ಶಿರಾಡಿ: ಕಾಡಾನೆ ದಾಳಿಗೆ ಅಡಿಕೆ,ತೆಂಗು ಕೃಷಿ ಹಾನಿ

0

ನೆಲ್ಯಾಡಿ: ಕಳೆದ ರಾತ್ರಿ ಶಿರಾಡಿಯಲ್ಲಿ ದಿವಾಕರ ಗೌಡ ಎಸ್.ಎ.ಎಂಬವರ ಅಡಿಕೆ ತೋಟಕ್ಕೆ ಕಾಡಾನೆಯೊಂದು ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಗೊಳಿಸಿದೆ.
ಸುಮಾರು 30 ಅಡಿಕೆ ಮರ, 2 ಫಲಬರಿತ ತೆಂಗಿನ ಮರವನ್ನು ಪುಡಿಗೈದಿದೆ. ಮೂರು ತಿಂಗಳ ಹಿಂದೆಯೂ ಇವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಅಡಿಕೆ, ತೆಂಗಿನ ಮರ ಹಾನಿಗೊಳಿಸಿತ್ತು.

LEAVE A REPLY

Please enter your comment!
Please enter your name here