ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೋರವರ ಗುರುದೀಕ್ಷೆಯ ಬೆಳ್ಳಿಹಬ್ಬದ ಸಂಭ್ರಮ

0

ಮುಗ್ಧತೆ, ಸರಳತೆಯ ವಂ|ಅಬೆಲ್‌ರವರದ್ದು ದಣಿವರಿಯದ ಸೇವೆ-ವಂ|ಲಾರೆನ್ಸ್ ಮಸ್ಕರೇನ್ಹಸ್

ಪುತ್ತೂರು: ಬಹಳ ಬುದ್ಧಿವಂತಿಕೆಯ, ಪ್ರತಿಭಾವಂತರಾದ ವಂ|ಅಬೆಲ್‌ರವರ ಹಿಂದಿನ ಮುಗ್ಧತೆ ಹಾಗೂ ಸರಳತೆ ಇಂದೂ ಕೂಡ ಹಾಗೆಯೇ ಇದೆ. ಧಾರ್ಮಿಕ ಜೀವನದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಅವರು ದಣಿವರಿಯದ ಸೇವೆಯನ್ನು ಉತ್ತಮವಾಗಿ ನಿರ್ವಹಿಸಿರುತ್ತಾರೆ ಎಂದು ಪುತ್ತೂರು ವಲಯದ ಪ್ರಧಾನ ಧರ್ಮಗುರು ಹಾಗೂ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಹೇಳಿದರು.


ಕ್ರೈಸ್ತ ಪವಿತ್ರಸಭೆಯ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಕಾಸರಗೋಡು ವಲಯದ ಕೊಲ್ಲಂಗಾನಾ ಸೈಂಟ್ ತೋಮಸ್ ಚರ್ಚ್‌ನ ದಿ.ಜೋನ್ ಲೋಬೋ ಹಾಗೂ ದಿ.ರೆಮಿಡಿಯ ಡಿ’ಸೋಜ ದಂಪತಿಯ ಪುತ್ರ ವಂ|ಅಬೆಲ್ ಲೋಬೋರವರಿಗೆ ಗುರುದೀಕ್ಷೆಯ ಬೆಳ್ಳಿ ಹಬ್ಬದ ಸಂಭ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಮೇ 1 ರಂದು ಚರ್ಚ್ ವಠಾರದಲ್ಲಿ ಚರ್ಚ್‌ನ ಪಾಲನಾ ಸಮಿತಿ ಹಾಗೂ ಭಕ್ತಾಧಿಗಳು ವಂ|ಅಬೆಲ್ ಲೋಬೊರವರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಅವರು ವಂ|ಅಬೆಲ್ ಲೋಬೊರವರನ್ನು ಸನ್ಮಾನಿಸಿ ಮಾತನಾಡಿದರು.

ವಂ|ಅಬೆಲ್ ಲೋಬೊರವರು ಪುತ್ತೂರು ವಲಯದ ಚರ್ಚ್‌ಗಳಲ್ಲಿ ಹತ್ತು ವರ್ಷ ಸೇವೆ ನೀಡಿದ ಅನುಭವವಿದೆ. ಧರ್ಮಗುರು ಸೇವೆಯ ಜೊತೆಗೆ ಭಕ್ತಿಗೀತೆಗಳನ್ನು ರಚಿಸಿ ಹಾಡುವುದು ಅವರ ಪ್ರತಿಭಾವಂತಿಕೆಗೆ ಹಿಡಿದ ಕನ್ನಡಿಯಾಗಿದೆ. ವಂ|ಅಬೆಲ್‌ರವರಿಗೆ ಕೊಟ್ಟಂತಹ ಜವಾಬ್ದಾರಿಯನ್ನು ಭಕ್ತರ ಸಮಗ್ರ ಕೂಡುವಿಕೆಯಿಂದ ಉತ್ತಮವಾಗಿ ನಿರ್ವಹಿಸುವುದು ಕೂಡ ಉತ್ತಮ ನಡೆಯಾಗಿದೆ ಎಂದರು.


