ಕುರಿಯ ಪಡ್ಪು ಸ್ವಾಮಿ ಕೊರಗಜ್ಜ, ಗುಳಿಗ, ಕಲ್ಲುರ್ಟಿ ದೈವಗಳ ನೇಮೋತ್ಸವ

0

ಕೊರಗಜ್ಜನಿಗೆ ಬೆಳ್ಳಿ ಮುಟ್ಟಳೆ, ದಂಟೆ, ಘಂಟೆ, ಬೆಳ್ಳಿದೀಪ ಸಮರ್ಪಣೆ

ಪುತ್ತೂರು: ಕುರಿಯ ಗ್ರಾಮದ ಪಡ್ಪು ಸ್ವಾಮಿ ಕೊರಗಜ್ಜ, ಗುಳಿಗ, ಕಲ್ಲುರ್ಟಿ ಸನ್ನಿಧಿಯಲ್ಲಿ ಜ.28ರಂದು ತೃತೀಯ ವರ್ಷದ ನೇಮೋತ್ಸವ ನಡೆಯಿತು.

ಬೆಳಿಗ್ಗೆ 9ರಿಂದ ಗಣಹೋಮ, ನೂತನ ಅನ್ನಛತ್ರದ ಉದ್ಘಾಟನೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಂಡಾರ ತೆಗೆದು ಗುಳಿಗ ದೈವದ ನೇಮ, ಕಲ್ಲುರ್ಟಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಕೊರಗಜ್ಜ ದೈವದ ನೇಮೋತ್ಸವ, ಕರಿಗಂಧ ಪ್ರಸಾದ ವಿತರಣೆ ನಡೆಯಿತು. ನೇಮೋತ್ಸವದ ಸಂದರ್ಭದಲ್ಲಿ ಗಣೇಶ್ ರೈ ಬೂಡಿಯಾರ್ ಮತ್ತು ಬೂಡಿಯಾರ್ ರಾಧಾಕೃಷ್ಣ ರೈರವರಿಂದ ಕೊರಗಜ್ಜನಿಗೆ ಬೆಳ್ಳಿ ಮುಟ್ಟಾಳೆ, ಸಚಿನ್ ಅಡ್ಕ ಪರ್ಪುಂಜರವರಿಂದ ದಂಟೆ, ಕಸ್ತೂರಿ ಕೂರೆಲು ಮತ್ತು ಕಿಟ್ಟುರವರಿಂದ ಘಂಟೆ, ಸತೀಶ್ ಬೋಳಂತಿಮಾರ್ ಮತ್ತು ಮನೆಯವರಿಂದ ಎರಡು ಬೆಳ್ಳಿ ದೀಪ ಸಮರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here