ಆನೆಗುಂದಿ ಗುರುಸೇವಾ ಪರಿಷತ್‌ನ ಸಭೆ

0

ಪುತ್ತೂರು: ಆನೆಗುಂದಿ ಗುರುಸೇವಾ ಪರಿಷತ್‌ನ ಪುತ್ತೂರು ವಲಯವನ್ನು ಪುತ್ತೂರು ವಿಧಾನಸಭಾ ಕ್ಷೇತ್ರವಾಗಿ ವಿಸ್ತರಿಸುವ ಹಿನ್ನೆಲೆಯಲ್ಲಿ ಅ. 23ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಸಭೆ ಜರಗಿತು.

ಗುರುಸೇವಾ ಪರಿಷತ್ ಕೇಂದ್ರ ಘಟಕದ ಅಧ್ಯಕ್ಷ ಗಣೇಶ್ ಕೆಮ್ಮಣ್ಣು ಅಧ್ಯಕ್ಷತೆ ವಹಿಸಿದ್ದರು. ಆನೆಗುಂದಿ ಮಠದ ಪ್ರತಿಷ್ಠಾನದ ಕಾರ್ಯದರ್ಶಿ ಲೊಕೇಶ್ ಎಂ.ಬಿ. ಗುರುಮಠದ ಬಗ್ಗೆ ಮಾಹಿತಿ ನೀಡಿದರು. ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಲೋಲಾಕ್ಷ ಆಚಾರ್ಯ ಅವರು ಗುರು ಪರಂಪರೆಯ ಬಗ್ಗೆ ಮಾಹಿತಿ ನೀಡಿದರು. ಮಠದ ಗೋ ಪರ್ಯವರಣ್ ಸಂರಕ್ಷಣಾ ಟ್ರಸ್ಟ್‌ನ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಅವರು ಗೋಶಾಲೆಯ ಬಗ್ಗೆ ವಿವರಣೆ ನೀಡಿದರು. ಅಸೆಟ್‌ನ ಕಾರ್ಯದರ್ಶಿ ಗುರುರಾಜ್ ಅವರು ಮಠದ ವತಿಯಿಂದ ಹಮ್ಮಿಕೊಂಡಿರುವ ಹೈಸ್ಕೂಲ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪುತ್ತೂರು ವಲಯದ ಅಧ್ಯಕ್ಷರಾದ ವಿ. ಪುರುಷೋತ್ತಮ ಆಚಾರ್ಯ ಅವರು ವಲಯವನ್ನು ಪುತ್ತೂರು ವಿಧಾನಸಭಾ ಕ್ಷೇತ್ರವಾಗಿ ವಿಸ್ತರಿಸುವ ಹಿನ್ನೆಲೆಯ ಬಗ್ಗೆ ಮಾತನಾಡಿದರು.

ವಿಶ್ವೇಶ್ವರ ಪುರೋಹಿತ್, ಮಂಗಳೂರು ವಲಯದ ಅಧ್ಯಕ್ಷರಾದ ಶೇಖರ ಆಚಾರ್ಯ, ವಿಟ್ಲ ವಲಯದ ಅಧ್ಯಕ್ಷರಾದ ಎನ್. ಪುರಂದರ ಆಚಾರ್ಯ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ದಾಮೋದರ ಆಚಾರ್ಯ, ಹರೀಶ್ ಹರೇಕಳ, ಪುತ್ತೂರು ತಾಲೂಕಿನ ಸಂಘ ಸಂಸ್ಥೆಗಳ ಅಧ್ಯಕ್ಷರು, ಕೂಡುವಳಿಕೆ ಮೊಕ್ತೇಸರರು ಮೊದಲಾದವರು ಉಪಸ್ಥಿತರಿದ್ದರು. ದ.ಕ. ವಿಶ್ವಕರ್ಮ ಹಿತರಕ್ಷಣಾ ಸಂಘದ ಅಧ್ಯಕ್ಷ ಕಾಣಿಯೂರು ಜನಾರ್ದನ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here