ಅನಾರೋಗ್ಯದಿಂದ ಬೇಸತ್ತು ಪಡುಬೆಟ್ಟು ನಿವಾಸಿ ಶೀನಪ್ಪ ನಾಯ್ಕ್ ಆತ್ಮಹತ್ಯೆ

0

ನೆಲ್ಯಾಡಿ: ಅನಾರೋಗ್ಯದಿಂದ ಬಳಲುತ್ತಿದ್ದ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಕುವೆತ್ತಳಿಕೆ ನಿವಾಸಿ ಶೀನಪ್ಪ ನಾಯ್ಕ್ (81ವ.) ಎಂಬವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜ.24ರಂದು ಸಂಜೆ ನಡೆದಿದೆ.

ಶೀನಪ್ಪ ನಾಯ್ಕರವರು ಕಳೆದ 20 ವರ್ಷಗಳಿಂದ ಚರ್ಮ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈ ಸಮಸ್ಯೆಯಿಂದ ಅವರು ಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಕಳೆದ ಒಂದು ವಾರದಿಂದ ಅವರಿಗೆ ತೀವ್ರ ಜ್ವರವೂ ಕಾಣಿಸಿಕೊಂಡಿತ್ತು. ಈ ಬಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಜ.24ರಂದು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಮಾತುಕತೆಯೂ ನಡೆದಿತ್ತು. ಆದರೆ ಶೀನಪ್ಪ ನಾಯ್ಕರವರು ಮಗನಲ್ಲಿ ಜ.24ರ ಬದಲು 252ರಂದು ಚಿಕಿತ್ಸೆಗೆ ಹೋಗುವ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಮಗ ಹಾಗೂ ಸೊಸೆ ನೆಲ್ಯಾಡಿಗೆ ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿ ಪತ್ನಿ ಹಾಗೂ ಮೊಮ್ಮಗಳ ಜೊತೆ ಇದ್ದರು. ಪತ್ನಿ ದನದ ಕೆಲಸಕ್ಕೆಂದು ಹೋದಾಗ ಶೀನಪ್ಪ ನಾಯ್ಕ್‌ರವರು ಮನೆಯಿಂದ ಹೊರ ಹೋಗಿ ಸಮೀಪದ ಗೇರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚರ್ಮದ ಕಾಯಿಲೆಯಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ ಹೊಂದಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪುತ್ರ ಉಪ್ಪಿನಂಗಡಿ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here