ಜೆ.ಇ.ಇ. ಆರ್ಕಿಟೆಕ್ಚರ್ 2023 ಅಂಬಿಕಾ ಕಾಲೇಜಿಗೆ ರಾಷ್ಟ್ರಮಟ್ಟದಲ್ಲಿ 284ನೇ ರ‍್ಯಾಂಕ್

0

ಪುತ್ತೂರು: ಆರ್ಕಿಟೆಕ್ಚರ್ ಹಾಗೂ ಪ್ಲಾನಿಂಗ್ ಕೋರ್ಸುಗಳಿಗೆ ನಡೆಸಲಾಗುವ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿದ್ದು, ಪುತ್ತೂರಿನ ಪ್ರತಿಷ್ಠಿತ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಶ್ಯಮಂತ್ ಕುಮಾರ್ ಸಿ ಕೆ ರವರು B.Arch. ವಿಭಾಗದಲ್ಲಿ 284ನೇ ರ‍್ಯಾಂಕ್ (99.5612 ಪರ್ಸಂಟೈಲ್) ಗಳಿಸುವ ಮೂಲಕ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಇದಲ್ಲದೆ ಇವರು B. Planning ವಿಭಾಗದಲ್ಲಿ 775ನೇ ರ‍್ಯಾಂಕ್ ಗಳಿಸಿದ್ದು ಇವರ ಸಾಧನೆಗೆ ಕಾಲೇಜಿನ ಸಂಚಾಲಕರು, ಕೋಶಾಧಿಕಾರಿಗಳು, ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಹರ್ಷ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here