ವಿಧಾನ ಸಭಾ ಚುನಾವಣೆ ಸಂಭಾವ್ಯ ಫಲಿತಾಂಶ-ಅಭ್ಯರ್ಥಿಗಳ ಅನಿಸಿಕೆ

0

ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ
ಪುತ್ತೂರು: ಈ ಬಾರಿ ಪುತ್ತೂರು ಕ್ಷೇತ್ರದಾದ್ಯಂತ ಕಾಂಗ್ರೆಸ್ ಹವಾ ಸೃಷ್ಟಿಯಾಗಿತ್ತು. ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ಅವಿರತ ಶ್ರಮದಿಂದಾಗಿ ಪ್ರತೀ ಬೂತ್ ಮಟ್ಟದಲ್ಲೂ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಿದ್ದೇವೆ. ದಿನದಲ್ಲಿ 18 ರಿಂದ 20 ಗಂಟೆ ಕಾರ್ಯಕರ್ತರು, ನಾಯಕರು ಹಗಲಿರುಳು ಕೆಲಸ ಮಾಡಿದ್ದಾರೆ. ಇದೆಲ್ಲದರ ಫಲವಾಗಿ ಮತ್ತು ಕಾಂಗ್ರೆಸ್‌ನ ಬಡವರ ಪರ ಇರುವ ಪ್ರಣಾಳಿಕೆಯಿಂದ ಈ ಬಾರಿ ಕಾಂಗ್ರೆಸ್ ಗೆಲ್ಲಲಿ ಎಂದು ಜನ ಆಶೀರ್ವಾದ ಮಾಡಿದ್ದಾರೆ. ಬೆಲೆ ಏರಿಕೆಯಿಂದ ಕಂಗಾಲಾದ ಬಡ ಜನತೆ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ ಎಂಬ ಪೂರ್ಣ ನಂಬಿಕೆ ಇದ್ದು ಈ ಬಾರಿ ಪುತ್ತೂರಿನಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.

-ಅಶೋಕ್ ಕುಮಾರ್ ರೈ, ಕಾಂಗ್ರೆಸ್ ಅಭ್ಯರ್ಥಿ

10 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆಲುವು
ನಮ್ಮ ಪಕ್ಷದ ಸಿದ್ದಾಂತ ಮತ್ತು ಬದ್ಧತೆಗೆ ಮೆಚ್ಚಿ ಮತದಾರರು ಪಕ್ಷದ ಗೆಲುವಿಗಾಗಿ ಮತ ನೀಡಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದಂತೆ ನಾವು ಸುಮಾರು 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇವೆ.ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ಯಾವತ್ತಿದ್ದರೂ ಪಕ್ಷದ ಸಿದ್ಧಾಂತಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ. ನಾನು ಪ್ರತಿ ಗ್ರಾಮಕ್ಕೂ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಕಾರ್ಯಕರ್ತರು ಉತ್ಸಾಹದಿಂದ ನಮಗೆ ಪ್ರೋತ್ಸಾಹ ನೀಡಿದ್ದಾರೆ. ಪ್ರತಿ ಮನೆ ಮನೆ ಸಂಪರ್ಕ ಮಾಡಿದ್ದಾರೆ. ಇವೆಲ್ಲ ಪಕ್ಷಕ್ಕೆ ಉತ್ತಮ ಫಲಿತಾಂಶ ನೀಡುತ್ತದೆ. ಯಾಕೆಂದರೆ ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂಬ ತತ್ವ ಸಿದ್ದಾಂತದ ಅಡಿಯಲ್ಲಿರುವ ಏಕೈಕ ಪಕ್ಷ ಬಿಜೆಪಿ. ಬಿಜೆಪಿ ಯಾವತ್ತಿದ್ದರೂ ನಂ.1ನೇ ಸ್ಥಾನದಲ್ಲಿ ಇರುತ್ತದೆ.

