ಪುತ್ತೂರು : ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ), ನಾಲ್ಕು ಇಂಜಿನಿಯರಿಂಗ್ ವಿಭಾಗಗಳಿಗೆ ನವ ದೆಹಲಿಯ ಪ್ರತಿಷ್ಠಿತ ನ್ಯಾಷನಲ್ ಬೋರ್ಡ್ ಆಫ್‌ಅಕ್ರಿಡಿಟೇಶನ್(ಓಃಂ), ಜುಲೈ ೨೦೨೨ ರಿಂದ ಜೂನ್ ೨೦೨೫ ರವರೆಗೆ ಮೂರು ವರ್ಷಗಳ ಕಾಲ ಮರು-ಮಾನ್ಯತೆಯನ್ನು ನೀಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ರಿಯೋ ಡಿ.ಸೋಜಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಓಃಂ ತಜ್ಞರ ತಂಡವು ಜುಲೈಯಲ್ಲಿ ಕಾಲೇಜಿಗೆ ಭೇಟಿ ನೀಡಿ ನಾಲ್ಕು ಇಂಜಿನಿಯರಿಂಗ್ ವಿಭಾಗಗಳಾದ ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತುಇಲೆಕ್ಟ್ರಾನಿಕ್ಸ್ ಮತ್ತುಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿತ್ತು. ಕಾಲೇಜಿನಲ್ಲಿ ಅಳವಡಿಸಿಕೊಂಡಿರುವ ಮೂಲಸೌಕರ್ಯ, ನಿರ್ವಹಣೆ, ಅಧ್ಯಾಪಕರು, ವಿದ್ಯಾರ್ಥಿಗಳ ಕೊಡುಗೆಗಳು ಮತ್ತು ಫಲಿತಾಂಶ ಆಧಾರಿತ ಶಿಕ್ಷಣ ಪದ್ಧತಿಗಳನ್ನು ತಂಡವು ಶ್ಲಾಘಿಸಿತು. ಜೊತೆಗೆ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮತ್ತು ಓಃಂ ವಿಭಾಗಗಳು ಮೂರು ಶೈಕ್ಷಣಿಕ ವರ್ಷಗಳವರೆಗೆ ೨೦೨೧ ರಲ್ಲಿ ಮಾನ್ಯತೆ ಪಡೆದಿವೆ. ಇದಲ್ಲದೆ, ಕಾಲೇಜು ಫೆಬ್ರವರಿ ೨೦೨೬ ರವರೆಗೆ ಐದು ವರ್ಷಗಳ ಕಾಲ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯಿಂದ (ಓಂಂಅ)ನಿಂದ ಪ್ರತಿಷ್ಠಿತ ಂ+ ಗ್ರೇಡ್‌ಅನ್ನು ಸಹ ಪಡೆದಿದೆ. ೪-ಪಾಯಿಂಟ್ ಸ್ಕೇಲ್‌ನಲ್ಲಿ ೩.೩೯ ಅಂಕಗಳೊಂದಿಗೆ, ಕಾಲೇಜುತನ್ನ ಮೊದಲ ಪ್ರಯತ್ನದಲ್ಲಿ ಓಂಂಅ ನಿಂದ ಂ+ ಗ್ರೇಡ್‌ನೊಂದಿಗೆ ಮಾನ್ಯತೆ ಪಡೆದ ಕಾಲೇಜುಗಳ ಗಣ್ಯ ಪಟ್ಟಿಗೆ ಸೇರಿದೆ.
ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಕರ್ನಾಟಕ ರಾಜ್ಯದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ), ನವ ದೆಹಲಿಯಿಂದ ಗುರುತಿಸಲ್ಪಟ್ಟಿದೆ. ಕಾಲೇಜಿಗೆ ೨೦೨೧-೨೨ ಶೈಕ್ಷಣಿಕ ವರ್ಷದಿಂದ ತಾಜಾ ಸ್ವಾಯತ್ತ ಸ್ಥಾನಮಾನವನ್ನು ಸಹ ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕರಾದ ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ, ಉಪ ನಿರ್ದೇಶಕರಾದ ಆಲ್ವಿನ್ ರಿಚರ್ಡ್ ಡಿ’ಸೋಜಾ, ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೋ, ಐಕ್ಯೂಎಸಿ ಸಂಯೋಜಕ ಡಾ.ಶ್ರೀರಂಗ ಭಟ್, ತಂತ್ರ ಮತ್ತು ಯೋಜನೆ ಮುಖ್ಯಸ್ಥ ಡಾ.ಬಿನು ಕೆ.ಜಿ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಯಜ್ಞೇಶ್ವರನ್ ಬಿ. ಉಪಸ್ಥಿತರಿದ್ದರು.