ಮಂಗಳೂರು ಧರ್ಮಪ್ರಾಂತ್ಯದ ಕೊಂಕಣಿ ವಾರ ಪತ್ರಿಕೆ ರಾಕ್ಣೊ’ ಇದರ ಮಾಜಿ ಸಂಪಾದಕ ವಂ|ಫ್ರಾನ್ಸಿಸ್ ರೊಡ್ರಿಗಸ್‌ರವರು ಮಾತನಾಡಿ, ಗುರುದೀಕ್ಷೆಯ ಬೆಳ್ಳಿಹಬ್ಬ ಆಚರಿಸುತ್ತಿರುವ ವಂ|ಅಬೆಲ್ ಲೋಬೊರವರ ಹೆಸರಿನಲ್ಲೇ ಇದೆ ಅವರ ವ್ಯಕ್ತಿತ್ವದ ಗುಣಗಳು. ಅವರಲ್ಲಿ ಎಲ್ಲರನ್ನು ಸಮಾನವಾಗಿ ಕೊಂಡೊಯ್ಯುವ ಸಾಮರ್ಥ್ಯ, ಸಮಾನರಾಗಿ ಕಾಣುವ ನೀತಿಯ ಗುಣ, ಯಾರನ್ನೂ ಮೇಲು-ಕೀಳು ಎನ್ನದೆ ಎಲ್ಲರನ್ನು ತನ್ನವರಂತೆ ಕಾಣುತ್ತಾ ಸಮತೋಲನವನ್ನು ಕಾಯ್ದುಕೊಳ್ಳುವ ಗುಣ ಹಾಗೂ ಎಲ್ಲರೊಂದಿಗೆ ಆತ್ಮೀಯತೆಯೊಂದಿಗೆ ಪ್ರೀತಿಸುವ ಮತ್ತು ಅವರೊಂದಿಗೆ ವಾಸಿಸುವ ಎಲ್ಲಾ ಗುಣಗಳು ವಂ|ಅಬೆಲ್‌ರವರ ಹೆಸರಿನಲ್ಲಿ ಅಡಕಗೊಂಡಿದೆ. ಅದ್ದರಿಂದಲೇ ವಂ|ಅಬೆಲ್‌ರವರೋರ್ವಏಬಲ್’ ಧರ್ಮಗುರುವಾಗಿದ್ದು ಎಲ್ಲರೂ ಅವರನ್ನು `ಲೈಕ್’ ಮಾಡುವ ಧರ್ಮಗುರುವಾಗಿದ್ದಾರೆ. ವಂ|ಅಬೆಲ್ ಲೋಬೊರವರ ಮುಂದಿನ ಧಾರ್ಮಿಕ ಜೀವನವು ಇನ್ನೂ ಫಲಪ್ರದವಾಗಿ ಆಶೀರ್ವಾದದಿಂದ ಕೂಡಿರಲಿ ಎಂದು ಹೇಳಿ ಅಭಿನಂದಿಸಿದರು.


ಚರ್ಚ್ ಕುಟುಂಬದ ಪರವಾಗಿ ಮಾತನಾಡಿದ ಉಪ್ಪಿನಂಗಡಿ ಭಟ್ಸ್ ನರ್ಸಿಂಗ್ ಹೋಮ್‌ನ ಡಾ.ಸುಪ್ರೀತ್ ಲೋಬೊ ಮಾತನಾಡಿ, ವಂ|ಅಬೆಲ್‌ರವರೋರ್ವ ಪ್ರತಿಭಾವಂತರು ನಿಜ. ಅವರು ಉಪ್ಪಿನಂಗಡಿ ಚರ್ಚ್‌ಗೆ ಆಗಮಿಸಿದ್ದು ನಮಗೆ ಭಾಗ್ಯವೇ ಸರಿ. ಚರ್ಚ್ ಕುಟುಂಬ ನನ್ನ ಕುಟುಂಬ ಎನ್ನುವಂತೆ ಅವರ ನಡವಳಿಕೆಯಾಗಿದ್ದು ಎಲ್ಲರಿಗೂ ಪ್ರೀತಿಯ ಫಾದರ್ ಎನಿಸಿಕೊಂಡಿದ್ದಾರೆ. ಅವರ ಸರಳತೆ ಹಾಗೂ ಸೇವೆಯ ಮನೋಭಾವವು ಭಕ್ತರ ಹೃದಯದಲ್ಲಿ ಹಾಸುಹೊಕ್ಕಾಗಿದೆ ಎಂದರು.


