ಫೆ. 21 ರಿಂದ 23: ಪುಣ್ಚಪ್ಪಾಡಿ ಕುದ್ರೋಳಿಮಾಡ ಶ್ರೀ ಧರ್ಮರಸು ಉಳ್ಳಾಕುಲು ಪಿಲಿಚಾಮುಂಡಿ, ವರ್ಣರಪಂಜುರ್ಲಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

ಪುತ್ತೂರು: ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮದ ಪುಣ್ಚಪ್ಪಾಡಿ ಕುದ್ರೋಳಿಮಾಡ ಶ್ರೀ ಧರ್ಮರಸು ಉಳ್ಳಾಕುಲು ಪಿಲಿಚಾಮುಂಡಿ, ವರ್ಣರಪಂಜುರ್ಲಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ 21 ರಿಂದ 23 ರತನಕ ವಿವಿಧ ಕಾರ‍್ಯಕ್ರಮಗಳೊಂದಿಗೆ ಜರಗಲಿದೆ.

ಹೊರಕಾಣಿಕೆ ಮೆರವಣಿಗೆ:

ಫೆ. 21 ರಂದು ಬೆಳಿಗ್ಗೆ ಹೊರೆಕಾಣಿಕೆ ಮೆರವಣಿಗೆಯು ಸವಣೂರು ಪದ್ಮಾವತಿ ಬಸದಿ ಬಳಿಯಿಂದ ಮತ್ತು ಕುಮಾರಮಂಗಲ ಗಣೇಶ್ ನಿಡ್ವಣ್ಣಾಯರವರ ಮನೆಯಿಂದ ಹೊರಡಲಿದೆ. ಸಂಜೆ ಕ್ಷೇತ್ರ ತಂತ್ರಿಗಳ ಹಾಗೂ ಋತ್ವಿಜರ ಆಗಮನ ಮತ್ತು ಪೂರ್ಣಕುಂಭ ಸ್ವಾಗತ ನಡೆಯಲಿದೆ. ಸಂಜೆ 7 ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ, ಜಲಾಧಿವಾಸ, ಪ್ರಕಾರ ಬಲ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ದೈವಗಳ ಪ್ರತಿಷ್ಠೆ:

