ಉಪ್ಪಿನಂಗಡಿ: ಇಲ್ಲಿನ ಕೂಟೇಲ್ ಸೇತುವೆ ಸಮೀಪ, ಐಡಿಯಲ್ ಚಿಕನ್ ಬಳಿ ನೂತನವಾಗಿ ಆರಂಭಗೊಂಡ ಡೈಲಿ ಫ್ರೆಶ್ ಫಿಶ್ ನ. 27ರಂದು ಶುಭಾರಂಭಗೊಂಡಿತು.
ನೂತನ ಮೀನು ಮಾರುಕಟ್ಟೆಯನ್ನು ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಖತೀಬ್ ಅಬ್ದುಲ್ ಸಲಾಂ ಎಡಪ್ಪಾಲ ದುವಾಃ ನೆರವೇರಿಸಿ ಉದ್ಘಾಟಿಸಿ ಮಾತನಾಡಿ ಮೀನು ವ್ಯಾಪಾರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಹೆಸರು ಪಡೆದಿರುವ ಹಾಜಿ ಮುಸ್ತಫಾ ಕೆಂಪಿಯವರ ಈ ಸಹೋದರ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಹಳೇಗೇಟು ಮದ್ರಸದ ಉಸ್ಮಾನ್ ದಾರಿಮಿ, ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಸಮಿತಿಯ ಕಾರ್‍ಯದರ್ಶಿ ಅಬ್ದುಲ್ ಶುಕೂರ್ ಹಾಜಿ ಶುಕ್ರಿಯಾ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ಅಬ್ದುಲ್ ರಹಿಮಾನ್, ಯು.ಟಿ. ತೌಸೀಫ್, ಉದ್ಯಮಿಗಳಾದ ಕರುಣಾಕರ ಸುವರ್ಣ, ಯು. ರಾಮ, ಸುಂದರ ಗೌಡ, ಸಂದೀಪ್ ಶೆಟ್ಟಿ, ಸಂದೀಪ್ ಕಾಮತ್, ಅಬೂಬಕ್ಕರ್ ಕೊಳ್ಳೇಜಾಲ್, ಯು.ಕೆ. ಮುಸ್ತಫಾ, ಸಿದ್ದಿಕ್ ಮೇದರಬೆಟ್ಟು, ಅಬೂಬಕ್ಕರ್ ನಿರ್ಮಾ, ಇಬ್ರಾಹಿಂ ಆಚಿ, ಅಜೀಜ್ ಬಸ್ತಿಕ್ಕಾರ್, ಅಬ್ದುಲ್ ಖಾದರ್ ಕೊಳ್ಳೇಜಾಲ್, ಜಲೀಲ್ ಮುಕ್ರಿ, ಇಬ್ರಾಹಿಂ ಮೋನು ಪಿಲಿಗೂಡು, ಸುಲೈಮಾನ್ ಕಡವಿನಬಾಗಿಲು, ಮಹಮ್ಮದ್ ಕೆಂಪಿ, ಸಿದ್ದಿಕ್ ಕೆಂಪಿ, ಮಹಮ್ಮದ್ ಕೂಟೇಲು, ಸಿದ್ದಿಕ್ ಎನ್., ಯು.ಟಿ. ಇರ್ಷಾದ್, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಹಾಜಿ ಮುಸ್ತಫಾ ಕೆಂಪಿ ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿ, ಮಾತನಾಡಿ ಕರಾವಳಿಯ ತಾಜಾ ಮೀನುಗಳನ್ನು ಮಿತದರದಲ್ಲಿ ವಿತರಣೆ ಮಾಡಲಾಗುವುದು ಮತ್ತು ಸಭೆ, ಸಮಾರಂಭಗಳಿಗೆ ರಖಂ ಆಗಿಯೂ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು. ಆಫಿಲ್ ಅಬ್ದುಲ್ ಮುಹೈಮಿನ್ ವಂದಿಸಿದರು.