ದುಬೈನಲ್ಲಿ ವಿಟ್ಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ

0

ಪುತ್ತೂರು: ಬಂಟ್ವಾಳ ತಾಲೂಕಿನ ವಿಟ್ಲ ನೆಕ್ಕರೆಕಾಡು ನಿವಾಸಿ, ಉದಯೋನ್ಮುಖ ಚಿತ್ರಕಲಾವಿದೆ ಶಿಲ್ಪಾಶ್ರೀ ಹಾಗೂ ಅವರ ಪತಿ ಕಲ್ಯಾಣ ಕರ್ನಾಟಕ ಬೀದರ್ ನಿವಾಸಿ, ದೇಶದ ಪ್ರಸಿದ್ಧ ಚಿತ್ರಕಲಾವಿದ ನಾರಾಯಣ ಕುಂಬಾರ(ಎನ್.ಎಸ್. ಕುಂಬಾರ್) ಮತ್ತು ಎನ್.ಎಸ್.ಕುಂಬಾರ್ ಆರ್ಟ್ ಅಕಾಡೆಮಿಯ ವಿದ್ಯಾರ್ಥಿಗಳು ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ ಒಮಾನ್ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಇನ್ಕ್ರಿಡೆಬಲ್ ಟ್ಯಾಲೆಂಟ್ಸ್‌ನವರ ಆಯೋಜಿತ ದುಬೈನಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಪೇಂಟಿಂಗ್ ಚಿತ್ರಕಲಾ ಪ್ರದರ್ಶನದಲ್ಲಿ ಪ್ರದರ್ಶನಗೊಂಡಿವೆ. ಈ ಚಿತ್ರಕಲಾ ಪ್ರದರ್ಶನವು ಮಾ.18ರಂದು ಆರಂಭಗೊಂಡಿದ್ದು ಮಾ.25ರ ತನಕ ನಡೆಯಲಿದೆ.


ಚಿತ್ರಕಲಾವಿದ ನಾರಾಯಣ್ ಕುಂಬಾರರವರು 3 ಬಾರಿ ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಇವರ ಚಿತ್ರಕಲೆಯು ಬೆಂಗಳೂರು, ರಾಜಸ್ಥಾನ್, ದೆಹಲಿ, ಚಂಡೀಘಡ್, ಮುಂಬಯಿ, ಒರಿಸ್ಸಾ, ಹೈದರಾಬಾದ್, ಚೆನ್ನೈ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಪ್ರದರ್ಶನಗೊಂಡಿದೆ. ಶ್ರೀಲಂಕಾ, ನೇಪಾಳದಲ್ಲಿಯೂ ಪ್ರದರ್ಶನಗೊಂಡಿತು. 2020ರಲ್ಲಿ ಮಲೇಶಿಯಾದಲ್ಲಿ ನಡೆಯಬೇಕಾಗಿದ್ದ ಪ್ರದರ್ಶನ ಕೋವಿಡ್‌ನಿಂದಾಗಿ ರದ್ದುಗೊಂಡಿತ್ತು. ಈಗ ದುಬೈನಲ್ಲಿ ಪ್ರದರ್ಶನ ನಡೆಯುತ್ತಿದೆ. ಎನ್.ಎಸ್.ಕುಂಬಾರ್ ಆರ್ಟ್ ಅಕಾಡೆಮಿಯ ವಿದ್ಯಾರ್ಥಿಗಳಾದ ವಿವಾನ್ ಎಸ್. ಸಿಂಘಾಲ್, ಅಯಾನ್ಸ್ ರುಪಾಣಿ, ಗೀತಾ ತೂಪಲ್ಲಿ, ಸ್ಹೌರ್ಯ ಎಸ್ ಗಂಗಡ್ಕರ್, ಆಶೀಶ್ ಎನ್., ಪವನ್ ಜಿ., ಅನನ್ಯ ಎಸ್. ನಾಯಕ್, ಖುಷಿ ತಟಿನಿ ರಾಯ್, ಸ್ಹ್ರೆಯ ಎಸ್ ಶೇಟ್, ಸ್ವರೂಪ್ ಮುರಗೋಡ್, ಸ್ಯಹನ ಪಿ., ಮೇಧಾ ಎಸ್. ಐಎಂಗರ್, ಅರ್ಜುನ್ ಕೊಂಚಾಡಿ, ವಂದನಾ ವಿ.ದುಡಿ ರಚಿಸಿದ ಕಲಾಕೃತಿಗಳೂ ಪ್ರದರ್ಶನದಲ್ಲಿವೆ. ಚಿತ್ರಕಲಾವಿದೆ ಶಿಲ್ಪಾಶ್ರೀಯವರು ನಿವೃತ್ತ ಯೋಧ, ಯೂನಿಯನ್ ಬ್ಯಾಂಕ್‌ನ ನಿವೃತ್ತ ಸ್ಪೆಷಲ್ ಅಸಿಸ್ಟೆಂಟ್ ಕೆ.ವಾಮನ ಅವರ ಪುತ್ರಿ.

LEAVE A REPLY

Please enter your comment!
Please enter your name here