ಆಶಾ ತಿಮ್ಮಪ್ಪ, ಬಿಜೆಪಿ ಅಭ್ಯರ್ಥಿ

8-9 ಸಾವಿರ ಅಂತರದಲ್ಲಿ ಗೆಲುವು ನಮ್ಮದೆ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 8 ರಿಂದ 9 ಸಾವಿರ ಮತಗಳ ಅಂತರದಲ್ಲಿ ನಮ್ಮ ಗೆಲುವಾಗಲಿದೆ. ಈ ಗೆಲುವು ಕಾರ್ಯಕರ್ತರ ಗೆಲುವು. ಪ್ರತಿ ಹಂತದಲ್ಲೂ ಕಾರ್ಯಕರ್ತರ ಮನೆ ಮನೆ ಸಂಪರ್ಕ. ಅವರ ಪ್ರೋತ್ಸಾಹ, ಉತ್ಸಾಹದಿಂದ ಮತದಾರರ ಪೂರ್ಣ ಬೆಂಬಲದಿಂದಾಗಿ ನಮ್ಮ ಗೆಲುವು ನಿಶ್ಚಿತ. ಗೆಲುವಿನ ಬಳಿಕ ಪ್ರಣಾಳಿಕೆಯ ಭರವಸೆಯನ್ನು ಈಡೇರಿಸುವ ಕೆಲಸ ಮಾಡಲಿದ್ದೇವೆ. ಆರಂಭದಲ್ಲೇ ಕೆಲವು ಕಡೆ ಗ್ರಾಮಕ್ಕೆ ಭೇಟಿ ನೀಡುವಾಗ ತಡ ರಾತ್ರಿ ಆಗುತ್ತಿತ್ತು. ಅಂತಹ ಸಂದರ್ಭದಲ್ಲಿ ಕಾರ್ಯಕರ್ತರು ಉತ್ಸಾಹ ಕುಗ್ಗದೆ ನಮಗಾಗಿ ಕಾಯುತ್ತಿದ್ದರು. ಮತದಾರರು ಪ್ರೋತ್ಸಾಹ ನೀಡಿದ್ದಾರೆ. ಇದರ ಜೊತೆಗೆ ಚುನಾವಣೆ ಎದುರಿಸಲು ನಮಗೆ ಆರ್ಥಿಕ ತೊಂದರೆ ಆಗದಂತೆ ಕಾರ್ಯಕರ್ತರೇ ಪೂರ್ಣ ಸಹಕಾರ ನೀಡಿದ್ದಾರೆ. ಇವೆಲ್ಲವನ್ನು ನೋಡಿದಾಗ ನಮ್ಮ ಗೆಲುವು ನಿಶ್ಚಿತ.

ಅರುಣ್ ಕುಮಾರ್ ಪುತ್ತಿಲ, ಪಕ್ಷೇತರ ಅಭ್ಯರ್ಥಿ

ಜೆಡಿಎಸ್ ಪ್ರಬಲ ಪಕ್ಷವಾಗಿ ಬರಲಿದೆ
ಚುನಾವಣೆಯು ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತವಾಗಿ ನಡೆದಿದೆ. ಎಲ್ಲಾ ಪಕ್ಷಗಳಲ್ಲಿಯೂ ಗೆಲುವಿನ ಭರವಸೆಯಿದೆ. ಜೆಡಿಎಸ್ ಪಕ್ಷಕ್ಕೂ ಜನರಿಂದ, ಕಾರ್ಯಕರ್ತರಿಂದ ಉತ್ತಮ ಸ್ಪಂದನೆ, ಪ್ರೋತ್ಸಾಹಗಳು ದೊರೆತಿದ್ದು ಮುಂದಿನ ದಿನಗಳಲ್ಲಿ ಪ್ರಬಲ ಪಕ್ಷವಾಗಿ ಬರಲಿದೆ.

