ಆಲಂಕಾರು ಶ್ರೀ ಭಾರತಿ ಇಂಗ್ಲೀಷ್ ಮಾಧ್ಯಮ ಶಾಲೆ ಉದ್ಘಾಟನೆ

0


ಆಲಂಕಾರು: ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಭಾರತಿ ಇಂಗ್ಲೀಷ್ ಮಾಧ್ಯಮ ಶಾಲೆ ಉದ್ಘಾಟನೆಗೊಂಡಿತ್ತು. ಮಂಗಳೂರಿನ ಶಾರಾದಾ ಗ್ರೂಪ್ ಆಫ್ ಇನ್ಸ್ ಸ್ಟಿಟ್ಯೂಷನ್ ಅಧ್ಯಕ್ಷರಾದ ಡಾ.ಎಂ.ಬಿ ಪುರಾಣಿಕ್ ಶ್ರೀ ಭಾರತಿ ಇಂಗ್ಲೀಷ್ ಮಾಧ್ಯಮ ಶಾಲೆಯ ಉದ್ಘಾಟನೆಯನ್ನು ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ದ.ಕ ಜಿಲ್ಲೆ ಶಿಕ್ಷಣಕ್ಕೆ ಹೆಸರುವಾಸಿಯಾದ ಜಿಲ್ಲೆ. ಶಿಕ್ಷಣ ಸಂಸ್ಥೆಗಳು ಸಮಾಜದ ಅಸ್ತಿ ಇದ್ದಂತೆ. ಕೋವಿಡ್ ನಿಂದಾಗಿ ಶಿಕ್ಷಣ ಸಂಸ್ಥೆಗಳು ಅರ್ಥಿಕ ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂಕಷ್ಟವನ್ನು ಸಮಾಜ ಸಧೃಡವಾಗಿ ನಿಭಾಯಿಸಬೇಕು. ಆಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆ ಇಂಗ್ಲೀಷ್ ಮಾಧ್ಯಮವನ್ನು ಪ್ರಾರಂಭಿಸಿದ್ದು ಸಂತೋಷದ ವಿಚಾರವಾಗಿದ್ದು ಗ್ರಾಮೀಣ ಭಾಗದ ಜನರು ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದ ಪುರಾಣಿಕ್ ಭಾರತೀಯ ಸಂಸ್ಕೃತಿಯ, ವೈವಿಧ್ಯತೆಯ, ವೈಚಾರಿಕವಾಗಿ ವಿಶೇಷತೆಯನ್ನು ಕಲಿಸುವ ವಿದ್ಯಾಸಂಸ್ಥೆಯಾಗಿ ಬೆಳೆಯಲಿ ಎಂದು ಶುಭಹಾರೈಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಮಾತೃಭಾಷೆಗೆ ಅತೀ ಸುಲಭದಲ್ಲಿ ಕಲಿಯುವ ಶಕ್ತಿ ಇದೆ. ಪ್ರಾರಂಭದ ಐದು ವರ್ಷ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿ ನಂತರ ಹೊರ ಜಗತ್ತಿಗೆ ಬೇಕಾಗುವಂತಹ ಭಾಷೆಯಲ್ಲಿ ಶಿಕ್ಷಣ ನೀಡಲಾಗುವುದು ಎಂದು ಹೇಳಿದ ಅವರು ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು, ನಮ್ಮ ದೃಷ್ಟಿಕೋನವನ್ನು ಕೊಟ್ಟು, ನಮ್ಮ ಸಭ್ಯತೆ, ಶ್ರೇಷ್ಠತೆಯನ್ನು ತಿಳಿಸಿ ಮುಂದಿನ ವೈಜ್ಞಾನಿಕ ಸವಾಲುಗಳನ್ನು ಎದುರಿಸುವ ಶಕ್ತಿತುಂಬುವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕೆಂದು ಹೇಳಿದರು. ಈ ದೇಶದಲ್ಲಿ ಎಲ್ಲರಿಗೂ ಭಗವದ್ಗೀತೆಯ ಶಿಕ್ಷಣ ಸಿಗಬೇಕು, ಎಲ್ಲರೂ ಹಿಂದುತ್ವದ ಅಧಾರದಲ್ಲಿ ಬೆಳೆಯಬೇಕು ಎಂದು ಹೇಳಿದ ಅವರು ಶ್ರೀ ಭಾರತಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಶುಭಹಾರೈಸಿದರು.

