ಉಪ್ಪಿನಂಗಡಿ: ಮಗನಿಂದ ತಾಯಿಗೆ ಹಲ್ಲೆ ಆರೋಪ – ಮೂರು ದಿನವಾದರೂ ವಿಚಾರಿಸಲು ಬಾರದ ಪೊಲೀಸರು

0

ಪುತ್ತೂರು: ಮಹಿಳೆಯೋರ್ವರಿಗೆ ಆಕೆಯ ಮಗನೇ ಹಲ್ಲೆ ನಡೆಸಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮದ ಎನ್ಮಾಡಿ ಎಂಬಲ್ಲಿ ನಡೆದಿದ್ದು, ಗಾಯಾಳು ಮಹಿಳೆ ಪುತ್ತೂರು ಸರಕಾರಿ ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೂರು ದಿನವಾದರೂ ಘಟನೆ ಕುರಿತು ವಿಚಾರಿಸಲು ಪೊಲೀಸರು ಬಂದಿಲ್ಲ ಎಂದು ಅವರು ಆರೋಪಿಸಿದ್ದಾರೆ.


ಇಳಂತಿಲ ಗ್ರಾಮದ ಎನ್ಮಾಡಿ ನಿವಾಸಿ ಪುಷ್ಪಾವತಿ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನನ್ನ ಮಗಳ ನಡವಳಿಕೆ ಕುರಿತು ಪ್ರಶ್ನೆ ಮಾಡಿದ್ದೆ. ಬಳಿಕದ ಬೆಳವಣಿಗೆಯಲ್ಲಿ ನನ್ನ ಮಗ ಮಂಜುನಾಥ್ ನನಗೆ ಹಲ್ಲೆ ನಡೆಸಿದ್ದಾನೆ. ಈ ಹಿಂದೆಯೂ ಆತ ಹಲ್ಲೆ ನಡೆಸಿದ್ದು ಈ ಕುರಿತು ನಾನು ಪೊಲೀಸರಿಗೆ ದೂರು ನೀಡಿದ್ದೆ. ಜ.20ರಂದು ರಾತ್ರಿ ಆತ ಮತ್ತೆ ನನಗೆ ಹಲ್ಲೆ ನಡೆಸಿದ್ದಾನೆ. ಆಗ ನನ್ನ ಎರಡನೇ ಮಗ ಯೋಗೀಶ್ ಅಡ್ಡ ಬಂದು ಹಲ್ಲೆ ತಡೆಯಲು ಯತ್ನಿಸಿದ್ದಾನೆ. ಆದರೂ ಮಂಜುನಾಥ ನನಗೆ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ನಾನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ಹಿರಿಯ ನಾಗರಿಕಳಾಗಿದ್ದರೂ ಈ ತನಕ ಪೊಲೀಸರು ಘಟನೆ ಕುರಿತು ನನ್ನಲ್ಲಿ ಮಾಹಿತಿ ಪಡೆಯಲು ಬಂದಿಲ್ಲ ಎಂದು ಅವರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here