ರೆಂಜ ಫಾರೂಕ್ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ

0

ಬೆಟ್ಟಂಪಾಡಿ: ರೆಂಜ ಫಾರೂಖ್ ಜುಮಾ ಮಸ್ಜಿದ್ ವಠಾರದಲ್ಲಿ ಈದ್ ಮಿಲಾದ್ ಕಾರ್ಯಕ್ರಮವು ಅ.9 ರಂದು ಬೆಳಿಗ್ಗೆ ನಡೆಯಿತು.
ಮಸೀದಿಯ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಹಾಜಿ ಅಜ್ಜಿಕಲ್ಲು ಧ್ವಜಾರೋಹಣ ಮಾಡಿದರು.
ಫಾರೂಖ್ ಜುಮಾ ಮಸ್ಜಿದ್ ಮುದರ್ರಿಸ್ ಮುಹಮ್ಮದ್ ಜುನೈದ್ ಸಖಾಫಿ ಪ್ರವಾದಿ ಜನ್ಮದಿನ ಸಂದೇಶ ಭಾಷಣ ಮಾಡಿದರು.
ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ರಹಮಾನ್ ಹಾಜಿ ಮಣ್ಣಾಪು,ಮದ್ರಸಾ ಸದರ್ ಮುಅಲ್ಲಿಂ ಮುಹಮ್ಮದ್ ಅಶ್ರಫ್ ಸಖಾಫಿ ಕುಂಬ್ರ, ಮುಅಲ್ಲಿಂ ನೌಶಾದ್ ಹಿಮಮಿ,ಜಮಾಅತ್ ಕಮಿಟಿ ಉಪಾಧ್ಯಕ್ಷರಾದ ಅಬ್ಬಾಸ್ ಹಾಜಿ ಮಣ್ಣಾಪು, ಪ್ರಧಾನ ಕಾರ್ಯದರ್ಶಿ ಅಮೀರ್ ಎಂಪೆಕಲ್, ಕೋಶಾಧಿಕಾರಿ ರಝಾಕ್ ನೂಜಿ, ಮುಹಮ್ಮದ್ ಹಾಜಿ ಮಣ್ಣಾಪು, ಮೂಸ ಚೆಲ್ಯಡ್ಕ, ಅರ್.ಕೆ ಮುಹಮ್ಮದ್, ಪುತ್ತುಚ್ಚ ಎಂಪೆಕಲ್ಲು, ಅಹಮದ್ ಸಾಹೇಬ್ ಅಜ್ಜಿಕ್ಕಲ್ಲು, ಅಝೀಝ್ ಅಜ್ಜಿಕ್ಕಲ್ಲು, ಅಬ್ದುಲ್ಲಾ ಕುಂಞಿ ಮಾಸ್ಟರ್ ನೂಜಿ, ಅಬ್ದುಲ್ಲಾ ಕುಂಞಿ ಕಾವು, ಅಬ್ಬಾಸ್ ಮಂಜಲ್ ಕುಂಜ, ಅಲಿ ಚೂರಿಪದವು, ಇಬ್ರಾಹಿಂ ಟಿ, ಕಾಸಿಂ ಬಾರ್ತಕುಮೇರ್, ಮೊಯ್ದು ಕುಂಞಿ ಕೋನಡ್ಕ, ಮುಂತಾದವರು ಉಪಸ್ಥಿತರಿದ್ದರು.
ನಂತರ ಕೊರಿಂಗಿಲದಿಂದ ಪ್ರಾರಂಭಗೊಂಡ ಬೃಹತ್ ಮೀಲಾದ್ ರ‍್ಯಾಲಿ ಇರ್ದೆ-ಪಳ್ಳಿತ್ತಡ್ಕ ಮಖಾಂ ಸನ್ನಿಧಿಯಲ್ಲಿ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here