ಸನ್ಮಾನ:
ಇಪ್ಪತ್ತೈದು ವರ್ಷದ ಹಿಂದೆ ತನ್ನೊಂದಿಗೆ ಗುರುದೀಕ್ಷೆಯನ್ನು ಪಡೆದುಕೊಂಡಿರುವ ಧರ್ಮಗುರು ವಂ|ಫಿಲಿಪ್ ನೆರಿರವರನ್ನು ವಂ|ಅಬೆಲ್ ಲೋಬೊರವರು ಸನ್ಮಾನಿಸಿದರು. ಅಲ್ಲದೆ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದ ಸ್ಥಳೀಯ ಧರ್ಮಗುರು ಪ್ರಸ್ತುತ ದೇಲಂತಬೆಟ್ಟು ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿರುವ ವಂ|ಸುನಿಲ್ ಪಿಂಟೋ, ವಂ|ಅಬೆಲ್ ಲೋಬೋರವರ ಗುರುದೀಕ್ಷೆಯ ಬೆಳ್ಳಿಹಬ್ಬದ ಗೀತೆಯನ್ನು ರಚಿಸಿ, ಗಾಯನ ಮಾಡಿದ ಸ್ಥಳೀಯ ಧರ್ಮಗುರು ವಂ|ಸೂರಜ್ ಲೋಬೊರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಚರ್ಚ್ ಪಾಲನಾ ಸಮಿತಿಯು 50ನೇ ವರ್ಷ ಆಚರಿಸುತ್ತಿರುವ ಸಂದರ್ಭದಲ್ಲಿ ಚರ್ಚ್ ಆರಂಭದಿಂದ ಇಂದಿನವರೆಗೆ ಚರ್ಚ್ ಪಾಲನಾ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ವಿನ್ಸೆಂಟ್ ಫೆರ್ನಾಂಡೀಸ್, ಜೋರ್ಜ್ ನೊರೋನ್ಹಾ, ರೋಬರ್ಟ್ ಡಿ’ಸೋಜ, ವಲೇರಿಯನ್ ಬ್ರ್ಯಾಗ್ಸ್, ಮಾರ್ಸೆಲ್ ವೇಗಸ್, ಸ್ಟೆಲ್ಲ ಸೆರ್ವಿನ್ ಮಾರ್ಟಿಸ್, ಓಸ್ವಾಲ್ಡ್ ಪಿಂಟೋ, ನವೀನ್ ಬ್ರ್ಯಾಗ್ಸ್, ಪ್ರಸ್ತುತ ಮ್ಯಾಕ್ಸಿಂ ಲೋಬೊ, ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿರುವ ಜೆರಾಲ್ಡ್ ಮಸ್ಕರೇನ್ಹಸ್, ರೊನಾಲ್ಡ್ ಪಿಂಟೋ, ಎವ್ಲಿನ್ ಪಾಯಿಸ್, ಸ್ಟೀವನ್ ಮೊಂತೇರೊ, ವಿನ್ಸೆಂಟ್ ಮೊರಾಸ್, ಪ್ರಸ್ತುತ ವಿಲ್ಫ್ರೆಡ್ ವಿನ್ಸೆಂಟ್ ಡಿ’ಸೋಜರವರುಗಳನ್ನು ಸನ್ಮಾನಿಸಲಾಯಿತು.


ಅಭಿನಂದನೆ:
ಬೆಳ್ಳಿಹಬ್ಬದ ಸಮಿತಿಯಲ್ಲಿನ ಸದಸ್ಯರಾದ ಮಾರ್ಸೆಲ್ ವೇಗಸ್ ಬೆಳ್ಳಿಪ್ಪಾಡಿ, ಮಾರ್ಸೆಲ್ ಡಿ’ಸೋಜ ರಾಮಕುಂಜ, ಓಸ್ವಾಲ್ಡ್ ಪಿಂಟೋ ಉಪ್ಪಿನಂಗಡಿ, ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ನೆಕ್ಕಿಲಾಡಿ, ಮ್ಯಾಕ್ಸಿಂ ಲೋಬೊ ಬಿಳಿಯೂರು, ವಿನ್ಸೆಂಟ್ ಮೊರಾಸ್ ಬನ್ನೆಂಗಳ, ನವೀನ್ ಬ್ರ್ಯಾಗ್ಸ್ ಎಣ್ಮಾಡಿ, ಶಾಲೆಟ್ ವಾಸ್ ಬಾರ್ಯ, ವೆಲೆಂಟಿನಾ ಡಿ’ಸೋಜ ವಳಾಲ್, ಡಾ.ಸುಪ್ರೀತ್ ಲೋಬೊ ನೆಕ್ಕಿಲಾಡಿ, ಮಾರ್ಸೆಲಿನ್ ಲಿಡಾ ಪಿಂಟೋ ನೆಕ್ಕಿಲಾಡಿ ಮತ್ತು ವಿವಿಧ ವಾಳೆಗಳಲ್ಲಿ ಗುರಿಕಾರರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಗುರಿಕಾರರವರುಗಳನ್ನು ಹೂಗುಚ್ಛ ನೀಡಿ ಅಭಿನಂದಿಸಲಾಯಿತು.


