ಕೋವಿ ಅಡಮಾನ ಶುಲ್ಕ ಪಾವತಿ ಆದೇಶ ರದ್ದತಿಗೆ ಸರಕಾರದ ಮೇಲೆ ಒತ್ತಡ ತರುವೆ- ಶಾಸಕ ಅಶೋಕ್ ಕುಮಾರ್ ರೈ

0


ಪುತ್ತೂರು: ಚುನಾವಣೆಯ ಸಂದರ್ಭದಲ್ಲಿ ಠಾಣೆಯಲ್ಲಿ ಅಡಮಾನಿಟ್ಟ ಕೋವಿಗೆ ಶುಲ್ಕ ಪಾವತಿಗೆ ಹಿಂದಿನ ಬಿಜೆಪಿ ನೇತೃತ್ವದ ಬಸವರಾಜ ಬೊಮ್ಮಾಯಿ ಸರಕಾರ ಆದೇಶ ನೀಡಿದ್ದರು. ಇದರಿಂದ ರೈತರಿಗೆ ತೊಂದರೆಯಾಗಿದ್ದು ಶುಲ್ಕ ಪಾವತಿ ಆದೇಶ ರದ್ದುಮಾಡುವಂತೆ ಸರಕಾರದ ಗಮನಕ್ಕೆ ತರುವುದಾಗಿ ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ಹೇಳಿದ್ದಾರೆ.


ಚುನಾವಣೆಯ ಸಂದರ್ಭದಲ್ಲಿ ಕೋವಿ ಇರುವ ರೈತರು ತಮ್ಮ ಕೋವಿಯನ್ನು ಠಾಣೆಯಲ್ಲಿ ಅಡಮಾನ ಇಡಬೇಕಾಗುತ್ತದೆ. ಅಡಮಾನಿಟ್ಟ ಕೋವಿಯನ್ನು ಮರಳಿ ಪಡೆಯುವಲ್ಲಿ 200 ರೂ ರೈತರಿಂದ ಶುಲ್ಕ ಪಡೆದುಕೊಳ್ಳುವಂತೆ ಬಿಜೆಪಿ ಸರಕಾರ ಆದೇಶವನ್ನು ನೀಡಿತ್ತು. ಜಿಲ್ಲೆಯಲ್ಲಿ ಕೃಷಿಕರು ತಮ್ಮ ಕೃಷಿ ರಕ್ಷಣೆಯ ಉದ್ದೇಶದಿಂದ ಕೋವಿಯನ್ನು ಇಟ್ಟುಕೊಳ್ಳುತ್ತಾರೆ. ಪ್ರತೀ ಚುನಾವಣೆಯ ಸಂದರ್ಭದಲ್ಲಿ ಕೋವಿಯನ್ನು ಠಾಣೆಯಲ್ಲಿ ಇಡಬೇಕಾಗುತ್ತದೆ. ಚುನಾವಣೆ ಮುಗಿದ ಬಳಿಕ ಅದನ್ನು ಮರಳಿ ಪಡೆದುಕೊಳ್ಳಬೇಕಾಗುತ್ತದೆ. ಈ ನಿಯಮ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು ರೈತರು 200 ಶುಲ್ಕ ಪಾವತಿಯ ವಿಷಯದ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದ ಆ ವೇಳೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು ಹಿಂದಿನ ಸರಕಾರದ ಆದೇಶದಂತೆ ನಾವು ಶುಲ್ಕ ವಸೂಲಿ ಮಾಡುತ್ತಿದ್ದೇವೆ. ಶುಲ್ಕ ರದ್ದತಿ ಮಾಡಲು ಜಿಲ್ಲಾಧಿಕಾರಿಗಳಿಗೆ ಅವಕಾಶವಿಲ್ಲ, ಇದು ಸರಕಾರಿ ಮಟ್ಟದಲ್ಲಿ ಆಗಬೇಕಾದ ಕೆಲಸವಾಗಿದೆ ಎಂದು ತಿಳಿಸಿದ್ದು ಈ ಕಾರಣಕ್ಕೆ ಶುಲ್ಕ ವಸೂಲಿ ರದ್ದು ಮಾಡುವಂತೆ ತಾನು ಸರಕಾರದ ಗಮನಕ್ಕೆ ತರಲಿದ್ದೇನೆ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಕೋವಿಯನ್ನು ರೈತರು ಅಡಮಾನು ಇಡದಂತೆ ಕ್ರಮಕೈಗೊಳ್ಳುವ ಬಗ್ಗೆಯೂ ಮನವಿ ಮಾಡಲಿದ್ದೇನೆ ಎಂದು ಹೇಳಿದರು.

LEAVE A REPLY

Please enter your comment!
Please enter your name here