ನಾಳೆ(ಮೇ 12) ನರಿಮೊಗರು ಎಲಿಕಾದಲ್ಲಿ ಶ್ರೀವರಮಹಾಲಕ್ಷ್ಮೀ ಸದನದ ಗೃಹಪ್ರವೇಶ

0

ಪುತ್ತೂರು: ನರಿಮೊಗರು ಗ್ರಾಮದ ಎಲಿಕಾದಲ್ಲಿ ದೇವಾನಂದ ಭಟ್‌ರವರು ನೂತನವಾಗಿ ನಿರ್ಮಿಸಿರುವ ಮನೆ ‘ಶ್ರೀವರಮಹಾಲಕ್ಷ್ಮೀ ಸದನ’ದ ಗೃಹಪ್ರವೇಶ ಹಾಗೂ ಶ್ರೀಚಂಡಿಕಾ ಹವನ ಮೇ 12ರಂದು ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, ಕುಮಾರಿ ಪೂಜೆ, ಸುಹಾಸಿನಿ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮೇ 13ರಂದು ಸಂಜೆ 6ರಿಂದ ಮಜಲುಮಾರು ಉಮಾಮಹೇಶ್ವರ ಭಜನಾ ಮಂಡಳಿ, ಉಜಿರೆ ಹಳೆಪೇಟೆ ವಿವೇಕಾನಂದ ನಗರ ಸರಸ್ವತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ 8.30ಕ್ಕೆ ಭಂಡಾರ ತೆಗೆಯುವುದು, 9 ಗಂಟೆಗೆ ಅನ್ನಸಂತರ್ಪಣೆ, ಬಳಿಕ ಕಲ್ಲುರ್ಟಿ ದೈವದ ನರ್ತನ ಸೇವೆ ನಡೆಯಲಿದೆ. ಮೇ.15ರಂದು ಸಂಕ್ರಮಣದ ಪ್ರಯುಕ್ತ ಮಧ್ಯಾಹ್ನ ಕಲ್ಲುರ್ಟಿ ದೈವದ ಅಗೇಲು ಸೇವೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here