ಬಿಷಪ್ ಶುಭಾಶಯ ಪತ್ರ:
ಈ ಸಂದರ್ಭದಲ್ಲಿ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿರುವ ಅತಿ.ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ವಂ|ಅಬೆಲ್ ಲೋಬೊರವರ ಗುರುದೀಕ್ಷೆಯ ಬೆಳ್ಳಿಹಬ್ಬದ ಶುಭಾಶಯಗಳ ಬಗ್ಗೆ ಕಳುಹಿಸಿದ ಪತ್ರವನ್ನು ವಂ|ಸುನಿಲ್ ಪಿಂಟೋರವರು ಓದಿದರು. ಜೊತೆಗೆ ವಂ|ಅಬೆಲ್ ಲೋಬೊರವರಿಗೆ ಶುಭಾಶಯ ಕೋರಿ ಅನೇಕರು ಪತ್ರಗಳನ್ನು ಕಳುಹಿಸಿದ್ದು ಈ ಸಂದರ್ಭದಲ್ಲಿ ಅವರುಗಳ ಹೆಸರುಗಳನ್ನು ಓದಲಾಯಿತು.


ಉಪ್ಪಿನಂಗಡಿ ಸಿಸ್ಟರ್‍ಸ್ ಆಫ್ ಚಾರಿಟಿ ಇದರ ಮುಖ್ಯಸ್ಥೆ ಸಿಸ್ಟರ್ ಗ್ರೇಸಿ ಡಿ’ಸೋಜ, ವಂ|ಅಬೆಲ್ ಲೋಬೊರವರ ಕುಟುಂಬದ ಸದಸ್ಯ ಪ್ರವೀಣ್ ಪ್ರಕಾಶ್ ಲೋಬೊರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪ್ಪಿನಂಗಡಿ ಸೈಂಟ್ ಮೇರೀಸ್ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ, ಚರ್ಚ್ ವಾಳೆಯ ಗುರಿಕಾರರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ವಂ|ಅಬೆಲ್ ಲೋಬೊರವರಿಗೆ ಹೂಹಾರ ಹಾಕಿ ಅಭಿನಂದಿಸಿದರು. ಆರಂಭದಲ್ಲಿ ಗುರುದೀಕ್ಷೆಯ ಬೆಳ್ಳಿಹಬ್ಬದ ಕೇಂದ್ರಬಿಂದು ವಂ|ಅಬೆಲ್ ಲೋಬೊರವರನ್ನು ಉಪ್ಪಿನಂಗಡಿ ಸೈಂಟ್ ಮೇರೀಸ್ ಶಾಲೆಯ ವಿದ್ಯಾರ್ಥಿಗಳ ಬ್ಯಾಂಡ್ ವಾದ್ಯದೊಂದಿಗೆ ಹಾಗೂ ಮಹಿಳೆಯರು ಬಣ್ಣ ಬಣ್ಣದ ಕೊಡೆ ಹಿಡಿದು ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತರಲಾಯಿತು. ಬಳಿಕ ಸಪ್ನಾ ಮಿನೇಜಸ್ ತಂಡ ಪ್ರಸ್ತುತಪಡಿಸಿದ ಸ್ವಾಗತ ನೃತ್ಯದೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮ್ಯಾಕ್ಸಿಂ ಲೋಬೊರವರು ಸ್ವಾಗತಿಸಿ, ಆಯೋಗಗಳ ಸಂಚಾಲಕ ವಿನ್ಸೆಂಟ್ ಮೊರಾಸ್ ವಂದಿಸಿದರು. ಚರ್ಚ್ ಗಾಯನ ಮಂಡಳಿ ಉಲ್ಲಾಸದ ಗೀತೆ ಹಾಡಿದರು. ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ವಿಲ್ಫ್ರೆಡ್ ಡಿ’ಸೋಜ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಸ್ಥಳೀಯ ಧರ್ಮಗುರು ಪ್ರಸ್ತುತ ದೇಲಂತಬೆಟ್ಟು ಚರ್ಚ್‌ನ ಧರ್ಮಗುರು ವಂ|ಸುನಿಲ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.


