ಪರಿವಾರ ಬಂಟರ ಸಂಘ ಪುತ್ತೂರು ವಲಯದ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ: ಸುಧಾಕರ್ ಕೆ.ಪಿ, ಉಪಾಧ್ಯಕ್ಷ; ಶಾಂತ ಕುಮಾರ್ ನಾಯಕ್, ಕಾರ್ಯದರ್ಶಿ: ಕವನ್ ನಾಯಕ್, ಜೊತೆ ಕಾರ್ಯದರ್ಶಿ: ಪ್ರೇಮಾನಂದ ನಾಯಕ್, ಖಜಾಂಚಿ: ಬಾಲಕೃಷ್ಣ ನಾಯಕ್ ನಂದಿಲ ನಾಯ್ಕ್

ಪುತ್ತೂರು: ಪರಿವಾರ ಬಂಟರ ಸಂಘ ಮಂಗಳೂರು ಇದರ ಪುತ್ತೂರು ವಲಯದ ಸರ್ವಸದಸ್ಯರ ಸಭೆ ಮಾ. 26 ರಂದು ಕಲ್ಲಾರೆ ಶ್ರೀ ಕಲ್ಲಾರೆ ಶ್ರೀಗುರು ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ.ಪಿ ಕಲ್ಲಿಮಾರ್, ಉಪಾಧ್ಯಕರಾಗಿ ನಿವೃತ್ತ ಸೈನಿಕ ಶಾಂತ ಕುಮಾರ್ ನಾಯಕ್ ನೆಲಪಾಲ, ಕಾರ್ಯದರ್ಶಿಯಾಗಿ ವಕೀಲರಾಗಿರುವ ಕವನ್ ನಾಯಕ್ ದರ್ಬೆ, ಜೊತೆ ಕಾರ್ಯದರ್ಶಿಯಾಗಿ ಪ್ರೇಮಾನಂದ ನಾಯಕ್ ಬಿ.ಪಂಜಲ, ಖಜಾಂಚಿಯಾಗಿ ಬಾಲಕೃಷ್ಣ ನಾಯಕ್ ನಂದಿಲ ಇವರನ್ನು ಆಯ್ಕೆ ಮಾಡಲಾಯಿತು.

ಸಮಿತಿ ಸದಸ್ಯರಾಗಿ ಸಂತೋಷ್ ಕುಮಾರ್ ಎ. ಕಾಯರ್‍ಮಜಲು, ಮನೋಹರ್ ನಾಯಕ್ ಕೊಳಕ್ಕಿಮಾರ್, ಸದಾಶಿವ ನಾಯಕ್ ಟಿ.ತೆಂಕಿಲ, ಭಾಸ್ಕರ್ ನಾಯಕ್ ನಂದಿಲ, ರಘುನಾಥ ನಾಯಕ್ ವೀರಮಂಗಲ,ಹರೀಶ್ ನಾಯಕ್ ಕೆಮ್ಮಾಯಿ,ಸುರೇಶ್ ನಾಯಕ್ ಕರ್ಮಲ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ರಾಜೇಶ್ ನಾಯಕ್ ಕೊಡಿನೀರು, ವಿಕ್ರಮ್ ನಾಯಕ್ ಹಾರಾಡಿ,ರಾಕೇಶ್ ಕುಮಾರ್ ಪರ್ಲಡ್ಕ, ಗಣೇಶ್ ನಾಯಕ್ ಮುಕ್ರಂಪಾಡಿ, ಶಕಿಲಾ ಡಿ.ನಾಯಕ್ ಮಂಜಲ್ಪಡ್ಪು, ಹೇಮಲತಾ ಎಸ್.ನಾಯಕ್ ನರಿಮೊಗರು,ಲೀಲಾವತಿ ಆರ್.ನಾಯಕ್ ವೀರಮಂಗಲ,ನಳಿನಾಕ್ಷಿ ಎಚ್.ನಾಯಕ್ ಬನ್ನೂರು, ಸ್ಮಿತಾ ಸುಜಿತ್ ನಾಯಕ್ ಹಣೆಯೂರು, ಅಭಿಜಿತ್ ನಾಯಕ್ ಕೊಳಕ್ಕಿಮಾರ್, ಚಂದ್ರಶೇಖರ್ ನಾಯಕ್ ಅಂಜಲ,ಪ್ರವೀಣ್ ನಾಯಕ್ ಕೊಟ್ಟಿಬೆಟ್ಟು, , ಗಣೇಶ್ ನಾಯಕ್ ನೆಲ್ಲಿಕಟ್ಟೆ, ಪುರುಷೋತ್ತಮ ನಾಯಕ್ ಹಣಿಯೂರು,ವೀಕ್ಷಿತಾ ನಾಯಕ್ ಕಲ್ಲಿಮಾರ್, ವಿನೋದ ಪ್ರವೀಣ್ ನಾಯಕ್ ಕೆಮ್ಮಾಯಿ, ಶಿವಾನಂದ ನಾಯಕ್ ನಂದಿಲ, ಸುರೇಶ್ ನಾಯಕ್ ಬಾಳೆಪುಣಿ ಪಾಂಗಳಾಯಿ,ಗುರುವಚನ್ ನಾಯಕ್ ಮಂಜಲ್ಲಡ್ಪು,ಅಭಿಷೇಕ್ ನಾಯಕ್ ಕೊಳಕ್ಕಿಮಾರ್,ಗಗನ್ ನಾಯಕ್ ದರ್ಬೆ,ಸುನಿಲ್ ನಾಯಕ್ ದರ್ಬೆ ಇವರನ್ನು ಆಯ್ಕೆ ಮಾಡಲಾಯಿತು.

ನಿವೃತ್ತ ಎಎಸ್‌ಐ ಗೋಪಾಲ ನಾಯಕ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಧಾಕರ್ ಕೆ.ಪಿ. ಕಲ್ಲಿಮಾರ್ ಮಾತನಾಡಿ ಸಂಘದ ಏಳಿಗೆಗಾಗಿ ನಮ್ಮ ಹೊಸ ತಂಡ ಸಮಾಜ ಬಾಂಧವರ ಜೊತೆ ಸೇರಿ ವಿವಿಧ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಿದೆ ಇದಕ್ಕೆ ಎಲ್ಲರ ಸಹಕಾರ, ಪ್ರೊತ್ಸಾಹಬೇಕೆಂದು ವಿನಂತಿಸಿದರು.

LEAVE A REPLY

Please enter your comment!
Please enter your name here