ಅ.9: ಎಂ.ಟಿ.ರಸ್ತೆಯ ಶ್ರೀ ಮಹಮ್ಮಾಯ ಸೇವಾ ಸದನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಪುತ್ತೂರು: ಮೋದಿ ಅಭಿಮಾನಿ ಬಳಗ ಪುತ್ತೂರು ಇದರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಎಂ.ಟಿ.ರಸ್ತೆಯ ಶ್ರೀ ಮಹಮ್ಮಾಯ ಸೇವಾ ಸದನಲ್ಲಿ ಅ.9ರಂದು ಬೆಳಗ್ಗಿನಿಂದ ಮಧ್ಯಾಹ್ನದ ತನಕ ನಡೆಯಲಿದೆ.

ಶಿಬಿರದಲ್ಲಿ ಉಚಿತ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಮಾಡಲಾಗುವುದು. ಮತ್ತು ಉಚಿತ ರಕ್ತ ತಪಾಸಣಾ ಶಿಬಿರವು ನಡೆಯಲಿದೆ. ಜನರಲ್ ಫಿಝಿಷ್ಯನ್, ಜನರಲ್ ಸರ್ಜನ್, ಎಲುಬು ತಜ್ಞರು, ಪಿಡಿಯಾಟ್ರಿಕ್ಸ್, ಗೈನಾಕಾಲೋಜಿಸ್ಟ್, ಕಾರ್ಡಿಯಾಲಾಜಿಸ್ಟ್ ಸೇವೆ ಶಿಬಿರದಲ್ಲಿ ಲಭ್ಯವಿದ್ದು, ಶಿಬಿರದ ಸದುಪಯೋಗ ಪಡೆಯುವಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ 8971960904, 9535964527, 9035959547 ಅನ್ನು ಸಂಪರ್ಕಿಸುವಂತೆ ಪಡೆಯುವಂತೆ ಮೋದಿ ಅಭಿಮಾನಿ ಬಳಗದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here