ಭಕ್ತರ ಪ್ರೀತಿಯನ್ನು ಸದಾ ಸ್ಮರಿಸುತ್ತೇನೆ..
ಕ್ರೈಸ್ತ ಪವಿತ್ರಸಭೆಯಲ್ಲಿ ತನ್ನನ್ನು ಧರ್ಮಗುರು ಸೇವೆಗೆ ಆರಿಸಿದ ದೇವರಿಗೆ ಪ್ರಥಮವಾಗಿ ಸ್ತೋತ್ರಗಳನ್ನು ಸಲ್ಲಿಸುತ್ತೇನೆ. ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುವಾಗಿ ಸೇರ್ಪಡೆಗೊಂಡು ಅಂದಿನಿಂದ ಇಂದಿನ ಗುರುದೀಕ್ಷೆಯ ಬೆಳ್ಳಿಹಬ್ಬದ ವರ್ಷದ ತನಕ ಚರ್ಚ್‌ಗಳಲ್ಲಿ ಭಕ್ತರ ಸಹಕಾರದೊಂದಿಗೆ ತಾನು ಉತ್ತಮವಾಗಿ ಸೇವೆಯನ್ನು ನೀಡಿರುವೆ ಎಂಬ ಬಗ್ಗೆ ಆತ್ಮ ತೃಪ್ತಿಯಿದೆ. ಆದ್ದರಿಂದ ತಾನು ಸೇವೆ ನೀಡಿರುವ ಪ್ರತಿ ಚರ್ಚ್‌ನ ಭಕ್ತರಿಗೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ಸದಾ ಕೃತಜ್ಞನಾಗಿರುತ್ತೇನೆ. ಸದಾ ಪ್ರೀತಿಯನ್ನು ತೋರಿಸಿ ತನ್ನನ್ನು ಹರಸಿದ ಭಕ್ತರಿಗೆ ತಾನು ಸದಾ ಪ್ರಾರ್ಥಿಸುತ್ತೇನೆ. ಇಂದಿಲ್ಲಿ ನನ್ನ ಧರ್ಮಗುರು ದೀಕ್ಷೆಯ ಬೆಳ್ಳಿಹಬ್ಬದ ಸಂಭ್ರಮವನ್ನು ಆಚರಿಸಿದ ಚರ್ಚ್ ಪಾಲನಾ ಸಮಿತಿಗೆ ಹಾಗೂ ಕ್ರೈಸ್ತ ಬಾಂಧವರಿಗೆ ಕೃತಜ್ಞತೆಗಳೊಂದಿಗೆ ಮುಂದಿನ ನನ್ನ ಧಾರ್ಮಿಕ ಜೀವನದ ಪಯಣದಲ್ಲಿ ತಮ್ಮ ಆಶೀರ್ವಾದ ಹೀಗೆಯೇ ಇರಲಿ.
-ವಂ|ಅಬೆಲ್ ಲೋಬೊ, ಸನ್ಮಾನಿತ ಧರ್ಮಗುರು, ಉಪ್ಪಿನಂಗಡಿ ಚರ್ಚ್

