ಎಡಮಂಗಲದಲ್ಲಿ ಸುಪ್ರಭ ಡೋರ‍್ಸ್, ಅಲ್ಯೂಮಿನಿಯಂ ವರ್ಕ್ಸ್ ಶುಭಾರಂಭ

0

ಕಾಣಿಯೂರು: ಎಡಮಂಗಲ ಧರ್ಮಶ್ರೀ ಕಾಂಪ್ಲೆಕ್ಸ್‌ನಲ್ಲಿ ಸುಪ್ರಭ ಡೋರ‍್ಸ್ ಮತ್ತು ಅಲ್ಯೂಮಿನಿಯಂ ವರ್ಕ್ಸ್ ನೂತನವಾಗಿ ಫೆ 10ರಂದು ಶುಭಾರಂಭಗೊಂಡಿದೆ. ಅರ್ಚಕ ಬಾಲಕೃಷ್ಣ ಅಸ್ರಣ್ಣ ಅವರು ವಿವಿಧ ಪೂಜಾ ವಿಧಾನ ನೆರವೇರಿಸಿದರು. ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕರಾದ ನಿರಂಜನ್ ಆಚಾರ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ನೂತನ ಸಂಸ್ಥೆಯು ಜನತೆಗೆ ಉತ್ತಮ ಸೇವೆ ನೀಡುವುದರ ಜೊತೆಗೆ ಉನ್ನತ ಮಟ್ಟದಲ್ಲಿ ಅಭಿವೃದ್ಧಿಯನ್ನು ಹೊಂದಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ತರುವಂತಾಗಲಿ ಎಂದು ಶುಭಹಾರೈಸಿದರು. ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ, ಕಾಣಿಯೂರು ಸಿ.ಸಿ ಕನ್ಸ್ಟ್ರಕ್ಷನ್ ಚೇತನ್ ಕೆ, ಪಿಡಬ್ಲ್ಯೂಡಿ ಗುತ್ತಿಗೆದಾರ ಮೋಹನ್‌ದಾಸ್ ರೈ, ಎಡಮಂಗಲ ಧರ್ಮಶ್ರೀ ಕಾಂಪ್ಲೆಕ್ಸ್‌ನ ಮಾಲಕರಾದ ಜನಾರ್ದನ ಬಳಕ್ಕಜೆ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಸ್ಥೆಯ ಮಾಲಕರಾದ ಪದ್ಮನಾಭ ಆಚಾರ್ಯ ಮಠತ್ತಾರು ಮತ್ತು ಪ್ರದೀಪ್ ಆಚಾರ್ಯ ಮಠತ್ತಾರು ಅತಿಥಿಗಳನ್ನು ಸ್ವಾಗತಿಸಿ, ಮುರುಳ್ಯ ಶಾಂತಿನಗರದಲ್ಲಿ ಈಗಾಗಲೇ ನಮ್ಮ ಮೊದಲನೇ ಸಂಸ್ಥೆ ಯಶಸ್ವಿಯಾಗಿ ಕಾರ್ಯಚರಿಸುತ್ತಿದ್ದು, ಸಂಸ್ಥೆಯ ಎರಡನೇ ಶಾಖೆಯಾಗಿ ಎಡಮಂಗಲದಲ್ಲಿ ಶುಭಾರಂಭಗೊಂಡಿದೆ. ಸಂಸ್ಥೆಯಲ್ಲಿ ಎಲ್ಲಾ ರೀತಿಯ ಕಿಟಕಿ, ಬಾಗಿಲು, ಫ್ಯಾಬ್ರಿಕೇಶನ್ ಫ್ಲೈವುಡ್ ಮತ್ತು ವುಡ್‌ವರ್ಕ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here