ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 5 ಸಾವಿರ ಮೇಲ್ಪಟ್ಟು ಮನೆ ಮನೆ ಭೇಟಿ ಕಾರ್ಯಕ್ರಮ “ನನ್ನ ಬೂತ್ ನಾನು ಅಭ್ಯರ್ಥಿ” ಕಾರ್ಯಕ್ರಮ ನಡೆಯುತ್ತಿದ್ದು, ಮೇ 8 ಕ್ಕೆ ಕಾಂಗ್ರೆಸ್ ಮತಯಾಚನೆ ರ್‍ಯಾಲಿಯು ಪುತ್ತೂರಿನ ಬೊಳುವಾರಿನಿಂದ ದರ್ಬೆ ತನಕ ನಡೆಯಲಿದ್ದು ಚಿತ್ರ ನಟಿ ರಮ್ಯಾ ಅವರು ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ಭಾರಿಯ ಚುನಾವಣೆಯಲ್ಲಿ ನಾವು ಬಹುಮತದಿಂದ ಗೆದ್ದು ಬರುವ ಆತ್ಮವಿಶ್ವಾಸವಿದೆ. ರ್‍ಯಾಲಿಯಲ್ಲಿ ಸುಮಾರು 25 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದ ಅವರು ಮೇ 7 ಕ್ಕೂ ವಿಟ್ಲ, ಉಪ್ಪಿನಂಗಡಿಯಲ್ಲೂ ರ್‍ಯಾಲಿ ನಡೆಯಲಿದೆ ಎಂದರು.
ಅಭಿವೃದ್ದಿ ಯೋಜನೆ ಮುಂದಿಟ್ಟು ಮತ ಯಾಚನೆ:
ಚುನಾವಣಾ ಸಂದರ್ಭದಲ್ಲಿ ನಮ್ಮ ಪಕ್ಷ ಪ್ರಣಾಳಿಕೆ ನೀಡಿದೆ. ಅದರಂತೆ ಪ್ರಣಾಳಿಯ ಎಲ್ಲಾ ಭರವಸೆ ಈಡೇರಿಸುವ ಜೊತೆಗೆ ಪುತ್ತೂರಿಗೆ ಮೆಡಿಕಲ್ ಕಾಲೇಜು, ಕುಡಿಯುವ ನೀರು, ಕೊಯಿಲದಲ್ಲಿ ಎನಿಮಲ್ ಹಬ್, ಪೊಲ್ಟ್ರಿಇಂಡಸ್ಟ್ರೀಸ್, ಕುರಿಗಳ ಸಾಕಾಣಿಕೆ, 20 ಸಾವಿರ ಉದ್ಯೋಗವಕಾಶ ಮಾಡಲಿದ್ದೇವೆ. ಇದರ ಜೊತೆಗೆ ಪುತ್ತೂರಿನಲ್ಲಿ ಡ್ರೈನೇಜ್ ಪೆಸಿಲಿಟಿ, ನಗರದೊಳಗೆ ಕಟ್ ಕನ್ಚರ್ಷನ್ ಸಮಸ್ಯೆ ಪರಿಹಾರ , 94 ಸಿಯಲ್ಲಿ ಬಾಕಿ 3800 ಪೈಲ್ ಪೆಡಿಂಗ್ ಆಗಿರುವುದಕ್ಕೆ ಕ್ರಮ ಮಾಡಲಿದ್ದೇವೆ. ಇದಕ್ಕೆಲ್ಲ ಜನಾಶೀರ್ವಾದ ಬೇಕು ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಭ್ರಷ್ಟಾಚಾರಕ್ಕೆ ಕಡಿವಾಣ:
ಈ ಹಿಂದಿನ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುವುದು. ಆದರೆ ಶೇ. 100 ತಡೆಯಲು ಸಾದ್ಯವಿಲ್ಲ. ಆದರೂ ನಾನು ಭ್ರಷ್ಟಾಚಾರ ಆಗದಿದ್ದರೆ ಕಂಡಿತಾ ಭ್ರಷ್ಟಾಚಾರ ನಿಲ್ಲಿಸಬಹುದು ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ಕ್ಷೇತ್ರದ ಪ್ರಚಾರ ಸಮಿತಿ ಅಧ್ತಕ್ಷ ಭಾಸ್ಕರ್ ರೈ ಕೋಡಿಂಬಾಳ, ವಕ್ತಾರ ಅಮಳ ರಾಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.