ಬೆಳ್ಳಿಹಬ್ಬ ಸನ್ಮಾನ..
ಗುರುದೀಕ್ಷೆಯ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಚರ್ಚ್ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೊರವರಿಂದ ಬೆಳ್ಳಿಹಬ್ಬದ ಸಂಭ್ರಮದ ಪ್ರಯುಕ್ತ ಸಿಹಿಯ ಪ್ರತೀಕವಾದ ಕೇಕ್ ಅನ್ನು ಕತ್ತರಿಸಿ ಸಂಭ್ರಮ ದ್ವಿಗುಣಗೊಳಿಸಿದರು. ಬಳಿಕ ಗುರುದೀಕ್ಷೆಯ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಚರ್ಚ್ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೊರವರಿಗೆ ಹೂಹಾರ ಹಾಕಿ ಸನ್ಮಾನಿಸಲಾಯಿತು. ವಂ|ಅಬೆಲ್ ಲೋಬೊರವರ ಬೆಳ್ಳಿಹಬ್ಬದ ಸಂಭ್ರಮವಾಗಿ ಪುಸ್ತಕದ ಅನಾವರಣ ಮಾಡಲಾಯಿತು ಮತ್ತು ವಂ|ಅಬೆಲ್ ಲೋಬೊರವರಿಗೆ ಚರ್ಚ್ ಕುಟುಂಬದ ಪರವಾಗಿ ಪ್ರೀತಿಯ ಕಾಣಿಕೆಯನ್ನು ಹಸ್ತಾಂತರಿಸಲಾಯಿತು.

25ನೇ ಗುರುದೀಕ್ಷೆ ಸಂಭ್ರಮ..
25 ಮಂದಿ ಧರ್ಮಗುರುಗಳು ಭಾಗಿ..
ಅಭಿನಂದನಾ ಸಭಾ ಕಾರ್ಯಕ್ರಮದ ಮುನ್ನ ಚರ್ಚ್‌ನಲ್ಲಿ ಗುರುದೀಕ್ಷೆಯ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ವಂ|ಅಬೆಲ್ ಲೋಬೊರವರಿಂದ ಕೃತಜ್ಞತಾ ದಿವ್ಯ ಬಲಿಪೂಜೆ ನೆರವೇರಲ್ಪಟ್ಟಿತು. ಮಾಯಿದೆ ದೇವುಸ್ ಸಮೂಹ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಆಂಟನಿ ಪ್ರಕಾಶ್ ಮೊಂತೇರೊರವರು ಬೈಬಲ್ ವಾಚಿಸಿ ಸಂದೇಶ ನೀಡಿದರು. ಪುತ್ತೂರು ವಲಯದ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು, ಬನ್ನೂರು ಸಂತ ಅಂತೋನಿ ಚರ್ಚ್ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ, ಧರ್ಮಗುರುಗಳಾದ ವಂ|ಸ್ಟ್ಯಾನಿ ಪಿಂಟೋ, ವಂ|ಜೇಸನ್ ಲೋಬೊ, ವಂ|ಫಿಲಿಪ್ ನೆರಿ, ವಂ|ಫ್ರಾನ್ಸಿಸ್ ರೊಡ್ರಿಗಸ್, ವಂ|ಜಗದೀಶ್, ವಂ|ಜೋಸ್ವಿನ್, ವಂ|ರಿತೇಶ್ ರೊಡ್ರಿಗಸ್, ವಂ|ಪಾವ್ಲ್ ಕ್ರಾಸ್ತಾ, ವಂ|ನವೀನ್ ಪಿಂಟೋ, ವಂ|ಸೂರಜ್ ಲೋಬೊ, ವಂ|ಪ್ರವೀಣ್ ಡಿ’ಸೋಜ, ವಂ|ವಿನ್ಸೆಂಟ್ ಸಿಕ್ವೇರಾ, ವಂ|ಪ್ರಕಾಶ್ ಡಿ’ಸೋಜ, ವಂ|ಜಯಪ್ರಕಾಶ್ ಡಿ’ಸೋಜ ಸಹಿತ ಸುಮಾರು 25 ಮಂದಿ ಧರ್ಮಗುರುಗಳು ಬಲಿಪೂಜೆಯಲ್ಲಿ ಭಕ್ತಾಧಿಗಳೊಂದಿಗೆ ಪಾಲ್ಗೊಂಡರು. ವಂ|ಅಬೆಲ್ ಲೋಬೊರವರ ಧರ್ಮಗುರು ದೀಕ್ಷೆಯ 25ನೇ ವರ್ಷದ ಸವಿನೆನಪಿಗೆ 25 ಮಂದಿ ಧರ್ಮಗುರುಗಳು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡಿರುವುದು ವಿಶೇಷತೆಯಾಗಿದೆ.

LEAVE A REPLY

Please enter your comment!
Please enter your name here