-ದಿವ್ಯಪ್ರಭಾ ಗೌಡ ಚಿಲ್ತಡ್ಕ, ಜೆಡಿಎಸ್ ಅಭ್ಯರ್ಥಿ

ನನಗೆ ಗೆಲ್ಲುವ ಭರವಸೆ ಇದೆ
ಯಾವುದೇ ಒಂದು ಅಹಿತಕರ ಘಟನೆ ನಡೆಯದೆ ಬಹಳ ಒಳ್ಳೆಯ ರೀತಿಯಲ್ಲಿ ಪುತ್ತೂರಿನಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಶೇ 80ಕ್ಕಿಂತ ಹೆಚ್ಚಿನ ಮತದಾರರು ತಮ್ಮ ಮುಂದಿನ ನಾಯಕನ ಆಯ್ಕೆಗಾಗಿ ಹಕ್ಕನ್ನು ಚಲಾಯಿಸಿದ್ದಾರೆ ಮತ್ತು ಬಹಳ ಉತ್ಸುಕದಿಂದ ಬೆಳಿಗ್ಗೆಯಿಂದ ಸಂಜೆ ತನಕ ಕ್ಷೇತ್ರದ ಪ್ರತಿಯೊಂದು ಬೂತ್ ನಲ್ಲೂ ಮತದಾರರು ಬಂದು ಮತದಾನ ಮಾಡಿದ್ದಾರೆ. ನಮಗೆ ಭರವಸೆಯಿದೆ ಮತದಾರರು ಈ ಸಲ ಬದಲಾವಣೆಗಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಡಾ. ವಿಶುಕುಮಾರ್ ಮತ ಹಾಕಿದ್ದಾರೆ. ನನಗೆ ಗೆಲ್ಲುವ ಭರವಸೆಯಿದೆ.

-ಡಾ. ವಿಶುಕುಮಾರ್ ಗೌಡ, ಪುತ್ತೂರು ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ

ಬಿಜೆಪಿ 67 ಸಾವಿರ ಮತ ಪಡೆದು ಗೆಲುವು ಸಾಧಿಸಲಿದೆ
ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 1,70,365 ಮತ ಚಲಾವಣೆ ಆಗಿದೆ. ಇದರಲ್ಲಿ ಬಿಜೆಪಿ 67 ಸಾವಿರ ಮತ ಪಡೆದು ಗೆಲುವು ಸಾಧಿಸಲಿದೆ. ಕಾಂಗ್ರೆಸ್ 65 ಸಾವಿರ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ 30 ಸಾವಿರ, ಎಸ್‌ಡಿಪಿಐ 4 ಸಾವಿರ, ಜೆಡಿಎಸ್ 2 ಸಾವಿರ, ಆಮ್‌ಆದ್ಮಿ, ಇತರ ಪಕ್ಷೇತರ ಸೇರಿ ಒಟ್ಟು 1 ಸಾವಿರ ಮತಗಳನ್ನು ಪಡೆಯಲಿದ್ದಾರೆ. ಸುಮಾರು 1,365 ಮತ ಹೆಚ್ಚುವರಿ ಎಲ್ಲಾ ಪಕ್ಷಗಳಿಗೂ ಹಂಚಿ ಹೋದರೂ ಬಿಜೆಪಿ ಗೆಲುವು ನಿಶ್ಚಿತ. ಯಾಕೆಂದರೆ ಪ್ರಜ್ಞಾವಂತ ಮತದಾರರು ನೂರಕ್ಕೆ ನೂರು ಬಿಜೆಪಿಗೆ ಮತ ಚಲಾಯಿಸಿದ್ದಾರೆ.

ರಾಜೇಶ್ ಬನ್ನೂರು, ಬಿಜೆಪಿ ಅಭ್ಯರ್ಥಿಯ ಚುನಾವಣಾ ಏಜೆಂಟ್

ಬಡವರ ಬಂಧು ಅಶೋಕ್ ರೈ ಗೆಲ್ತಾರೆ
ಈ ಸಲದ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಬಡವರ ಬಂಧು ಅಶೋಕ್ ಕುಮಾರ್ ರೈಯವರು ಭಾರೀ ಅಂತರದಿಂದ ಗೆಲುವು ಸಾಧಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಡ. ಏಕೆಂದರೆ ಅಶೋಕ್ ರೈಯವರಿಗೆ ಯಾವುದೇ ಹುದ್ದೆ ಇಲ್ಲದಿದ್ದರೂ ಅವರು ಮಾಡಿಕೊಂಡು ಬಂದಿರುವ ಸಮಾಜ ಸೇವೆ ಅವರ ಕೈ ಹಿಡಿಯಲಿದೆ.

