32ನೇ ವರ್ಷಕ್ಕೆ ಪಾದಾರ್ಪಣೆಯೊಂದಿಗೆ ಉಪ್ಪಿನಂಗಡಿ ಶ್ರೀ ರಾಮ ಮೆಡಿಕಲ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಉತ್ತಮ ಸೇವೆಯೊಂದಿಗೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ-ಡಾ. ಎಂ.ಆರ್. ಶೆಣೈ

ಉಪ್ಪಿನಂಗಡಿ: ಇಲ್ಲಿನ ಹಳೇ ಬಸ್ಟೇಂಡ್ ಬಳಿ ಕಳೆದ 31 ವರ್ಷಗಳಿಂದ ಕಾರ‍್ಯಾಚರಿಸುತ್ತಿರುವ ಶ್ರೀ ರಾಮ ಮೆಡಿಕಲ್ಸ್ ಸಂಸ್ಥೆ ಅ. 5ರಂದು ಇಲ್ಲಿನ ಶೆಣೈ ನರ್ಸಿಂಗ್ ಹೋಂ ಬಳಿ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಸ್ಥಳಾಂತರಗೊಂಡ ಮಳಿಗೆಯನ್ನು ಸಂಸ್ಥೆಯ ಮಾಲಕ ಶಿವಪ್ರಸಾದ್ ಮುದ್ರಜೆಯವರ ಮಾತೃಶ್ರೀ ಶ್ರೀಮತಿ ಲಲಿತಾ ರಾಮಚಂದ್ರ ಭಟ್ ಮುದ್ರಜೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿ ಉಪ್ಪಿನಂಗಡಿಯ ಖ್ಯಾತ, ಹಿರಿಯ ವೈದ್ಯ ಡಾ. ಎಂ.ಆರ್. ಶೆಣೈ ಮಾತನಾಡಿ ಸಂಸ್ಥೆ ಕಳೆದ 31 ವರ್ಷಗಳಿಂದ ಉತ್ತಮ ಸೇವೆಯೊಂದಿಗೆ ಜನರ ಪ್ರೀತಿ-ವಿಶ್ವಾಸ ಗಳಿಸಿದೆ, ಗ್ರಾಹಕರ ಹೆಚ್ಚಿನ ಅನುಕೂಲತೆಯ ಉದ್ದೇಶದೊಂದಿದೆ ವಿಶಾಲ ಸ್ಥಳಾವಕಾಶದ ವ್ಯವಸ್ಥೆಗೆ ಅವಕಾಶವಾಗಿದೆ, ಈ ಮೂಲಕ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಶಾಸಕ ಸಂಜೀವ ಮಠಂದೂರು, ಡಾ. ರಾಮಚಂದ್ರ ಭಟ್ ಮುದ್ರಜೆ, ಡಾ. ವಿಷ್ಣು ಪ್ರಸಾದ್ ಪುತ್ತೂರು, ಡಾ. ಶೌರಿ ರೈ, ಡಾ. ಮಹಾಲಿಂಗೇಶ್ವರ ಭಟ್, ಡಾ. ಕೆ.ಜಿ. ಭಟ್, ಡಾ. ಶಿವರಾಮ ಪನ್ಯ, ಡಾ. ಯತೀಶ್, ಡಾ. ಅಜೇಯ್ ಕಾಂಚನ, ಡಾ. ಸ್ವಾತಿ ಕಾಂಚನ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಸಾದ್ ಕಾಯರ್ಪಾಡಿ, ಉದ್ಯಮಿಗಳಾದ ಎಂ. ವರದರಾಜ್, ಶಾಂತಾರಾಮ ಕಾಂಚನ, ಬನಾರಿ ರಾಮಪ್ರಸಾದ್, ಮಹೇಂದ್ರ ವರ್ಮ, ಕೃಷ್ಣರಾಜ್, ಜಗದೀಶ್ ಶೆಟ್ಟಿ, ಆರ್.ಕೆ. ಹನೀಫ್, ಕೆ, ಜನಾರ್ದನ ಪೂಜಾರಿ, ಮಧು ಕುಮಾರ್, ಸಂಸ್ಥೆಯ ಶ್ರೀಮತಿ ಪ್ರಸನ್ನ ಶಿವಪ್ರಸಾದ್, ಡಾ. ಮೈಥಿಲಿ, ಮಹಿತ ಎಂ., ನಿಶಿತ ಎಂ. ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ಶಿವಪ್ರಸಾದ್ ಮುದ್ರಜೆ ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿದರು. ಡಾ. ಎಂ.ಎನ್. ಭಟ್. ಮುದ್ರಜೆ ವಂದಿಸಿದರು. ಡಾ. ಎಂ. ಶ್ರೀರಾಮ್ ನಿರೂಪಿಸಿದರು.

LEAVE A REPLY

Please enter your comment!
Please enter your name here