




ಕಡಬ: ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಲು ದೂರದ ಊರಲ್ಲಿ ನೆಲೆಸಿರುವ ಮತ್ತು ಉದ್ಯೋಗ ಮಾಡಿಕೊಂಡಿರುವ ಜನರು ಮತದಾನ ಮಾಡಲು ತಮ್ಮ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ಕ್ಯಾಲಿಕಟ್ ನಿಂದ ದ್ವಿಚಕ್ರ ವಾಹನದಲ್ಲೇ ಕಡಬಕ್ಕೆ 270 ,ಕಿ.ಮೀ. ಕ್ರಮಿಸಿ ದಂಪತಿಗಳಿಬ್ಬರು ಆಗಮಿಸಿ ಸುದ್ದಿಯಾಗಿದ್ದಾರೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೋರಿಯಾರ್ ಸಮೀಪ ವಾಸವಾಗಿರುವ, ಪ್ರಸ್ತುತ ಕೇರಳದ ಕ್ಯಾಲಿಕಟ್ ನಲ್ಲಿ ಉದ್ಯೋಗ ದಲ್ಲಿರುವ ಗೋಪಾಲಕೃಷ್ಣ ಮತ್ತು ಧನ್ಯ ದಂಪತಿಗಳು ಹಕ್ಕು ಚಲಾಯಿಸಲು ಬಹು ದೂರ ದ್ವಿಚಕ್ರ ವಾಹನದಲ್ಲಿ ಬಂದವರು.
ಕೋಡಿಂಬಾಳ ಗ್ರಾಮದ ಮಡ್ಯಡ್ಕ 95 ನಂ. ಬೂತ್‌ನಲ್ಲಿ ಮತದಾನ ಮಾಡಿದ್ದಾರೆ. ಕ್ಯಾಲಿಕೆಟ್ ನಿಂದ ಮುಂಜಾನೆ 5:00ಗಂಟೆಗೆ ಹೊರಟು ಮಧ್ಯಾಹ್ನ 3:35ಕ್ಕೆ ಕೋಡಿಂಬಾಳ ಮತದಾನ ಕೇಂದ್ರ ತಲುಪಿರುವುದಾಗಿ ದಂಪತಿಗಳು ಮಾಹಿತಿ ನೀಡಿದ್ದಾರೆ.




ತಮ್ಮ ಊರಿನಲ್ಲಿದ್ದರೂ ಮತದಾನ ಮಾಡಲು ನಿರ್ಲಕ್ಷ್ಯ ವಹಿಸುವವರಿಗೆ ಈ ದಂಪತಿಗಳು ಮಾದರಿಯಾಗಿದ್ದಾರೆ.