ಕೆ.ಎಂ.ಹನೀ- ಮಾಡಾವು, ಮಾಜಿ ಸದಸ್ಯರು ಕೆಯ್ಯೂರು ಗ್ರಾಪಂ

20 ಸಾವಿರ ಮತಗಳ ಅಂತರದಿಂದ ಅರುಣ್ ಪುತ್ತಿಲ ಗೆಲುವು
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರುಣ್ ಪುತ್ತಿಲರವರ ಅಭಿಮಾನಿಯಾಗಿ ನಾನು ಅವರ ಬೆಂಬಲಕ್ಕೆ ನಿಂತಿದ್ದೇನೆ. ಖಂಡಿತವಾಗಿಯೂ ಅವರು ಸುಮಾರು ೨೦ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬ ನಂಬಿಕೆ ಇದೆ. ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ ತಾಲೂಕಿನ ಅಭಿವೃದ್ಧಿಗೆ ಅವರು ಕೈಗೊಂಡ ನಿರ್ಧಾರಗಳು ಜನಮೆಚ್ಚುವಂತವು ಆಗಿದೆ. ಸಮಸ್ಯೆಗಳನ್ನು ಬಗೆಹರಿಸಬಲ್ಲ ವ್ಯಕ್ತಿತ್ವ ಹೊಂದಿರುವ ಅರುಣ್ ಪುತ್ತಿಲರವರ ಗೆಲುವಿಗಾಗಿ ನಾನು ಹಾಗೂ ನಮ್ಮ ಎಲ್ಲಾ ಕಾರ್ಯಕರ್ತರು ಅವರ ನಾಮಪತ್ರ ಸಲ್ಲಿಕೆ ಬಳಿಕದಿಂದ ಈ ತನಕವೂ ಶ್ರಮ ಪಟ್ಟಿದ್ದೇವೆ. ಈ ಸಲದ ಚುನಾವಣೆಯಲ್ಲಿ ಪುತ್ತಿಲರವರು ಜಯ ಗಳಿಸುತ್ತಾರೆ.

ಪುಷ್ಪಾ, ಅಧ್ಯಕ್ಷರು ಮುಂಡೂರು ಗ್ರಾಪಂ

500 ಮತಗಳ ಅಂತರದಿಂದಾದರೂ ಬಿಜೆಪಿ ಗೆಲ್ಲುತ್ತೆ
ಈ ಹಿಂದಿನ ಶಾಸಕರು ಮಾಡಿರುವ ಅಭಿವೃದ್ಧಿ, ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಕೇಂದ್ರ, ರಾಜ್ಯ ಸರಕಾರದ ಜನಪರ ಕೆಲಸ ಕಾರ್ಯಗಳಿಂದಾಗಿ ಈ ಸಲ ಮತ್ತೆ ಜನ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರವರು 500 ಮತಗಳ ಅಂತರದಿಂದಾದರೂ ಗೆಲುವು ಸಾಧಿಸುತ್ತಾರೆ.

ಮಹೇಶ್ ರೈ ಕೇರಿ, ಒಳಮೊಗ್ರು ಗ್ರಾಪಂ ಸದಸ್ಯ

25 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‌ಗೆ ಗೆಲುವು
ಜನ ಬದಲಾವಣೆಯನ್ನು ಬಯಸಿದ್ದಾರೆ. ಈ ವರ್ಷ ಖಂಡಿತವಾಗಿಯೂ ಪುತ್ತೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಸುಮಾರು 25 ಸಾವಿರ ಮತಗಳ ಅಂತರದಿಂದ ಗೆಲುವನ್ನು ಸಾಧಿಸುತ್ತಾರೆ ಎಂಬ ಭರವಸೆ ಇದೆ.

ರಾಮಚಂದ್ರ ಸೊರಕೆ, ಮುಂಡೂರು ಗ್ರಾಪಂ ಮಾಜಿ ಸದಸ್ಯರು

5-6ಸಾವಿರ ಮತಗಳ ಅಂತರದಿಂದ ಬಿಜೆಪಿಗೆ ಗೆಲುವು
ಬಿಜೆಪಿಯಲ್ಲಿ ಹಿರಿಯರ ಮಾರ್ಗದರ್ಶನವಿದೆ. ಅದರ ಪ್ರಕಾರ ಪಕ್ಷದ ಕಾರ್ಯಕರ್ತರು ನಡೆದುಕೊಳ್ಳುತ್ತಾರೆ. ಅವರು ಮತದಾರರ ಮನಸ್ಸನ್ನು ಗೆಲ್ಲುತ್ತಾರೆ. ಭರವಸೆಯನ್ನು ಈಡೇರಿಸಿರುವ ಬಿಜೆಪಿ ಸರಕಾರ ಬೇಕೆಂಬುದು ಜನರ ಅಪೇಕ್ಷೆಯೂ ಆಗಿದೆ. ಹಾಗಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಸುಮಾರು 5 ರಿಂದ 6ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ.

