ಒಳಮೊಗ್ರು ಗ್ರಾಮದ ಚಿಲ್ಮೆತ್ತಾರು ಅಜ್ಜಿಕಲ್ಲು ಪರಿಸರದಲ್ಲಿ ಬಿರುಗಾಳಿ, ಅಪಾರ ಕೃಷಿ ಹಾನಿ

0

ಪುತ್ತೂರು: ಒಳಮೊಗ್ರು ಗ್ರಾಮದ ಚಿಲ್ಮೆತ್ತಾರು,ಅಜ್ಜಿಕಲ್ಲು ಪರಿಸರದಲ್ಲಿ ಗುಡುಗು ಸಹಿತ ಮಳೆ ಬಿರುಗಾಳಿ ಬೀಸಿದ ಪರಿಣಾಮ ಅಪಾರ ಕೃಷಿ ಹಾನಿಯುಂಟಾದ ಬಗ್ಗೆ ವರದಿಯಾಗಿದೆ.

ಮೇ.10 ರಂದು ಸಂಜೆ ಬೀಸಿದ ಭಾರಿ ಗಾಳಿ, ಮಳೆಗೆ ನೂರಾರು ಫಸಲುಭರಿತ ಅಡಿಕೆ , ತೆಂಗಿನ ಮರಗಳು ಧರೆಗುರುಳಿದ್ದು ಅಪಾರ ಕೃಷಿ ಹಾನಿಯುಂಟಾಗಿದೆ. ಚಿಲ್ಮೆತ್ತಾರು ಭಗವಾನ್ ದಾಸ್ ರೈ ಯವರು ಅಳವಡಿಸಿದ ಸೋಲಾರ್ ಬೇಲಿ ಇನ್ವರ್ಟರ್ ಸಿಸ್ಟಮ್‌ಗೆ ಸಿಡಿಲು ಬಡಿದು ಸಂಪೂರ್ಣ ಧ್ವಂಸಗೊಂಡಿದೆ. ಚಿಲ್ಮೆತ್ತಾರು ಶಶಿರಾಜ್ ರೈ ಯವರ ತೋಟದಲ್ಲಿ 25 ಅಡಿಕೆ ಮರ ಉರುಳಿ ಬಿದ್ದಿದ್ದು , ಪೈಪು ಲೈನ್‌ಗೆ ಹಾನಿ , ಜಗಜೀವನ್ ದಾಸ್ ರೈ ತೋಟದಲ್ಲಿ 30 ಅಡಿಕೆ ಮರಗಳು , ಸಂದೀಪ್ ರೈ ತೋಟದಲ್ಲಿ 20 ಅಡಿಕೆ ಮರ , ರತ್ನಾವತಿ ರೈ ಯವರ ತೋಟದಲ್ಲಿ 15 ಅಡಿಕೆ ಮರ , ಮೋಹನ್‌ರವರ ಕೃಷಿ ತೋಟದಲ್ಲಿನ ಅಡಿಕೆ ಮರಗಳು , ಸಂತೋಷ್ ಭಂಡಾರಿ ರವರ ತೋಟದಲ್ಲಿ 30 ಕ್ಕಿಂತ ಅಧಿಕ ಅಡಿಕೆ , 4 ತೆಂಗಿನ ಮರಗಳು , ಮೊಡಪ್ಪಾಡಿ ಸತೀಶ್ ರೈ ಯವರ ತೋಟದಲ್ಲಿ 15 ಅಡಿಕೆ ಮರಗಳು ನೆಲಕಚ್ಚಿವೆ ಎಂದು ವರದಿಯಾಗಿದೆ. ಮೊಡಪ್ಪಾಡಿ ಗುಲಾಬಿ ರೈ ಯವರ ಮನೆಯ ಮೇಲೆ ಅಡಿಕೆ ಮರ ಬಿದ್ದು ಮೇಲ್ಚಾವಣಿಗೆ ಹಾಗು ಹಂಚುಗಳಿಗೆ ಹಾನಿಯುಂಟಾದ ಬಗ್ಗೆ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here