ರೋಗಗಳ ನಿಯಂತ್ರಣ, ತಡೆಗಟ್ಟುವಿಕೆ ಕೇಂದ್ರ ‘ ನಂದೀಶ ‘ ಶುಭಾರಂಭ

0

ಪುತ್ತೂರು: ಪುತ್ತೂರಿನಲ್ಲಿ ಇದೇ ಪ್ರಥಮವಾಗಿ ಜನರು ತಮ್ಮ ಆರೋಗ್ಯವನ್ನು ಯಾವುದೇ ತರಹದ ಸ್ಕ್ಯಾನಿಂಗ್ ಅಥವಾ ಯಾವ ಮಾದರಿ ಪರೀಕ್ಷೆಯನ್ನು ಮಾಡದೆ ಕೇವಲ  5 ನಿಮಿಷದಲ್ಲೇ ತಮ್ಮದೇಹದ ಸಂಪೂರ್ಣ ಆರೋಗ್ಯಗುಣಮಟ್ಟದ ಗುಟ್ಟನ್ನು ತಿಳಿದುಕೊಳ್ಳುವ ಅತ್ತ್ಯುತ್ತಮ ಅವಕಾಶ ಆರಂಭಗೊಂಡಿದ್ದು ಆ.20 ರಂದು ಎಪಿಎಂಸಿ ರಸ್ತೆಯ ಲಿಲ್ಲಿ ಕಾಂಪ್ಲೆಕ್ಸ್ ಇದರ ಮೊದಲನೆ ಮಹಡಿಯಲ್ಲಿ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ ‘ ನಂದೀಶ’ ಶುಭಾರಂಭಗೊಂಡಿದೆ.

ಸುದ್ದಿ ಸಮೂಹ ಸಂಸ್ಥೆ ಇದರ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ದೀಪ ಪ್ರಜ್ವಲನೆ ನೆರವೇರಿಸುವುದರ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ದತ್ತಾತ್ರೇಯ ಪ್ರಭು ಬೆಂಗಳೂರು ಇವರು ಪ್ರಾಸ್ತಾವಿಕ ಮಾತನಾಡಿ ಬಿಡುವಿಲ್ಲದ ಜೀವನ ಶೈಲಿಯಿಂದ ಮನುಷ್ಯನು ತನ್ನ ಆರೋಗ್ಯವನ್ನು ತಾನೇ ಹಾಳು ಮಾಡಿಕೋಳ್ಳುತ್ತಿದ್ದಾನೆ. ಬಿಸಿ ರಕ್ತಯಿರುವಾಗ ಹಣದ ಹಿಂದೆ, ಆರೋಗ್ಯ ಕೈ ಬಿಟ್ಟಾಗ ಆಸ್ಪತ್ರೆ ಹಿಂದೆ ಓಡುವ ಸ್ಥಿತಿ. ಮಾತ್ರೆಯ ಸೇವನೆಯಿಂದ ಅಪಾಯ, ಅದರಲ್ಲೂ ಮುಖ್ಯವಾಗಿ ಯಕೃತ್ ಗೆ ಹಾನಿ. ಈ ಎಲ್ಲಾ ತೊಂದರೆಯಿಂದ ಪಾರಾಗುವಲ್ಲಿ ಅಕ್ಯುಪ್ರೆಸರ್ ಚಿಕಿತ್ಸಾ ವಿಧಾನ ಬಹಳ ಜನಜನಿತವೂ ಹಾಗೂ ಶರೀರದ ಸಮಸ್ಯೆಯೂ ಕೂಡ ನೂರಾರಷ್ಟು ವಾಸಿಯಾಗುತ್ತದೆ. ಚಿಕಿತ್ಸಾ ವೆಚ್ಚವೂ ಕೂಡ ಬರೀ 499/- ಆಗಿದ್ದು ಸಾಮಾನ್ಯರು ಕೂಡ ಇದರ ಪ್ರಯೋಜನ ಪಡೆದುಕೊಳ್ಳಬಹುದೆಂದು ಅವರು ತಿಳಿಸಿದರು.

ಸಂಸ್ಥೆಯ ಮಾಲಕ ಎನ್ .ಕೆ.ಭಟ್ ಮಾತನಾಡಿ ಅಕ್ಯುಪ್ರೆಷರ್ ಮೂಲಕ ಯಾವುದೇ ಬಗೆಯ ಕಾಯಿಲೆಗಳ ಮನುಷ್ಯ ಸುಲಭವಾಗಿ ತಿಳಿಯುವ ಅವಕಾಶವಿದೆ ಹಾಗೂ ಮುಂದೆ ಬರಬಹುದಾದ ಕಾಯಿಲೆಗಳನ್ನೂ ಕೂಡ  ಸುಲಭ ರೀತಿಯಲ್ಲೂ ತಡೆಯುವ ಅವಕಾಶ ಇದ್ದು , ಜನರು ಇದರ ಸದುಪಯೋಗ ಪಡೆಯುವಂತೆ ಸಹಕಾರ ಕೋರಿದರು.
ಉಮಾಶಂಕರಿ ಭಟ್ ಸಹಿತ ಹಲವು ಅತಿಥಿಗಳು ಇದ್ದರು.


ಇಲ್ಲಿ ಹಿಮಾಲಯ ಪ್ರದೇಶ ಮೂಲದ ಹೆಸರಾಂತ ಟಿಯನ್ಸ್ ಕಂಪೆನಿ ಇದರ ಫುಡ್ ಸಪ್ಲಿಮೆಂಟರಿ , ಮಷಿನ್ ಗಳು ಲಭ್ಯವಿವೆ. ಬರೀ 499/- ಮೊತ್ತಕ್ಕೆ ತಮ್ಮ ಶರೀರದ ಎಲ್ಲಾ ರೀತಿಯ ಖಾಯಿಲೆ, ಮುಂದೆ ಬರುಬಹುದಾದ ಖಾಯಿಲೆಗಳನ್ನು ಯಾವುದೇ ಪರೀಕ್ಷೆಗಳಿಲ್ಲದೆ ತಿಳಿಯಬಹುದು ಜೊತೆಗೆ ಸಂಬಂಧಿಸಿದ ಖಾಯಿಲೆಗಳಿಗೆ ಸಂಪೂರ್ಣ ಪರಿಹಾರವೂ ಲಭ್ಯ.
ಎನ್.ಕೆ.ಭಟ್
9481147568

LEAVE A REPLY

Please enter your comment!
Please enter your name here