ಕೊಳ್ತಿಗೆ: ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ

0

ಪುತ್ತೂರು: ಕೊಳ್ತಿಗೆ ಗ್ರಾಮದ ಪಾಂಬಾರು-ಎಕ್ಕಡ್ಕ ಎಂಬಲ್ಲಿ ಸುಮಾರು ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದಾಗಿ ಹದಗೆಟ್ಟಿರುವ ರಸ್ತೆಯನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಗೂ ಸ್ಥಳೀಯರು ಶ್ರಮದಾನದ ಮೂಲಕ ದುರಸ್ತಿಪಡಿಸಿದರು. ಒಕ್ಕೂಟದ ಅಧ್ಯಕ್ಷರಾದ ಉದಯ ಕುಮಾರ್ ಜಿ ಕೆ, ಪ್ರಗತಿ ಪರ ಕೃಷಿಕ ಸತೀಶ್ ಪಾಂಬಾರು ಸಹಕಾರ ನೀಡಿದರು.

ಉಪಹಾರದ ವ್ಯವಸ್ಥೆಯನ್ನು ಕೆದಂಬಾಡಿ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷ ಶ್ಯಾಮ ಸುಂದರ ರೈ ಕೆರೆಮೂಲೆ ಮಾಡಿದ್ದರು.  ಶ್ರಮದಾನ ಕಾರ್ಯದಲ್ಲಿ ಪಿಕಪ್ ವಾಹನದ ಸಹಕಾರವನ್ನು ಜನಾರ್ದನ ಗೌಡ ಮೈರಗುಡ್ಡೆ ಮಾಡಿದರು.

ರಸ್ತೆಯು ಹದಗೆಟ್ಟು ಹೋಗಿರುವುದರಿಂದ ವಾಹನ ಸಂಚಾರ, ಸ್ಥಳೀಯರಿಗೆ ನಡೆದಾಡಲು ತುಂಬಾ ಸಮಸ್ಯೆಯಾಗಿತ್ತು. ಇದೇ ಸಮಯದಲ್ಲಿ ಸಮಯಪ್ರಜ್ಞೆ ಮೆರೆದ ಶೌರ್ಯ ವಿಪತ್ತು ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಸಂಜೆ ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರ  ವಠಾರದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಛತೆ ಕಾರ್ಯಕ್ರಮ ಮಾಡಲಾಯಿತು.  ಶ್ರೀ ಷಣ್ಮುಖದೇವ ಭಜನಾ ಮಂದಿರದ ಅಧ್ಯಕ್ಷ ಮಂಜುನಾಥ್ ದುಗ್ಗಳ, ಕಾರ್ಯದರ್ಶಿ ಶ್ರೀನಿವಾಸ ಕೊಂರ್ಬಡ್ಕ ದೊಡ್ಡಮನೆ, ಖಜಾಂಜಿ ಪ್ರವೀಣ್ ಕುಮಾರ್ ಜಿ ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here