ಫೋನ್ ಖರೀದಿಗೆ ಸ್ಕೂಟರ್, ಟಿವಿ ಗೆಲ್ಲುವ ಅವಕಾಶ… ಶುಭಾರಂಭದ ಪ್ರಯುಕ್ತ ಮೊಬೈಲ್ ಮಳಿಗೆ ಮ್ಯೂಸಿಕ್ ವರ್ಲ್ಡ್ ನಿಂದ ಘೋಷಣೆ

0

ಪುತ್ತೂರು: ಸುಮಾರು 12 ವರುಷದಿಂದ ಬಸ್ ನಿಲ್ದಾಣ ಮುಂಭಾಗದ ಎ.ಎಂ. ಸಂಕೀರ್ಣದಲ್ಲಿ ವ್ಯವಹರಿಸುತ್ತಿದ್ದ ಹೆಸರಾಂತ ಕಂಪೆನಿಯ ಮೊಬೈಲ್, ಬಿಡಿಭಾಗಗಳನ್ನೊಳಗೊಂಡ ಮ್ಯೂಸಿಕ್ ವರ್ಲ್ಡ್ ಸೆ.26 ರಂದು ಬಸ್ ನಿಲ್ದಾಣ ಮುಂಭಾಗದ ಕೇಶವ ಶ್ರೀ ಶಾಪಿಂಗ್ ಸೆಂಟರ್ ಸಂಕೀರ್ಣ ಇಲ್ಲಿಗೆ ಸ್ಥಳಾಂತರಗೊಂಡು,ಧಾರ್ಮಿಕ ಕೈಂಕರ್ಯದೊಂದಿಗೆ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಮಾಲಕರ ಪೋಷಕರಾದ ಕೃಷಿ ಪಂಡಿತ್ ಮೋನಪ್ಪ ಕರ್ಕೇರ ಮತ್ತು ಪುಪ್ಪಲತಾ ದಂಪತಿ ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ತುಳಸಿ ಕ್ಯಾಟರಿಂಗ್ ಸಂಸ್ಥೆಯ ಮಾಲಕ ಹರೀಶ್ ರಾವ್ ಪ್ರಥಮ ಖರೀದಿ ಮೂಲಕ ಶುಭಹಾರೈಸಿದರು.

ಸಂಸ್ಥೆಯ ಮಾಲಕ ಅಜಿತ್ ಕುಮಾರ್, ಚೆತನ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಮಾತನಾಡಿದ ಅವರು ಶುಭಾರಂಭದ ಸಲುವಾಗಿ ಸ್ಮಾರ್ಟ್ ಫೋನ್ ಫೆಸ್ಟ್ ನ್ನು ಸಂಸ್ಥೆಯು ಆಯೋಜಿಸಿದ್ದು, ಮೊದಲ ವಿಜೇತ ಗ್ರಾಹಕರಿಗೆ ಟಿವಿಎಸ್ ಜ್ಯೂಪಿಟರ್ ವಾಹನ ಸಿಗಲಿದ್ದು, ಎರಡನೆಯ ವಿಜೇತರಿಗೆ ಎಲ್ಇಡಿ ಟಿವಿ ಹಾಗೂ ಸ್ಕ್ರ್ಯಾಚ್ ಆ್ಯಂಡ್ ವಿನ್ ಮೂಲಕ ಸ್ಮಾರ್ಟ್ ಫೋನ್,ಏರ್ ಪೋಡ್ ,ಕುಕ್ಕಿಂಗ್ ತವಾ ನೆಕ್ ಬ್ಯಾಂಡ್ ಇಯರ್ ಫೋನ್ ಸಹಿತ ಸುಮಾರು 5 ಸಾವಿರಕ್ಕೂ ಮಿಕ್ಕಿ ಕೊಡುಗೆಗನ್ನು ಗೆಲ್ಲುವ ಅವಕಾಶವಿದ್ದು ಸ್ಮಾರ್ಟ್ ಫೆಸ್ಟ್ 2023ನೇ ಜ.10ರ ತನಕವೂ ಮುಂದುವರಿಯಲಿದ್ದು, ಪ್ರತಿ ತಿಂಗಳು ವಿಜೇತರ ಹೆಸರನ್ನು ಘೋಷಣೆ ಮಾಡಲಾಗುವುದು ಎಂದು ಹೇಳಿ, ಸಂಸ್ಥೆಯಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ತಿಳಿಸಿ ಸಹಕಾರ ಯಾಚಿಸಿದರು. 

ಪ್ರತಿ ತಿಂಗಳೂ ಸ್ಕೂಟರ್ ,ಟಿವಿ ಜೊತೆ 5 ಸಾವಿರಕ್ಕೂ ಮಿಕ್ಕಿ ಉಡುಗೊರೆ…!
ಮ್ಯೂಸಿಕ್ ವರ್ಲ್ಡ್ ಸಂಸ್ಥೆಯೂ ಸ್ಮಾರ್ಟ್ ಫೆಸ್ಟ್ ಮೂಲಕ ಗ್ರಾಹಕರಿಗಾಗಿ ದಸರಾ ಹಬ್ಬದಿಂದ ಮುಂಬರುವ ಮಕರ ಸಂಕ್ರಮಣದವರೆಗೂ ವಿಜೇತ ಗ್ರಾಹಕರಿಗೆ ಸ್ಕೂಟರ್, ಟಿವಿ ಸಹಿತ ಸ್ಕ್ರ್ಯಾಚ್ ಆ್ಯಂಡ್ ವಿನ್ ಮೂಲಕ 5 ಸಾವಿರಕ್ಕೂ ಮಿಕ್ಕಿ ಖಚಿತ ಉಡುಗೊರೆಗಳನ್ನು ಘೋಷಣೆ ಮಾಡಿದ್ದು ,ಇನ್ನು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9902798980 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here