್ನು ನಿರ್ಮಿಸಲಾಗಿದ್ದು, ರೂ. ೧೨ ಲಕ್ಷದಲ್ಲಿ ಪೌರಕಾರ್ಮಿಕರ ’ಪೌರಬಂಧು ವಿಶ್ರಾಂತಿ ಗೃಹ’ ಹಾಗೂ ರೂ. ೩೨ ಲಕ್ಷದಲ್ಲಿ ಸೆಸ್ ಪೂಲ್ ವಾಹನ ಖರೀಡಿ ಸೇರಿದಂತೆ ಒಟ್ಟು ರೂ. ೮೭ ಲಕ್ಷವನ್ನು ವಿನಿಯೋಗಿಸಲಾಗಿದೆ. ಮುಂದೆಯೂ ನಗರಸಭೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ ಎಂದರು.

ಅಭಿವೃದ್ಧಿ ವಿಚಾರದಲ್ಲಿ ಸದಸ್ಯರು, ಸಿಬ್ಬಂದಿಗಳ ಸಹಕಾರ ಲಭಿಸಿದೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ ಸ್ವಚ್ಚತೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿಗಳ ಪೂರ್ಣ ಸಹಕಾರ ನೀಡಿದ್ದು, ಇದರಿಂದಾಗಿ ಕೋವಿಡ್ ಸಂಕಷ್ಟದ ನಡುವೆಯೂ ನಿರೀಕ್ಷಿತ ಸ್ವಚ್ಚತೆ ಸಾಧ್ಯವಾಗಿದೆ. ಕಚೇರಿಯಲ್ಲಿ ಒಂದಿಷ್ಟು ಸಿಬ್ಬಂದಿಗಳ ಕೊರತೆಯಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಆದಾಗ್ಯೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ಕಾರ್ಯಗಳನ್ನು ನಡೆಸಲಾಗುತ್ತಿದೆ. ಪುತ್ತೂರು ನಗರದಲ್ಲಿ ೭ ಪಾರ್ಕ್‌ಗಳನ್ನು ನಿರ್ಮಿಸಲಾಗಿದೆ ಹಾಗೂ ಬೀರಮಲೆ ಬೆಟ್ಟವನ್ನು ರೂ. ೨ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ಮಾತನಾಡಿ ನಗರಭೆಗೆ ಬಂದಿರುವ ಅನುದಾನ ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿದೆ ಎಂದು ಹೇಳಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಅವರು ಮಾತನಾಡಿ ಎಲ್ಲವು ಕೈಗೆಟುವ ರೀತಿಯಲ್ಲಿ ನಗರಭೆ ಜನಸಾಮಾನ್ಯರಿಗೆ ಉತ್ತಮ ರೀತಿಯ ಸಹಕಾರ ನೀಡುತ್ತಿದೆ. ಅವರ ಬೇಡಿಕೆಗಳಿಗೆ ಪೂಕರವಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮ ಹಾಕಿಕೊಂಡಿದೆ ಎಂದರು.

ಸನ್ಮಾನ:
ಸುಂದರವಾಗಿ ಕಾಮಗಾರಿಯನ್ನು ನಿರ್ವಹಿಸಿದ ಗುತ್ತಿಗೆದಾರ ಹಂಝ ಕೆ.ಎಮ್ ಅವರನ್ನು ಶಾಸಕರು ಸನ್ಮಾನಿಸಿದರು. ನಗರಸಭಾ ಸದಸ್ಯರಾದ ಪಿ.ಜಿ ಜಗನ್ನಿವಾಸ ರಾವ್, ಗೌರಿ ಬನ್ನೂರು, ಇಸುಬು, ಸುಂದರ ಪೂಜಾರಿ, ಇಂಜಿನಿಯರ್ ಶ್ರೀಧರ್ ನಾಯ್ಕ್ ಅತಿಥಿಗಳನ್ನು ಗೌರವಿಸಿದರು. ಜಯಲಕ್ಷ್ಮೀ ಬೇಕಲ್ ಪ್ರಾರ್ಥಿಸಿದರು. ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಾಗತಿಸಿ, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ವಂದಿಸಿದರು. ಸಿಬ್ಬಂದಿ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು.

ರೂ. ೧೪ ಕೋಟಿ ವೆಚ್ಚದಲ್ಲಿ ನೂತನ ನಗರರಸಭಾ ಕಚೇರಿ ಕಟ್ಟಡ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಈಗಾಗಲೇ ಆಡಳಿತಾತ್ಮಕ ಮಂಜೂರಾತಿ ಪಡೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರ ರೂ. ೧೦ ಕೋಟಿ ವಿಶೇಷ ಅನುದಾನದ ಜೊತೆಗೆ ನಗರಸಭೆಯ ರೂ. ೪ ಕೋಟಿ ಅನುದಾನದಲ್ಲಿ ಕಚೇರಿ ಕಟ್ಟಡ ಕಾಮಗಾರಿ ನಡೆಯಲಿದೆ. ಮುಂದಿನ ಒಂದು ವರ್ಷದ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ – ಸಂಜೀವ ಮಠಂದೂರು ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here