ಕಡಬ: ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆ ಉದ್ಘಾಟನೆ

0

ಆರ್ಥಿಕ ಸ್ವಾವಲಂಬನೆ ದೇಶದ ಅಭಿವೃದ್ಧಿಗೆ ಪೂರಕ: ಬಿಷಪ್ ಮಕ್ಕಾರಿಯೋಸ್

ಕಡಬ: ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕ್ರೈಸ್ತ ಅಲ್ಪಸಂಖ್ಯಾತರ ವಿವಿದ್ದೋದ್ದೇಶ ಸಹಕಾರಿ ಸಂಘದ ಕಡಬ ಶಾಖೆಯನ್ನು ಕಡಬದ ಸೈಂಟ್ ಜೋಕಿಮ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ| ಬಿಷಪ್ ಗೀವರ್ಗಿಸ್ ಮಾರ್ ಮಕ್ಕಾರಿಯೋಸ್ ಅವರು ಸೋಮವಾರ ಉದ್ಘಾಟಿಸಿದರು.

ಬಳಿಕ ಸೈಂಟ್ ಜೋಕಿಮ್ ಸಭಾಭವನದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಸಂಘದ ವೆಬ್‌ಸೈಟ್ ಅನಾವರಣಗೊಳಿಸಿ ಆಶೀರ್ವಚನ ನೀಡಿದ ಅವರು ಸಹಕಾರಿ ತತ್ವವನ್ನು ಪಾಲಿಸುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆರ್ಥಿಕ ಸ್ವಾವಲಂಬನೆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಎಲ್ಲರೂ ಬೆಳೆಯಬೇಕೆಂಬ ಶುದ್ಧ ಮನಸ್ಸಿನಿಂದ ನಾವು ಕಾರ್ಯತತ್ಪರರಾದರೆ ನಾವೂ ಬೆಳೆಯಬಹುದು. ನಮ್ಮ ಜೊತೆಗಿರುವವರೂ ಬೆಳೆಯಬಹುದು. ಆದುದರಿಂದ ಸಂಸ್ಥೆಯ ಬೆಳವಣಿಗೆಯಲ್ಲಿ ಕೈಜೋಡಿಸುವ ಮೂಲಕ ಊರಿನ ಅಭಿವೃದ್ಧಿಗೂ ಕಾರಣರಾಗೋಣ ಎಂದು ಶುಭ ಹಾರೈಸಿದರು. ಮತೀಯ ಸಾಮರಸ್ಯಕ್ಕೆ ಬಲುದೊಡ್ಡ ಕೊಡುಗೆ ನೀಡಿರುವ ಕಡಬ ಪರಿಸರದಲ್ಲಿ ಸಂಸ್ಥೆ ಉತ್ತರೋತ್ತರ ಯಶಸ್ಸನ್ನು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಕುಟ್ರುಪಾಡಿಯ ಸೈಂಟ್ ಮೇರಿಸ್ ಫೊರೊನ ಚರ್ಚ್‌ನ ಧರ್ಮಗುರು ವಂ|ಜೋಸ್ ಅಯಂಕುಡಿ ಅವರು ಎಫ್‌ ಡಿ ಸರ್ಟಿಫಿಕೇಟ್ ವಿತರಿಸಿ, ಶುಭಹಾರೈಸಿದರು. ಪುತ್ತೂರಿನ ಮಾಯಿದೆ ದೇವುಸ್ ಚರ್ಚ್‌ನ ವಿಕಾರ್‌ವಾರ್ ವಂ| ಲೊರೆನ್ಸ್ ಮಸ್ಕರೆನಸ್ ಅವರು ಷೇರ್ ಸರ್ಟಿಫಿಕೇಟ್ ವಿತರಿಸಿ ಶುಭಹಾರೈಸಿದರು. ಕಡಬದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ| ಅರುಣ್ ವಿಲ್ಸನ್ ಲೋಬೊ, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಧರ್ಮಗುರು ವಂ| ಪಿ.ಕೆ.ಅಬ್ರಹಾಂ ಕೋರ್ ಎಪಿಸ್ಕೋ-, ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಹಾಗೂ ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ ಅವರು ಅತಿಥಿಗಳಾಗಿ ಆಗಮಿಸಿ ಮಾತನಾಡಿ ಶುಭಹಾರೈಸಿದರು. ‌

ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷ ಜಾನ್ ವಿಲಿಯಂ ಲಸ್ರಾದೋ, ನಿರ್ದೇಶಕರಾದ ಇ.ಪಿ.ರಾಜು ಕ್ಸೇವಿಯರ್, ಮೈಕೆಲ್ ಪಾಸ್, ಎಂ.ಟಿ.ಥಾಮಸ್, ಸುನೀತಾ ಮೊಂತೆರೋ, ಮಿನಿ ನೆಲ್ಸನ್, ಧೀರಾ ಕ್ರಾಸ್ತಾ, ಒವಿನ್ ಪಿಂಟೋ, ಲೂಯಿಸ್ ಲೋಬೊ, ಮುಖ್ಯ ಕಾರ್ಯನಿರ್ವಹಣಾಽಕಾರಿ ಅಜಿತ್ ಪಿ.ಜಿ. ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಬಿಟ್ಟಿ ನೆಡುನಿಲಂ ಅವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಲೂಕಾಸ್ ಟಿ.ಐ. ನಿರೂಪಿಸಿ, ಸಂಘದ ನಿರ್ದೇಶಕ ಲಿಜೋ ಜೋಸ್ ವಂದಿಸಿದರು.

LEAVE A REPLY

Please enter your comment!
Please enter your name here