ಚಂದ್ರಶೇಖರ್ ರಾವ್ ಬಪ್ಪಳಿಗೆ, ಬಿಜೆಪಿ ಮಾಧ್ಯಮ ವಕ್ತಾರ

ಸಾವಿರ ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‌ಗೆ ಗೆಲುವು
ಜನರು ಬದಲಾವಣೆಯನ್ನು ಬಯಸಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆ ಬೇಕು ಎಂಬ ತೀರ್ಮಾನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಪುತ್ತೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಸಾವಿರ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಡ.

ರಕ್ಷಿತ್ ರೈ ಮುಗೇರು, ಉಸ್ತುವಾರಿ ಒಳಮೊಗ್ರು ಗ್ರಾಮ ಕಾಂಗ್ರೆಸ್

ಬಿಜೆಪಿ ಗೆಲುವು ನಿಶ್ಚಿತ
ನಾನು ಕಳೆದ ಹಲವು ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಈ ಸಲದ ಚುನಾವಣೆಯ ಬಗ್ಗೆ ಜನರಲ್ಲಿ ಬಹಳಷ್ಟು ಕುತೂಹಲ ಇದೆ. ಆದರೆ ಕಾರ್ಯಕರ್ತರ ಹುಮ್ಮಸ್ಸು ಮತದಾರನ ಒಲವು ಇವೆಲ್ಲವನ್ನೂ ನೋಡಿದಾಗ ಮತ್ತೆ ಪುತ್ತೂರಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿಯೇ ಸಾಽಸುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಸಂಶಯ ಬೇಡ.

ರಾಜೇಶ್ ರೈ ಪರ್ಪುಂಜ, ಅಧ್ಯಕ್ಷರು ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರ

30 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‌ಗೆ ಗೆಲುವು
ಜನರು ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ. ಈ ಹಿಂದಿನ ಸರಕಾರದ ಆಡಳಿತದಿಂದ ಬೇಸತ್ತು ಹೋಗಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ಬೇಕಾಗಿದೆ. ಈ ಸಲ ಪುತ್ತೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಅಂದಾಜು 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಅವರು ಶಾಸಕರಾದರೆ ತಾಲೂಕು ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಹಾಗೂ ಭ್ರಷ್ಟಾಚಾರ ಮುಕ್ತವಾಗುತ್ತದೆ.

ಜಯಂತ ಪೂಜಾರಿ ಕೆಂಗುಡೇಲು, ಸದಸ್ಯರು ಕೆಯ್ಯೂರು ಗ್ರಾಪಂ

ಬಿಜೆಪಿಗೆ 8 ಸಾವಿರ ಮತಗಳ ಅಂತರದಿಂದ ಗೆಲುವು
ಒಳ್ಳೆಯ ರೀತಿಯಲ್ಲಿ ಮತದಾನ ನಡೆದಿದೆ. ನಮ್ಮ ನಿರೀಕ್ಷೆಯ ಪ್ರಕಾರ ಸುಮಾರು 8 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರವರು ಗೆಲುವು ಸಾಧಿಸುತ್ತಾರೆ.

ಜಯರಾಮ ರೈ ಮಿತ್ರಂಪಾಡಿ, ಮಾಜಿ ಅಧ್ಯಕ್ಷರು ಬೂತ್ ಸಮಿತಿ ಕೆದಂಬಾಡಿ

15 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‌ಗೆ ಗೆಲುವು
ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಸುಮಾರು 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬ ಭರವಸೆ ಇದೆ. ಏಕೆಂದರೆ ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಜನರು ತಿಳಿದುಕೊಂಡಿದ್ದಾರೆ. ಒಂದು ಒಳ್ಳೆಯ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕಾಂಗ್ರೆಸ್ ಅನ್ನು ಈ ಸಲ ಜನರು ಗೆಲ್ಲಿಸುತ್ತಾರೆ.