ಫೆ. 22 ರಂದು ಮಹಾಗಣಪತಿ ಹೋಮ, ಕಲಶ ಪೂಜೆ, ಬೆಳಿಗ್ಗೆ 8.30ರ ಶುಭಮುಹೂರ್ತದಲ್ಲಿ ಶ್ರೀ ಧರ್ಮರಸು ಉಳ್ಳಾಕುಲು ಪಿಲಿಚಾಮುಂಡಿ, ವರ್ಣರಪಂಜುರ್ಲಿ ದೈವಗಳ ಪ್ರತಿಷ್ಠೆ ನಡೆಯಲಿದೆ. ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ ಭಜನೆ, ಮಧ್ಯಾಹ್ನ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಲಿದೆ. ಸಂಜೆ 3ರಿಂದ ಸಭಾ ಕಾರ‍್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಸಚಿವ ಎಸ್ ಅಂಗಾರರವರು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಸವಣೂರು ಗ್ರಾ.ಪಂ. ಅಧ್ಯಕ್ಷೆ ರಾಜೀವಿ ಶೆಟ್ಟಿ, ಕಡಬ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೇದಪ್ಪ ಗೌಡ, ಪುಣ್ಚಪ್ಪಾಡಿ ಕುದ್ರೋಳಿಮಾಡ ದೈವಸ್ಥಾನದ ಸ್ಥಳ ದಾನಿ ದಯಾನಂದ ನಾಯಕ್ ಬೆಂಗಳೂರುರವರು ಭಾಗವಹಿಸಲಿದ್ದಾರೆ. ಸಂಜೆ 6 ರಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಭಂಡಾರ ಚಾವಡಿ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ದೈವಸ್ಥಾನದ ಜೀಣೋದ್ದಾರ ಸಮಿತಿ ಅಧ್ಯಕ್ಷ ಎ.ಕೃಷ್ಣ ರೈ ಪೂಂಚಪ್ಪಾಡಿ ತಳಮನೆ, ಗೌರವಾಧ್ಯಕ್ಷ ಗಣೇಶ್ ನಿಡ್ವಣ್ಣಾಯ, ಕಾರ‍್ಯದರ್ಶಿ ಹರೀಶ್ ಪಿ.ತೋಟದಡ್ಕ, ಪುಣ್ಚಪ್ಪಾಡಿ ಹಾಗೂ ಪದಾಧಿಕಾರಿಗಳು, ಪುಣ್ಚಪ್ಪಾಡಿ ಕುದ್ರೋಳಿಮಾಡ ಶ್ರೀ ಧರ್ಮರಸು ಉಳ್ಳಾಕುಲು ಪರಿವಾರ ದೈವಗಳ ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಜಯರಾಮ ರೈ ಮತ್ತು ಸದಸ್ಯರು, ಬಾಲಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಯಾಜಮಾನ ಮತ್ತು ಪುಣ್ಚಪ್ಪಾಡಿ ತಳಮನೆ-ತೋಟದಡ್ಕ ಕುಟುಂಬಸ್ಥರು ಹಾಗೂ ಊರ ಹತ್ತು ಸಮಸ್ತರು ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಪುಣ್ಚಪ್ಪಾಡಿ ಗ್ರಾಮದ ಪುಣ್ಚಪ್ಪಾಡಿ ತಳಮನೆ ಮತ್ತು ತೋಟದಡ್ಕ ಮನೆತನದ ಹಾಗೂ ಊರಿನ ಪ್ರಧಾನ ಆರಾಧ್ಯ ಕಾರಣಿಕ ದೈವಗಳಾದ ಕುದ್ರೋಳಿ ಮಾಡ ಶ್ರೀ ಧರ್ಮರಸು ಉಳ್ಳಾಕುಲು ಪಿಲಿಚಾಮುಂಡಿ, ವರ್ಣರಪಂಜುರ್ಲಿ ದೈವಗಳ ದೈವಸ್ಥಾನವು ದೈವಜ್ಞರುಗಳಾದ ಜಯಚಂದ್ರ ಮತ್ತು ಲಕ್ಷ್ಮಿನಾರಾಯಣ ಕಾಸರಗೋಡು ಮತ್ತು ವಾಸ್ತುಶಿಲ್ಪಿ ಪ್ರಸಾದ ಮುನಿಯಂಗಳರವರ ಮಾರ್ಗದರ್ಶನದಂತೆ ಪುನರ್ ನಿರ್ಮಾಣಗೊಂಡು, ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತ್ರತ್ವದಲ್ಲಿ ವಿವಿಧ ವೈದಿಕ ಕಾರ‍್ಯಕ್ರಮಗಳು ನಡೆಯಲಿದೆ.

ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು
ಪುಣ್ಚಪ್ಪಾಡಿ ಕುದ್ರೋಳಿಮಾಡ ಶ್ರೀ ಧರ್ಮರಸು ಉಳ್ಳಾಕುಲು ಪಿಲಿಚಾಮುಂಡಿ, ವರ್ಣರಪಂಜುರ್ಲಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳ ವಿವರ- ಗೌರವಾಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ, ಅಧ್ಯಕ್ಷ ಎ.ಕೃಷ್ಣ ರೈ ಪನ್ನೆಗುತ್ತು ಪುಣ್ಚಪ್ಪಾಡಿ ತಳಮನೆ, ಉಪಾಧ್ಯಕ್ಷರುಗಳಾಗಿ ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ, ಸುಂದರ ರೈ ನಡುಮನೆ, ರವೀಂದ್ರ ರೈ ಇಳಂತಾಜೆ, ಪಿ.ಡಿ.ಗಂಗಾಧರ್ ರೈ ದೇವಸ್ಯ, ಬಾಲಕೃಷ್ಣ ಗೌಡ ಬೆದ್ರಂಪಾಡಿ, ಪ್ರಸನ್ನ ರೈ ನೆಕ್ಕರೆ, ಕಾರ‍್ಯದರ್ಶಿ ಹರೀಶ್ ಪಿ.ತೋಟದಡ್ಕ, ಉಪ-ಕಾರ‍್ಯದರ್ಶಿ ರಾಮ್‌ಮೋಹನ್ ರೈ ಕಲಾಯಿ, ಕೋಶಾಧಿಕಾರಿ ಸುಧಾಕರ್ ರೈ ದೇವಸ್ಯ, ಗೌರವ ಸಲಹೆಗಾರರಾಗಿ ಕೇಶವ ಕಲ್ಲೂರಾಯ ಬಂಬಿಲ, ಜಯಲಕ್ಷ್ಮೀ ಕೆ.ಎಸ್.ಎನ್., ನಿಡ್ವಣ್ಣಾಯ ಕುಮಾರಮಂಗಲ, ಪದ್ಮಾಕ್ಷ್ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಸಂಕಪ್ಪ ರೈ ಕಲಾಯಿ, ಬಾಲಕೃಷ್ಣ ರೈ ದೇವಸ್ಯ, ರಾಜೇಶ್ ನಾಯಕ್ ಬೆಂಗಳೂರು, ಕುಶಲ ಪಿ.ರೈ ಪುಣ್ಚಪ್ಪಾಡಿ, ಮಹಾಬಲ ಶೆಟ್ಟಿ ಕೊಮ್ಮಂಡ.

ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಪದಾಧಿಕಾರಿಗಳು: ಪುಣ್ಚಪ್ಪಾಡಿ ಕುದ್ರೋಳಿಮಾಡ ಶ್ರೀ ಧರ್ಮರಸು ಉಳ್ಳಾಕುಲು ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಪದಾಧಿಕಾರಿಗಳು ವಿವರ- ಅಧ್ಯಕ್ಷರಾಗಿ ಜಯರಾಮ ರೈ ತೋಟದಡ್ಕ, ಉಪಾಧ್ಯಕ್ಷ ರಾಜಾರಾಮ ರೈ ಪುಣ್ಚಪ್ಪಾಡಿ, ಕಾರ‍್ಯದರ್ಶಿ ಗಿರಿಶಂಕರ್ ಸುಲಾಯ ದೇವಸ್ಯ, ಕೋಶಾಧಿಕಾರಿ ಸುಧಾಕರ್ ರೈ ದೇವಸ್ಯ, ಸದಸ್ಯರುಗಳಾಗಿ ರಾಮ್‌ಮೋಹನ್ ರೈ ಕಲಾಯಿ, ವಿಶ್ವನಾಥ ಮಡಿವಾಳ, ನಾಗೇಶ್ ಬದಿಯಡ್ಕ, ಮಾಧವ ಗೌಡ ಬೆದ್ರಂಪಾಡಿ, ನಾರ್ಣಪ್ಪ ನಾಯ್ಕ ಜರಿನಾರು ಹಾಗೂ ಕುಂಞ ಓಡಂತಾರ್ಯ.

50 ಲಕ್ಷ ರೂ ವೆಚ್ಚದ ಸುಂದರ ದೈವಸ್ಥಾನ: ಪುರಾತನ ಇತಿಹಾಸವನ್ನು ಹೊಂದಿರುವ ದೈವಸ್ಥಾನವು ಪುಣ್ಚಪ್ಪಾಡಿ ಕುದ್ರೋಳಿ ಮಾಡದಲ್ಲಿ ಪುಣ್ಚಪ್ಪಾಡಿ ತಳಮನೆಯಿಂದ ಭಂಡಾರ ಬಂದು ಕುದ್ರೋಳಿ ಮಾಡದಲ್ಲಿ ತಂಬಿಲ ಸೇವೆ, ಸೋಣ ತುಡಾರ್ ಕಾರ‍್ಯಕ್ರಮ ನಡೆಯುತ್ತಿತ್ತು. ಕುದ್ರೋಳಿ ಮಾಡದಲ್ಲಿ ಧರ್ಮರಸು ಉಳ್ಳಾಕುಲು, ಪಿಲಿಚಾಮುಂಡಿ, ಕುಕ್ಕಲ ಪಂಜುರ್ಲಿ ಇಲ್ಲಿ ಆರಾಧಿಸಲ್ಪಡುವ ದೈವಗಳು. 50 ವರ್ಷಗಳ ಹಿಂದೆ ಕುದ್ರೋಳಿ ಮಾಡ ದೈವಸ್ಥಾನವನ್ನು ನ್ಯಾಯವಾದಿ ಪುರಂದರ ರೈ ಪುಣ್ಚಪ್ಪಾಡಿರವರು ಜೀರ್ಣೋದ್ಧಾರಗೊಳಿಸಿದರು. ಇದೀಗ 50 ಲಕ್ಷ ರೂ ವೆಚ್ಚದಲ್ಲಿ ಸುಂದರವಾದ ದೈವಸ್ಥಾನ ನಿರ್ಮಾಣಗೊಂಡಿದೆ. ದೈವಸ್ಥಾನ ನಿರ್ಮಾಣಕ್ಕೆ ದಯಾನಂದ ನಾಯಕ್ ಮತ್ತು ಅವರ ಮಗ ರಾಜೇಶ್ ನಾಯಕ್ ಸ್ಥಳ ದಾನ ಮಾಡಿದ್ದಾರೆ.

LEAVE A REPLY

Please enter your comment!
Please enter your name here