ರಾಜ್ಯಮಟ್ಟದ ವಿದ್ಯಾಭಾರತಿ ಶಟಲ್ ಬಾಡ್ಮಿಂಟನ್ ಪಂದ್ಯಾಟದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ

0

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಮತ್ತು ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಅ.19 ರಂದು ಪುತ್ತೂರು  Officer’s Club ನಲ್ಲಿ ನಡೆದ ರಾಜ್ಯ ಮಟ್ಟದ ಮತ್ತು ಕ್ಷೇತ್ರೀಯ ಮಟ್ಟದ ಶಟಲ್ ಬಾಡ್ಮಿಂಟನ್ ಪಂದ್ಯಾಟದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಬಾಲವರ್ಗದ ಬಾಲಕರ ವಿಭಾಗದಲ್ಲಿ 6ನೇ ತರಗತಿಯ ಇಶಾನ್.ಕೆ (ನಾರಾಯಣ ಮೂರ್ತಿ ಮತ್ತು ಪ್ರೇಮಲತ ದಂಪತಿ ಪುತ್ರ), ಹಿತನ್ ಕುಮಾರ್(ಉದಯ ಮತ್ತು ಲಲಿತ ದಂಪತಿ ಪುತ್ರ), 7ನೇ ತರಗತಿಯ ಕಾರ್ತಿಕ್ ಕುಮಾರ್(ಪ್ರಶಾಂತ್ ಕುಮಾರ್ ಮತ್ತು ಅಂಜಲಿ ದಂಪತಿ ಪುತ್ರ) ಮತ್ತು ಮಹಿನ್.ಪಿ.ಆರ್(ರಾಕೇಶ್ ಕುಮಾರ್ ಪರ್ಲಡ್ಕ  ಮತ್ತು ಜ್ಯೋತಿ ದಂಪತಿ ಪುತ್ರ) ರವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ಸಮನ್ವಿತ.ಕೆ( ಕಿಶೋರ್ ಕುಮಾರ್ ಮತ್ತು ರೂಪಾಶ್ರೀ.ಕೆ ದಂಪತಿ ಪುತ್ರಿ), 7ನೇ ತರಗತಿಯ ಕೀರ್ತನಾ (ಪ್ರತಾಪ್ ಸಿಂಹ ವರ್ಮ ಮತ್ತು ವೀಣಾ ಕುಮಾರಿ ದಂಪತಿ ಪುತ್ರಿ) ರವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ಹರ್ಷಿತ(ಸಂತೋಷ್ ನಾಯ್ಕ ಮತ್ತು ಕವಿತಾ.ಕೆ ದಂಪತಿ ಪುತ್ರಿ) , ಶ್ರೇಯಾ.ರಾವ್ (ಕೆ. ಅನಂತಕೃಷ್ಣ ರಾವ್ ಮತ್ತು ವೀಣಾ ರಾವ್ ದಂಪತಿ ಪುತ್ರಿ), 9ನೇ ತರಗತಿಯ ಸಾನ್ವಿ (ಜೆ.ನೆಲ್ಸನ್ ಮತ್ತು ವಾಣಿ.ಯು.ಹೆಚ್ ದಂಪತಿ ಪುತ್ರಿ), ರುಚಿತಾ.ಆರ್ (ರತ್ನಾಕರ್ ಪ್ರಭು ಮತ್ತು ಸವಿತಾ.ಕೆ ದಂಪತಿ ಪುತ್ರಿ) ರವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here