ಸಾರ್ಥಕ್ ರೈ, ಶೇಖಮಲೆ ಬೂತ್ ಅಧ್ಯಕ್ಷರು

ಸುಳ್ಯ, ಪುತ್ತೂರಿನಲ್ಲಿ ಬಿಜೆಪಿಗೆ ಗೆಲುವು
ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ 22 ಸಾವಿರ ಮತಗಳ ಅಂತರದಿಂದ ಹಾಗೂ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಎರಡೂವರೇ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ. ಸುಳ್ಯದಲ್ಲಿ ಕಾಂಗ್ರೆಸ್ 2ನೇ ಸ್ಥಾನ ಪಡೆದುಕೊಳ್ಳಲಿದೆ. ಪುತ್ತೂರಿನಲ್ಲಿ ಕಾಂಗ್ರೆಸ್ 2ನೇ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್‌ಕುಮಾರ್ ಪುತ್ತಿಲ 3ನೇ ಸ್ಥಾನ ಪಡೆದುಕೊಳ್ಳಲಿದ್ದಾರೆ. ಈ ಹಿಂದೆ ಪುತ್ತೂರು ಹಾಗೂ ಸುಳ್ಯ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೇ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ. ಪಕ್ಷದ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಲಂಚ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಯತ್ನಿಸಲಿದೆ.

-ಬಾಲಕೃಷ್ಣ ಬಾಣಜಾಲು, ಜಿ.ಪಂ.ಮಾಜಿ ಸದಸ್ಯರು

ಪುತ್ತಿಲರಿಗೆ 5-10 ಸಾವಿರ ಮತಗಳ ಅಂತರದಲ್ಲಿ ಗೆಲುವು
ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರವಾಗಿ ಅವರ ಅಭಿಮಾನಿ, ಹಿತೈಷಿಗಳು ಹಾಗೂ ಕಾರ್ಯಕರ್ತರೆಲ್ಲರೂ ಅತ್ಯಕ ಸಂಖ್ಯೆಯಲ್ಲಿ ಸ್ವ-ಇಚ್ಚೆಯಿಂದ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಜನರಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ಈ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಜಯಗಳಿಸುತ್ತಾರೆ ಎಂಬ ಮಾತು ಚುನಾವಣೆಯ ಬಳಿಕ ಜನ ಸಾಮಾನ್ಯರಿಂದ ಕೇಳಿ ಬರುತ್ತಿದ್ದು ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ 5000-10000 ಮತಗಳ ಅಂತರದಲ್ಲಿ ಜಯಗಳಿಸಲಿದ್ದಾರೆ.

-ಡಾ.ಸುರೇಶ್ ಪುತ್ತೂರಾಯ

ಕಾಂಗ್ರೆಸ್ ಖಂಡಿತ ಗೆಲ್ಲಲಿದೆ
ಈ ಭಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯಲ್ಲಿಯೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಕಾರ್ಯಕರ್ತರೆಲ್ಲರೂ ಅತ್ಯಂತ ಉತ್ಸುಕತೆಯಿಂದ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಮನೆ ಮನೆ ಭೇಟಿ, ಮತ ಪ್ರಚಾರಗಳೆಲ್ಲವೂ ಉತ್ತಮ ರೀತಿಯಲ್ಲಿ ನಡೆದಿದೆ. ಜನರಿಂದಲೂ ಉತ್ತಮ ರೀತಿಯಲ್ಲಿ ಸ್ಪಂದನೆ ದೊರೆತಿದ್ದು ಕಾಂಗ್ರೆಸ್‌ನ ಮತಗಳಲ್ಲಿ ಉಳಿಸಿಕೊಂಡಿದ್ದೇವೆ. ಅಲ್ಲದೆ ಅಶೋಕ್ ಕುಮಾರ್ ರೈಯವರ ಸಮಾಜಸೇವೆ, ವರ್ಚಸ್ಸುಗಳಿಂದಾಗಿ ಜನರು ಈ ಬಾರಿ ಕಾಂಗ್ರೆಸ್ ಬೆಂಬಲಿಸಲಿದ್ದು ಖಂಡಿತವಾಗಿಯೂ ಜಯಗಳಿಸಲಿದೆ.