ಮಂಗಳೂರು ಮಹಾನಗರ ಸಹಸಂಘ ಚಾಲಕ ಮತ್ತು ಗೋದ್ರೆಜ್ ಕಂಪೆನಿಯ ಅಧಿಕೃತ ಡೀಲರ್ ಸುನಿಲ್ ಆಚಾರ್ ಶಾಲಾ ಕ್ಯೂ.ಆರ್.ಕೋಡ್ ಹಾಗೂ ಶಾಲಾ ಮ್ಯಾನೇಜ್ ಮೆಂಟ್ ಸಾಪ್ಟ್ ವೇರ್ ಬಿಡುಗಡೆಗೊಳಿಸಿದರು. ಶ್ರೀಮತಿ ಪ್ರಕಾಶಿನಿ .ವಿ.ಶೆಟ್ಟಿ ಮರುವಂತಿಲ ಅವರ ಪುತ್ರ ಕೊಡುಗೆಯಾಗಿ ನೀಡಿದ ಪ್ರಾಜೆಕ್ಟರ್ ನ್ನು ಬಿಡುಗಡೆಗೊಳಿಸಿ ಶಾಲೆಗೆ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಸಾಪ್ಟ್ ವೇರ್ ಬಗ್ಗೆ ಚಂದ್ರಶೇಖರ್ ಮತ್ತು ಪ್ರಾಜೆಕ್ಟರ್‌ ಬಗ್ಗೆ ಚೇತನ್ ಮಾಹಿತಿ ನೀಡಿದರು. ತಿಮ್ಮಪ್ಪ ಗೌಡ ಕುಂಡಡ್ಕ ಕನ್ನಡ ಮಾಧ್ಯಮದ ಮೂರು ಮಕ್ಕಳ ದತ್ತಿನಿಧಿ ಮೊತ್ತದ ಚೆಕ್ ನ್ನು ಶಾಲೆಗೆ ಹಸ್ತಾಂತರಿಸಿದರು. ಶಾಲಾ ಅಡಳಿತ ಮಂಡಳಿ ಅಧ್ಯಕ್ಷರಾದ ಸುರೇಶ್ ಕುಡೂರು ಸ್ವಾಗತಿಸಿ, ಸಂಚಾಲಕರಾದ ಗಂಗಾಧರ ಗೌಡ ಕುಂಡಡ್ಕ ಪ್ರಾಸ್ತವಿಕವಾಗಿ ಮಾತನಾಡಿದರು. ಚಂದ್ರಹಾಸ ಕೆ.ಸಿ ಕಾರ್ಯಕ್ರಮ ನಿರೂಪಿಸಿ, ಶಾಲಾ ಮುಖ್ಯಗುರುಗಳಾದ ಸತೀಶ್ ಜಿ. ಆರ್ ಧನ್ಯವಾದ ಸಮರ್ಪಿಸಿದರು.

ವೇದಿಕೆಯಲ್ಲಿ ಪ್ರಭಾರ ಮುಖ್ಯಮಾತಾಜಿ ಆಶಾ ಎಸ್ ರೈ, ಅಡಳಿತ ಮಂಡಳಿಯ ಗೌರವಾಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು, ಉಪಾದ್ಯಕ್ಷ ಈಶ್ವರ ಗೌಡ ಪಜ್ಜಡ್ಕ, ಕಾರ್ಯದರ್ಶಿ ಇಂದುಶೇಖರ ಶೆಟ್ಟಿ, ಕೋಶಾಧಿಕಾರಿ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಪೋಷಕರು, ಭೋದಕ, ಭೋದಕೇತರ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here