-ಕೃಷ್ಣಪ್ರಸಾದ್ ಆಳ್ವ,
ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಟಕಪೂರ್ವ ಕಾರ್ಯದರ್ಶಿ

ಈ ಬಾರಿ ಪುತ್ತಿಲ ಮೇಲುಗೈ
ಈ ಬಾರಿ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪಽಸಿದ ನಮ್ಮ ಆತ್ಮೀಯರಾದ ಅರುಣ್ ಕುಮಾರ್ ಪುತ್ತಿಲರವರೇ ಮೇಲುಗೈ ಸಾಧಿಸುವ ಭರವಸೆ ಇದೆ. ನಮ್ಮ ಕಷ್ಟ- ಸುಖ ನೋವು ನಲಿವುಗಳಲ್ಲಿ ನಮ್ಮ ಜೊತೆಗೆ ಇರುವ ಇವರು ಜಯಶಾಲಿಯಾಗಿ ಬರಲಿ ಎಂದು ನನ್ನ ಆಶಯ.

ಪುರುಷೋತ್ತಮ ಮಣಿಯಾಣಿ, ಮುಂಡೋತ್ತಡ್ಕ ಅಜ್ಜಿಕಲ್ಲು

ಪುತ್ತೂರಿಗೆ ಶಾಸಕರಾಗುವ ಎಲ್ಲಾ ಲಕ್ಷಣ ಪುತ್ತಿಲರವರಿಗಿದೆ
ಪುತ್ತಿಲರು ಒಬ್ಬ ಜನಸಾಮಾನ್ಯರ ನಾಯಕ ನಾನು ನೋಡಿರೋ ಹಾಗೆ ಜಾತಿ ಧರ್ಮ ಭೇದಭಾವ ಬಿಟ್ಟು ಮಾನವೀಯತೆ ಗುಣವುಳ್ಳ ವ್ಯಕ್ತಿತ್ವ ಇವರದು. ಎಲ್ಲಿ ಏನು ಆದರೂ ಆಟೋ ಚಾಲಕರು ಹೇಗೆ ಸಹಾಯಕ್ಕೆ ಮಾನವೀಯತೆ ಮೆರೆಯುತ್ತಾರೋ ಹಾಗೆಯೇ ಅರುಣ್ ಕುಮಾರ್ ಕೂಡ ಧಾವಿಸಿ ಬರುತ್ತಾರೆ. ನನ್ನ ಪ್ರಕಾರ ಪುತ್ತೂರಿಗೆ ಶಾಸಕ ಆಗುವ ಎಲ್ಲಾ ಲಕ್ಷಣ ಇವರಿಗಿದೆ.

ಸೂರಜ್ ಶೆಟ್ಟಿ ನಾಯಿಲ. ರಿಕ್ಷಾ ಚಾಲಕರು

3 ರಿಂದ 8 ಸಾವಿರ ಮತಗಳ ಅಂತರದಿಂದ ಬಿಜೆಪಿಗೆ ಗೆಲುವು
ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು 3 ರಿಂದ 8 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಽಸಲಿದ್ದಾರೆ. ಕಳೆದ ಅವಽಯಲ್ಲಿ ಶಾಸಕ ಸಂಜೀವ ಮಠಂದೂರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಂದ ಹಾಗೂ ಕೇಂದ್ರ, ರಾಜ್ಯದಲ್ಲಿನ ಬಿಜೆಪಿ ಸರಕಾರದ ಸಾಧನೆಗಳನ್ನು ಮೆಚ್ಚಿಕೊಂಡು ಜನ ಬಿಜೆಪಿ ಬೆಂಬಲಿಸಿದ್ದಾರೆ. ಗೊಂದಲಗಳಿದ್ದರೂ ಕಾರ್ಯಕರ್ತರು ವಿಚಲಿತರಾಗದೇ ಸವಾಲಿನ ರೀತಿಯಲ್ಲಿ, ಸಂಘಟನಾತ್ಮಕವಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ. ಆದ್ದರಿಂದ ಆಶಾ ತಿಮ್ಮಪ್ಪ ಅವರ ಗೆಲುವು ಖಚಿತವಾಗಿದೆ. ಅವರು ಕ್ಷೇತ್ರದಲ್ಲಿ ಲಂಚ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿದ್ದಾರೆ.
ಮುಕುಂದ ಗೌಡ ಬಜತ್ತೂರು

ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು


LEAVE A REPLY

Please enter your comment!
Please enter your name here